ಸುದ್ದಿಗಳು

“ಬ್ಲರ್ ಆಫ್ ಗ್ರೇಟ್ ಮ್ಯಾಜಿಕ್”

ನನ್ನ ಸ್ನೇಹಿತ, ಶಿಕ್ಷಕ, ನನಗಾಗಿ ಹುಟ್ಟಿದ ನಾಗಚೈತನ್ಯ

ಹೈದರಾಬಾದ್,24:  ಟಾಲಿವುಡ್ ನ ಹ್ಯಾಂಡ್ ಸಮ್ ನಟ ನಾಗ ಚೈತನ್ಯ ಅಕ್ಕಿನೇನಿಗೆ ಶುಕ್ರವಾರ ಹುಟ್ಟು ಹಬ್ಬದ ಸಂಭ್ರಮ.. 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಟಾಲಿವುಡ್ ಹಾಟ್ ಬೆಡಗಿ ಸಮಂತಾ ಅಕ್ಕಿನೇನಿ ತಮ್ಮ ಪತಿ,  ನಾಗಚೈತನ್ಯ ಅವರ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಹಾಕಿ ಶುಭಾಶಯ ತಿಳಿಸಿದ್ದಾರೆ.

ನನಗಾಗಿ ಹುಟ್ಟಿದ ನಾಗಚೈತನ್ಯ

ನಾಗಚೈತನ್ಯ ಜೊತೆಗಿರುವ ಬ್ಲರ್ ಫೋಟೋವನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿದ್ದು ನಾಗಚೈತನ್ಯ ಅವರಿಗೆ ಶುಭಾಶಯ ತಿಳಿಸಿದ್ದಾರೆ. “ಬ್ಲರ್ ಆಗಿರುವ ಮ್ಯಾಜಿಕ್ ಇದು. ನನ್ನ ಸ್ನೇಹಿತ, ಶಿಕ್ಷಕ, ನನಗಾಗಿ ಹುಟ್ಟಿದ ನಾಗಚೈತನ್ಯನಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಸಮಂತಾ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಫೋಟೋವನ್ನು ನಾಗಚೈತನ್ಯ ಬರ್ತ್ ಡೇ ಪಾರ್ಟಿಯಲ್ಲಿ ಕ್ಲಿಕ್ಕಿಸಲಾಗಿದೆ. ಇದಕ್ಕೆ ಈಗಾಗಳೇ ಅಪಾರ ಮೆಚ್ಚುಗೆ ಸಿಕ್ಕಿದ್ದು ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ..

 

Tags