ಸುದ್ದಿಗಳು

ರಜಿನಿಯ ‘2.0’ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ ಅಕ್ಷಯ್ ಕುಮಾರ್

ಮುಂಬೈ, ಸೆ.12: ಸದ್ಯ ರಜಿನಿಕಾಂತ್ ಬಹು ನಿರೀಕ್ಷಿತ ಸಿನಿಮಾ ‘೨.೦’ ಇನ್ನೇನು ಬಿಡುಗಡೆಗೆ ತಯಾರುಗುತ್ತಿದೆ. ಗೌರಿ ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಸಿನಿಮಾ ತಂಡ ಟೀಸರ್ ಬಿಡುಗಡೆ ಮಾಡಲಿದೆ. ಈ ಬೆನ್ನಲ್ಲೇ ನಟ ಅಕ್ಷಯ್ ಕುಮಾರ್ ಸಿನಿಮಾ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದಿಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ.ಬಹುಕೋಟಿ ವೆಚ್ಚದ ಸಿನಿಮಾ

ಹೌದು, ರಜಿನಿಯ ಬಹು ನಿರೀಕ್ಷಿತ ಸಿನಿಮಾ ‘೨.೦’ ಇನ್ನೇನು ಬಿಡುಗಡೆ ಹಂತ ತಲುಪಿದೆ. ಜನವರಿಯಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ದತೆ ನಡೆಸಿದೆ. ಗೌರಿ-ಗಣೇಶ ಹಬ್ಬಕ್ಕೆ ಟೀಸರ್ ಕೂಡ ರೆಡಿಯಾಗಿದೆ. ಈ ನಿಟ್ಟಿನಲ್ಲಿ ಅಕ್ಷಯ್ ಕುಮಾರ್ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಖರ್ಚಾಗಿರೋದು ಸುಮಾರು 540 ಕೋಟಿ ಹಣ. ಭಾರತೀಯ ಸಿನಿಮಾ ರಂಗದಲ್ಲೇ ಅತೀ ಹೆಚ್ಚಿನ ಬಂಡವಾಳ ಈ ಸಿನಿಮಾಕ್ಕೆ ಹಾಕಲಾಗಿದೆ.ಮೂರು ಸಾವಿರ ತಂತ್ರಜ್ಞಾನವನ್ನು ಒಳಗೊಂಡ ಸಿನಿಮಾ

ಇನ್ನು ಈ ಸಿನಿಮಾಕ್ಕೆ ಮೂಲೆ ಮೂಲೆಗಳಿಂದ ಸುಮಾರು 3೦೦೦ ತಂತ್ರಜ್ಞರು ಹಗಲು ರಾತ್ರಿಯನ್ನದೇ ಕೆಲಸ ಮಾಡಿದ್ದಾರಂತೆ. ಲೈಕಾ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರೋ ಈ ಸಿನಿಮಾಕ್ಕೆ ಎಸ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಮೊದಮೊದಲು ಈ ಸಿನಿಮಾ 150 ಕೋಟಿಯಾಗುತ್ತೆ ಎಂದುಕೊಂಡಿದ್ದರು ಆದರೆ ಬರೋಬ್ಬರಿ 500 ಕೋಟಿ ಸಿನಿಮಾ ಖರ್ಚು ದಾಟಿದೆ. ಇನ್ನು ಪ್ರಚಾರಕ್ಕೂ ಕೂಡ ಹೆಚ್ಚಿನ ಹಣ ಸುರಿದ್ದಾರೆ ಎನ್ನಲಾಗುತ್ತಿದೆ. ವಿಎಫ್ ಎಕ್ಸ್ ತಂತ್ರಜ್ಞಾನ ಕೂಡ ಬಳಸಲಾಗಿದೆ. ಇನ್ನು ಈ ಸಿನಿಮಾದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್, ಆಮಿ ಜಾಕ್ಸನ್  ಸೇರಿದಂತೆ ಹಲವಾರು ಮಂದಿಯ ತಾರಾ ಬಳಗವಿದೆ.

Tags