ಸುದ್ದಿಗಳು

ಬಾಲಿವುಡ್ ಟಾಪ್ ನಟಿಯರ ಬೋಲ್ಟ್ ಅವತಾರಗಳಿವು!

ಬಾಲಿವುಡ್ ಅನ್ನು ಅತೀ ದೊಡ್ಡ ಸಿನಿಮಾ  ಇಂಡಸ್ಟ್ರೀ ಎಂದೇ ಕರೆಯಲಾಗುತ್ತದೆ. ಬಾಲಿವುಡ್ ಎಂಬ ಸಮುದ್ರದಲ್ಲಿ ಈಜಲು, ಗ್ಲಾಮರ್, ಪ್ರತಿಭೆ ಎಲ್ಲವೂ ಅಗತ್ಯ. ಆದರೆ ಕೆಲವರ ಪ್ರಕಾರ ಇಲ್ಲಿ ಏನೂ ಇಲ್ಲದಿದ್ದರೂ ಗ್ಲಾಮರ್ ಒಂದಿದ್ದರೆ ಸಾಕು ಎಂಬ ತಪ್ಪು ಅಭಿಪ್ರಾಯವೂ ಇದೆ. ಹಾಗಂತ ಗೌರಮ್ಮಗಳಿಗೆ ಇಲ್ಲಿ ಪಾತ್ರವೂ ಇಲ್ಲ. ಪಾತ್ರಕ್ಕೆ ತಕ್ಕ ಹಾಗೆ ನಟ ನಟಿಯರೂ ತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ದರಾಗಿರಬೇಕು. ಇದೇ ಕಾರಣಕ್ಕಾಗಿ ಬಾಲಿವುಡ್ ನ ಮಹಾನ್ ನಟಿಯರು ಕೂಡ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆ ಕೆಡಿಸಿದ್ದು ಇದೆ
ಪ್ರಿಯಾಂಕ ಚೋಪ್ರಾ. ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾ, ಕೇವಲ ನಟಿ ಮಾತ್ರವಲ್ಲ, ಹಾಡುಗಾರ್ತಿ ಹಾಗೂ ಹಾಡನ್ನು ತಾವೇ ಬರೆಯುವ ಪ್ರತಿಭೆ. ಹಲವು ಹಿಟ್ ಚಿತ್ರಗಳನ್ನು ನೀಡಿರುವ ಈ ಕೃಷ್ಣ ಸುಂದರಿ, ಮ್ಯಾಕ್ಸಿಮ್ ಕಡೆಯಿಂದ ಹಾಡೆಸ್ಟ್ ಗರ್ಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ನರ್ಗೀಸ್ ಫಕ್ರೀ
ಬಾಲಿವುಡ್ ನ ಕ್ಯೂಟೆಸ್ಟ್ ನಟಿಯರ ಪೈಕಿ ಒಬ್ಬಳಾದ ನರ್ಗೀಸ್. ಅಮೆರಿಕನ್ ನೆಕ್ಟ್ ಟಾಪ್ ಮಾಡೆಲ್ 2 ಸೀಸನ್ ನಲ್ಲೂ ಕಾಣಿಸಿಕೊಂಡಿದ್ದರು. ರಾಕ್ ಸ್ಟಾರ್ ಚಿತ್ರದ ಮೂಲಕ 2011ರಲ್ಲಿ ಬಾಲಿವುಡ್ ಪ್ರವೇಶಿಸಿದ ಈ ಚೆಲುವೆ ಮದ್ರಾಸ್ ಕೆಫೆಯ ಬಳಿಕ ಹೆಚ್ಚು ಗುರುತಿಸಿಕೊಂಡವರು.
 ಕತ್ರೀನಾ ಕೈಫ್
ನಟಿ ಕತ್ರೀನಾ ಕೈಫ್ ಬಾಲಿವುಡ್ ಅತ್ಯಂತ ಸುಂದರ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. 2003ರಲ್ಲಿ  ಬೂಮ್ ಚಿತ್ರದ ಮೂಲಕ ಬಾಲಿವುಡ್ ಅಂಗಳ  ಪ್ರವೇಶಿಸಿದ ಕತ್ರೀನಾ, ಉಡುಪಿನ ವಿಚಾರದಲ್ಲಿ ತಗಾದೆ ಮಾಡಿದವರಲ್ಲ. ಹಲವು ಬಾರಿ ಬೋಲ್ಟ್ ಆಗಿ ಕಾಣಿಸಿಕೊಂಡಿದ್ದು ಇದೆ.
ಕರೀನಾ ಕಾಪೂರ್
ನಟಿ ಕರೀನಾ, ಕಾಪೂರ್ ಕುಟುಂಬ ಕುಟುಂಬಕ್ಕೆ ಸೇರಿದ ಶ್ರೀಮಂತ ನಟಿ. 2000ದಲ್ಲಿ ಬಾಲಿವುಡ್ ಅಂಗಳ ಪ್ರವೇಶಿಸಿದ ಈಕೆ ಇದುವರೆಗೂ ಟಾಪ್ ನಟಿಯ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇ ಇಲ್ಲ. 2012ರಲ್ಲಿ ಸೈಫ್ ಅಲಿಖಾನ್ ಅವರ ಕೈಹಿಡಿದ ಕರೀನಾ, ಬಾಲಿವುಡ್ ನಲ್ಲಿ ಹೆಚ್ಚು ಸಂಭಾವಣೆ ಪಡೆಯುವ ನಟಿಯರಲ್ಲಿಒಬ್ಬರು. ಈಕೆ ಕೂಡ ಬೋಲ್ಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಕದ್ದಿದ್ದರು.
ಜಾಕ್ವೆಲಿನ್ ಫೆರ್ನಾಂಡೀಸ್
ಶ್ರೀಲಂಕಾದ ಬೆಡಗಿ ಜಾಕ್ವೆಲಿನ್ ಮಾಜಿ ಬ್ಯೂಟಿ ಕ್ವೀನ್ ಹಾಗೂ ಮಾಡೆಲ್ ಕೂಡ  ಹೌದು. ಮಿಸ್ ಶ್ರೀಲಂಕಾ ಪ್ರಶಸ್ತಿಯನ್ನು ಬಾಚಿಕೊಂಡ ಜಾಕ್ವೆಲಿನ್ ಬದುಕು ಕಂಡುಕೊಂಡಿದ್ದು ಬಾಲಿವುಡ್ ನಲ್ಲಿ.
ಬಿಪಾಶ ಬಸು
ಬಿಪಾಶ ಬಸು ಉತ್ತಮ ಪ್ರತಿಭೆ ಹೊಂದಿರುವ ನಟಿ. 2001ರ ಅಜ್ ನಬಿ ಚಿತ್ರದಲ್ಲಿ ನೆಗೆಟೀವ್ ರೋಲ್ ಮೂಲಕ ಬಾಲಿವುಡ್ ಗೆ ಎಂಟ್ರಿ ಪಡೆದ ಬಿಪಾಷ, ಹಲವು ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿದ್ದಾರೆ.
ಅನುಷ್ಕಾ ಶರ್ಮಾ
ಶಾರೂಖ್ ಕಾನ್ ಅವರ ರಬ್ ನೇ ಬನಾದಿ ಜೋಡಿ ಮೂಲಕ ಬಾಲಿವುಡ್ ನಲ್ಲಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದ ಅನುಷ್ಕಾ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ವಿರಾಟ್ ಕೋಹ್ಲಿಯನ್ನು ಮದುವೆಯಾದ ಅನುಷ್ಕಾ ಬಾಲಿವುಡ್ ನಲ್ಲಿ ಹೆಚ್ಚು ಬೇಡಿಕೆ ಇರುವ ನಟಿ
ದೀಪಿಕಾ ಪಡುಕೋಣೆ
ಜಿರೋ ಸೈಜ್ ನಿಂದ ಗಮನ ಸೆಳೆಯುತ್ತಿರುವ ದೀಪಿಕಾ ಪಡುಕೋಣೆ, ಹಾಲಿವುಡ್ ನಲ್ಲೂ ಮಿಂಚಿದವರು. 2006ರ ಓಮ್ ಶಾಂತಿ ಓಮ್ ಮೂಲಕ ಬಾಲಿವುಡ್  ನಲ್ಲಿ ಅದೃಷ್ಟಪರೀಕ್ಷೆಗಿಳಿದ ದೀಪಿಕಾ, ಮತ್ತೆ ಹಿಂದಿರುಗಿ ನೋಡಿದ್ದೆ ಇಲ್ಲ.

Tags