ಸುದ್ದಿಗಳು

ಇದ್ದಕ್ಕಿದ್ದಂತೆ ಬಾಲಿವುಡ್ ನಿಂದ ಮರೆಯಾದ ನಕ್ಷತ್ರಗಳು…!

ಮುಂಬೈ, ಮಾ.18:

ಸಿನಿಮಾ ಅನ್ನುವುದು ಅದೃಷ್ಟ ಪರೀಕ್ಷೆ ಇದ್ದಂತೆ. ಯಾವ ಸಿನಿಮಾ ಹಿಟ್ ಆಗುತ್ತೆ..? ಯಾವ ನಟರು ಹಿಟ್ ಆಗುತ್ತಾರೆ, ಫ್ಲಾಪ್ ಆಗುತ್ತಾರೆ ಎಂದು ಹೇಳುವುದಕ್ಕಾಗಲ್ಲ. ಇಲ್ಲೂ ಆಗಿದ್ದು ಇದುವೇ. ಬಾಲಿವುಡ್ ಗೆ ಭರ್ಜರಿ ಪ್ರವೇಶ ಪಡೆದ ಈ ನಟರು ಸದ್ದಿಲ್ಲದೇ ಮರೆಯಾಗಿ ಹೋದರು. ಇವತ್ತಿಗೂ ಇವರು ಎಲ್ಲಿದ್ದಾರೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ.  ಬಾಲಿವುಡ್ ನಿಂದ ಕಣ್ಮರೆಯಾಗಿರುವ ಆ 6 ನಕ್ಷತ್ರಗಳ ಬಗ್ಗೆ ಹೇಳುತ್ತೇವೆ, ನೋಡಿ…

ಇಮ್ರಾನ್ ಖಾನ್

ಖ್ಯಾತ ಹಿರಿಯ ನಟ ಅಮೀರ್ ಖಾನ್ ರ ಸೋದರಳಿಯ ಇಮ್ರಾನ್ ಖಾನ್ 2008ರಲ್ಲಿ ರಿಲೀಸ್ ಆದ ‘ಜಾನೆ ತು ಯಾ ಜಾನೇ  ನಾ’ ಎಂಬ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಿದ್ದರು. ಈ ಸಿನಿಮಾ ಸೂಪರ್ ಹಿಟ್ ಕೂಡಾ ಆಗಿತ್ತು. ನಂತರ ಇಮ್ರಾನ್ ಖಾನ್ ದೆಹಲಿ ಬೆಲ್ಲಿ, ಐ ಲವ್ ಸ್ಟೋರಿ ಸಿನಿಮಾದಲ್ಲಿ ನಟಿಸಿದ್ದರು. ಇವರು ಕೊನೆಯ ಬಾರಿಗೆ 2015ರಲ್ಲಿ ರಿಲೀಸ್ ಆದ ಚಿತ್ರ ‘ಕಟ್ಟಿ ಬಾತಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಇದು ಬಾಕ್ಸ್ ಆಫೀಸ್ ನಲ್ಲಿ ಸೋತಿತ್ತು. ಇದರ ನಂತರ ಇಮ್ರಾನ್ ಖಾನ್ ಯಾವುದೇ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.

ಪೂಜಾ ಭಟ್

90 ರ ದಶಕದಲ್ಲಿ ಪೂಜಾ ಭಟ್ ಸುಂದರ ನಟಿಯರಲ್ಲಿ ಒಬ್ಬರಾಗಿದ್ದರು. ಪೂಜಾ ಭಟ್, ಬಾಲಿವುಡ್ ನ ಪ್ರಸಿದ್ಧ ನಿರ್ದೇಶಕ ಮತ್ತು ನಿರ್ಮಾಪಕ ಮಹೇಶ್ ಭಟ್ ರ ಪುತ್ರಿ. ಡ್ಯಾಡಿ (1990), ದಿಲ್ ಹೈ ಕಾ ಮಾತಾ ನಾ, ರೋಡ್, ಜುನೂನ್ ಮುಂತಾದ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಪೂಜಾರವರು ಬಾಲಿವುಡ್ ನಿಂದ ಕಣ್ಮರೆಯಾದರು. ಕಳೆದ 18 ವರ್ಷಗಳಿಂದ ಇವರು ಯಾವುದೇ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.

ಹರ್ಮನ್ ಬವೇಜಾ

ನಟ ಹರ್ಮನ್ ಬವೇಜಾ, ಹೃತಿಕ್ ರೋಷನ್ ರಂತೆ ಕಾಣುವ ಪ್ರಸಿದ್ಧ ನಿರ್ದೇಶಕ ಹ್ಯಾರಿ ಬವೆಜಾರ ಮಗ. ಹರ್ಮನ್ ಬವೇಜಾ ಮೊದಲ ಬಾರಿಗೆ ತನ್ನ ತಂದೆ ನಿರ್ದೇಶನದ ‘ಲವ್ ಸ್ಟೋರಿ 2050’ ಚಿತ್ರದೊಂದಿಗೆ ಬಾಲಿವುಡ್ ಪ್ರವೇಶಿಸಿದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗಳಿಕೆ ಮಾಡಲು ವಿಫಲವಾಯಿತು. ನಂತರ ಹರ್ಮನ್ ಬವೇಜಾ ಡಿಶ್ ಕ್ಯೂನ್ ಚಿತ್ರದಲ್ಲಿ ಮತ್ತು ಫೋರ್ ಸಾಹಿಬ್ ಝಾದೆಗಳಲ್ಲಿ ಕೆಲಸ ಮಾಡಿದರೂ ಇದು ಹೆಚ್ಚು ಕೆಲಸ ಮಾಡಲಿಲ್ಲ.

ಫರ್ದೀನ್ ಖಾನ್

ನಟ ಫರ್ದೀನ್ ಖಾನ್ ತನ್ನ ತಂದೆ ಫಿರೋಜ್ ಖಾನ್ ನಿರ್ದೇಶಿಸಿದ ‘ಪ್ರೇಮ್ ಅಗೋನ್’ ಎಂಬ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಈ ಸಿನಿಮಾ 1998ರಲ್ಲಿ ರಿಲೀಸ್ ಆಗಿತ್ತು. ಆರಂಭಿಕ ಹೆಜ್ಜೆ ಚೆನ್ನಾಗಿತ್ತು. ಆದರೆ ತದನಂತರ ಫರ್ದೀನ್ ಖಾನ್ ಹೆಚ್ಚು ಸಕ್ಸಸ್ ಗಳಿಸಲಿಲ್ಲ. ಇವರ ಬಹುತೇಕ ಚಲನಚಿತ್ರಗಳು ವಿಫಲವಾಯಿತು. ಇವರು ಕಳೆದ 9 ವರ್ಷಗಳಿಂದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.

ಸಾಹಿಲ್ ಖಾನ್

ಆರಂಭಿಕ ಅವಧಿಯಲ್ಲಿ ಸಾಹಿಲ್ ಖಾನ್ ತನ್ನ ಬಲವಾದ ದೇಹಕ್ಕೆ ಪ್ರಸಿದ್ಧರಾಗಿದ್ದರು. ‘ಸ್ಟೈಲ್’ ಸಿನಿಮಾದ ಮೂಲಕ ಇವರು ಬಾಲಿವುಡ್ ಗೆ ಚೊಚ್ಚಲವಾಗಿ ಪ್ರವೇಶಿಸಿದರು. 2013ರಲ್ಲಿ ರಿಲೀಸ್ ಆದ ಚಿತ್ರ ‘ಶೃಂಗಾರ್’ ಚಿತ್ರದಲ್ಲಿ ಇವರು ಕೊನೆಯ ಬಾರಿಗೆ ಅಭಿನಯಿಸಿದ್ದರು.

ಕೂದಲಿಗೂ ಬಂತು ಪರ್ಲ್ ಕ್ರಿಸ್ಟಲ್ ವಿನ್ಯಾಸ!

#balkaninews #bollywood #hindimovies #imrankhanmovies #imrankhanhindimovies

Tags