ಸುದ್ದಿಗಳು

ಯೋಧರಿಗೆ 5 ಕೋಟಿ ನೆರವು ನೀಡಿದ ಅಕ್ಷಯ್ ಕುಮಾರ್

ಮುಂಬೈ, ಫೆ.20:

ಪುಲ್ವಾಮ ದುರಂತ ನಿಜಕ್ಕೂ ಎಂದೂ ಮರೆಯದ ಛಾಯೆಯಾಗಿದೆ. ಪಾಕಿಸ್ತಾನ ಮಾಡಿದ ಈ ಕುಕೃತ್ಯಕ್ಕೆ ಇಡೀ ದೇಶವೇ ಮರುಗುವಂತಾಗಿದೆ. ಈಗಾಗಲೇ ಈ ಪಾಕಿಸ್ತಾನಕ್ಕೆ ಪ್ರತಿಕಾರ ತೀರಿಸಬೇಕು ಅಂತಾ ಅದೆಷ್ಟೋ ಮಂದಿ ಹೇಳುತ್ತಿದ್ದಾರೆ. ಇನ್ನು ಈ ಹುತಾತ್ಮ ಯೋಧರ ಕುಟುಂಬಗಳಿಗೆ ಸಹಾಯದ ನೆರವು ಬರುತ್ತಿದ್ದು, ಇದೀಗ ನಟ ಅಕ್ಷಯ್ ಕುಮಾರ್ ಕೂಡ  ನೆರವು ನೀಡಿದ್ದಾರೆ.

5 ಕೋಟಿ ಹಣ ನೀಡಿದ ಅಕ್ಷಯ್ ಕುಮಾರ್

ಹೌದು, ಈಗಾಗಲೇ ಬಹಳಷ್ಟು ಮಂದಿ ಯೋಧರಿಗೆ ನೆರವಾಗುತ್ತಿದ್ದಾರೆ. ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅವರ ಮಕ್ಕಳ ಜೀವನಕ್ಕೂ ಭದ್ರತೆ ನೀಡುತ್ತಿದ್ದಾರೆ. ಇದೆಲ್ಲದರ ನಡುವೆ ನಟ ಅಕ್ಷಯ್ ಕುಮಾರ್ ಕೂಡ ಯೋಧರ ಕುಟುಂಬಕ್ಕೆ ಧನ ಸಹಾಯ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಈ ನಟ ಟ್ವಿಟ್ ಮಾಡಿದ್ದಾರೆ. ಇನ್ನು, ಸುಮಾರು 5 ಕೋಟಿ ಹಣವನ್ನು ಯೋಧರ ಕುಟುಂಬಕ್ಕೆ ನೀಡಿದ್ದಾರೆ ನಟ ಅಕ್ಷಯ್ ಕುಮಾರ್.

ಟ್ವಿಟ್ ಮಾಡಿದ ನಟ

ಈ ಬಗ್ಗೆ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್,  ಪುಲ್ವಾಮ ಘಟನೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದು ಎಂದಿಗೂ ಮರೆಯಲು ಆಗುವುದಿಲ್ಲ ಕೂಡ. ನಾವೆಲ್ಲ ಈಗ ಕೋಪದಲ್ಲಿದ್ದೇವೆ ಹಾಗಂತ ವೀರ ಮರಣವೊಂದಿದ ಯೋಧರನ್ನು ಮರೆಯಲು ಸಾಧ್ಯವಿಲ್ಲ‌ . ಈ ಸಮಯದಲ್ಲಿ ನಾವು ಏನಾದರೂ ಮಾಡಬೇಕು. ಹಾಗಾಗಿ ಎಲ್ಲರೂ ಹುತಾತ್ಮ ಯೋಧರ ಕುಟುಂಬಕ್ಕೆ bharatkeveer.gov.in ವೆಬ್‌ ಸೈಟ್‌ ಮೂಲಕವೇ ದೇಣಿಗೆ ಸಲ್ಲಿಸಿ. ಇದು ಅಫೀಶಿಯಲ್ ವೆಬ್‌ಸೈಟ್‌. ಇಲ್ಲಿ ಯಾವುದೇ ಫೇಕ್ ಇಲ್ಲ. ಅವರಿಗೆ ಗೌರವ ನೀಡಲು ಬೇರೆ ಯಾವ ಮಾರ್ಗ ಇಲ್ಲ. ನೀವು ಕೂಡ ಇದಕ್ಕೆ ಬೆಂಬಲ ನೀಡಿ ಎಂದಿದ್ದಾರೆ. ಈ ಮೂಲಕ ಯೋಧರಿಗೆ ಗೌರವ ನೀಡುವುದಕ್ಕೆ ಹೇಳಿದ್ದಾರೆ.

ವೆಬ್ ಸರಣಿಯತ್ತ ಗಮನ ಹರಿಸಿದ ಪವರ್ ಸ್ಟಾರ್..!!!

#akshaykumar #balkaninews #officialwebsite #bharatkeveer.gov.in #pulwanaterriorstattack #february142019blackday

Tags

Related Articles