ಸುದ್ದಿಗಳು

ನಿಗೂಢವಾಗಿ ಸಾವನ್ನಪ್ಪಿದ 90ರ ದಶಕದ ಜನಪ್ರಿಯ ಖಳನಟ

ಮುಂಬೈ, ಫೆ.11:

ಅಮಿತಾಬ್ ಬಚ್ಚನ್, ಧರ್ಮೇಂದ್ರ, ಗೋವಿಂದ ಹಾಗೂ ಸಂಜಯ್ ದತ್ ಸೇರಿ ದೊಡ್ಡ ನಟರುಗಳೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದ ನಟ ಮಹೇಶ್ ಅನುಮಾನಾಸ್ಪದವಾಗಿ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ಈ ಸಾವು ಬಿಟೌನ ಮಂದಿಯನ್ನು ಶಾಕ್ ಮಾಡಿದೆ. ಕೊಳೆತ ಸ್ಥಿತಿಯಲ್ಲಿ ಇವರ ದೇಹ ಸಿಕ್ಕಿರುವುದರಿಂದ ನಿಜಕ್ಕೂ ಶಾಕ್ ಆಗಿದೆ.

ನಿಜಕ್ಕೂ ಮಹೇಶ್ ಬದುಕಲ್ಲಿ ಏನಾಯ್ತು..?

ಹೌದು, 80 ಮತ್ತು 90 ರ ದಶಕದ ಚಲನಚಿತ್ರಗಳಲ್ಲಿ ಖಳನಾಯಕ ನಟರಾಗಿದ್ದ ಮಹೇಶ್‌ ಆನಂದ್ ಅಪಾರ ಜನಪ್ರಿಯತೆ ಗಳಿಸಿದ್ದ ನಟ. ಅನೇಕ ಬಾಲಿವುಡ್​ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮಹೇಶ್. ಕಳೆದ ತಿಂಗಳು ತೆರೆಕಂಡ ರಂಗೀಲಾ ರಾಜಾ ಚಿತ್ರ ಮಹೇಶ್​ ಆನಂದ್​ ನಟಿಸಿದ ಕೊನೆಯ ಚಿತ್ರವಾಗಿತ್ತು ಕುರುಕ್ಷೇತ್ರ, ಸ್ವರ್ಗ, ಕೂಲಿ ನಂ.1, ವಿಜೇತ ಇನ್ನು ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಈ ನಟ ಮುಂಬೈ ನ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ.

ಮರಣೋತ್ತರ ಪರೀಕ್ಷೆ ನಂತರ ಸತ್ಯಾ ಸತ್ಯತೆ ಹೊರ ಬರಬೇಕಿದೆ

ಇವರ ಸಾವು ಸಹಜವೋ ಅಥವಾ ಆತ್ಮಹತ್ಯೆಯೋ ಅನ್ನೋದು ಇನ್ನು ತಿಳಿದು ಬಂದಿಲ್ಲ. ಇನ್ನು ಕೊಳೆತು ವಾಸನೆ ಬಂದ ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇನ್ನು ಪೋಸ್ಟ್ ಮಾರ್ಟಮ್ ನಡೆಸಲಾಗುತ್ತಿದ್ದು, ಮರಣೋತ್ತರ ವರದಿಯ ನಂತರ ಗೊತ್ತಾಗಲಿದೆ. ಇನ್ನು ಈ ನಟನಿಗೆ ಇತ್ತೀಚೆಗೆ ಅವಕಾಶಗಳು ಕಡಿಮೆಯಾಗಿದ್ದವಂತೆ. ಇದೀಗ ಈ ಸಾವು ನಿಜಕ್ಕೂ ದುರಂತವೇ.

#bollywood #bollywoodactormaheshanand #balkaninews #maheshanandmovies

Tags