ಸುದ್ದಿಗಳು

ಲೋಕಸಭಾ ಚುನಾವಣೆ ಬೆನ್ನಲ್ಲೇ ಕಮಲವನ್ನು ಎತ್ತಿ ಹಿಡಿದ ಬಾಲಿವುಡ್ ಜನಪ್ರಿಯ ನಟ ಸನ್ನಿ ಡಿಯೋಲ್

ಮುಂಬೈ, ಏ.24:

ದೇಶದೆಲ್ಲೆಡೆ ಲೋಕಸಭಾ ಚುನಾವಣೆ ಕಾವು ಇದೆ. ಈ ನಡುವೆ ಸಿನಿ ತಾರೆಯರು ಕೂಡ ರಾಜಕೀಯ ಪ್ರವೇಶ ಪಡೆಯುತ್ತಿದ್ದಾರೆ. ಈಗಾಗಲೇ ಚುನಾವಣೆ ಸಮಯದಲ್ಲಿಯೇ ಬಹಳಷ್ಟು ಮಂದಿ ರಾಜಕೀಯ ಪ್ರವೇಶ ಪಡೆದಿದ್ದು, ಇದೀಗ ಬಾಲಿವುಡ್ ನ ಖ್ಯಾತ ನಟನ ಸರದಿಯಾಗಿದೆ. ಹೌದು, ನಟ ಸನ್ನಿ ಡಿಯೋಲ್ ಬಿಜೆಪಿ ಸೇರುವ ಮೂಲಕ ರಾಜಕೀಯಕ್ಕೆ ಧುಮುಕಿದ್ದಾರೆ. ಈಗಾಗಲೇ ಸನ್ನಿ ಡಿಯೋಲ್ ಬಿಜೆಪಿ ಸೇರುತ್ತಾರೆ ಎನ್ನಲಾಗಿತ್ತು. ಇದೀಗ ಅಧಿಕೃತವಾಗಿ ಈ ನಟ ಬಿಜೆಪಿ ಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಸೇರಿದ ನಟ

ಇತ್ತೀಚೆಗ ಪುಣೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾರನ್ನು ಭೇಟಿಯಾಗಿದ್ದರು ಸನ್ನಿ ಡಿಯೋಲ್. ಅಮಿತ್ ಶಾ ಜೊತೆ ಮಾತುಕತೆಯಾದ ನಂತರದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.  ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್​ ಹಾಗೂ ಪಿಯೂಶ್​ ಗೋಯೆಲ್​ ನೇತೃತ್ವದಲ್ಲಿ ನಿನ್ನೆ ಈ ನಟ ಪಕ್ಷ ಸೇರ್ಪಡೆಗೊಂಡಿದ್ದಾರೆ. ಇನ್ನೂ ಈ ನಟ ಪಂಜಾಬ್‌ ನ ಗುರುದಾಸ್‌ ಪುರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆಯಂತೆ. ಹಾಗಾಗಿ ಪಕ್ಷ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.

ಗುರುದಾಸ್ ಪುರದಿಂದ ಸ್ಪರ್ಧೆ

ಗುರುದಾಸ್‌ ಪುರದಲ್ಲಿ ಹಾಲಿ ಸಂಸದ, ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುನೀಲ್ ಜಕ್ಕರ್ ವಿರುದ್ಧ ಡಿಯೋಲ್ ಸ್ಪರ್ಧೆಗೆ ಇಳಿಯಲಿದ್ದಾರೆ.. ಈ ಕ್ಷೇತ್ರವನ್ನು ಬಾಲಿವುಡ್ ನಟ ವಿನೋದ್ ಖನ್ನಾ ಅವರು ಪ್ರತಿನಿಧಿಸಿದ್ದರು. 2017ರಲ್ಲಿ ವಿನೋದ್ ಖನ್ನಾ ನಿಧನದ ಬಳಿಕ ನಡೆದ ಉಪಚುನಾವಣೆಯಲ್ಲಿ ಸುನೀಲ್ ಜಕ್ಕರ್ ಗೆದ್ದು ಬಂದಿದ್ದರು. ಇದೀಗ ಸಿನಿಮಾ ನಟರೊಬ್ಬರು ಸ್ಪರ್ಧೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಸಮಯದಲ್ಲಿಯೇ ಈ ರೀತಿಯಾದ ಬೆಳವಣಿಗೆಗೆಳು ಸಾಮಾನ್ಯವಾಗಿ ಬಿಟ್ಟಿವೆ.

Image result for sunny deol

Image result for sunny deol

ನಟನಾ ‘ಚೈತ್ರ’ ಕಾಲ

#balkaninews #sunnydeol #sunnydeolmovies #sunnydeolhits #sunnydeobjp #bharatiyajanathaparty

Tags