ಸುದ್ದಿಗಳು

ಶೂಟಿಂಗ್ ವೇಳೆಯಲ್ಲಿಯೇ ಈ ಜೋಡಿಗಳಿಗೆ ಪ್ರೇಮಾಂಕುರವಾಯಿತು….!

ಮುಂಬೈ, ಡಿ.15: ಬಾಲಿವುಡ್ ನಲ್ಲಿ ಅನೇಕ ಲವರ್ಸ್ ಗಳಿದ್ದಾರೆ. ಕೆಲವರು ಲವ್ ಮಾಡಿ ಮದುವೆಯಾಗಿದ್ದಾರೆ. ಇನ್ನು ಕೆಲವರದ್ದು ಲವ್ ಫೈಲೂರ್ ಆಗಿದೆ. ಅದು ಬಿಡಿ, ಶೂಟಿಂಗ್ ವೇಳೆ ಈ ಐದು ತಾರೆಯರಿಗೆ ಪ್ರೇಮಾಂಕುರವಾಗಿತ್ತು ಗೊತ್ತೆ..? ಅವರು ಯಾರು ಗೊತ್ತೇ..? ಬನ್ನಿ, ನೋಡೋಣ…

  1. ಸುನೀಲ್ ಶೆಟ್ಟಿ ಮತ್ತು ಸೋನಾಲಿ ಬೆಂದ್ರೆ

ಬಾಲಿವುಡ್ ನಟ ಸುನೀಲ್ ಶೆಟ್ಟಿ ಹಾಗೂ ನಟಿ ಸೋನಾಲಿ ಬೆಂದ್ರೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಕ್ಕೆ ಕಹಾರ್ ಮತ್ತು ಭಾಯಿ ಮುಂತಾದ ಚಲನಚಿತ್ರಗಳನ್ನು ಉದಾಹರಿಸಬಹುದು. ಶೂಟಿಂಗ್ ನಲ್ಲಿದ್ದ ವೇಳೆ ಇವರಿಬ್ಬರು ಹೆಚ್ಚು ಸಮಯ ಜತೆಯಾಗಿರುತ್ತಿದ್ದರು. ಆದರೆ ಇವರಿಬ್ಬರಿಗೆ ಮದುವೆಯಾಗಲು ಸಾಧ್ಯವಾಗಲಿಲ್ಲ.

2. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಇಬ್ಬರೂ ಬಾಲಿವುಡ್ ನ ಪ್ರಸಿದ್ಧ ಖ್ಯಾತನಾಮರು. ಇವರಿಬ್ಬರು ಅನೇಕ ಚಲನಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ‘ಬಂಟಿ ಔರ್ ಬಬ್ಲಿ’ ಚಿತ್ರದಲ್ಲಿನ ‘ಕಾಜ್ರಾ ರೇ’ ಹಾಡಿನ ಪ್ರದರ್ಶನವು ಜನರ ಮನಸ್ಸನ್ನು ಗೆದ್ದಿತ್ತು. 14 ಜನವರಿ 2007 ರಂದು ಅಭಿಷೇಕ್ ಮತ್ತು ಐಶ್ವರ್ಯಾ ಪರಸ್ಪರ ಪ್ರೀತಿಸುತ್ತಿರುವ ವಿಚಾರ ಬಹಿರಂಗವಾಯಿತು. 2007 ರ ಏಪ್ರಿಲ್ 20,  ರಂದು ಇವರಿಬ್ಬರು ವಿವಾಹವಾದರು.3. ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್

“ಮೈ ಪ್ರೇಮ್ ಕಿ ದಿವಾನಿ” ಚಿತ್ರದ ಶೂಟಿಂಗ್ ವೇಳೆ ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ಪ್ರೇಮದ ಬಲೆಯಲ್ಲಿ ಬಿದ್ದರು. ಆದರೆ ಇವರಿಬ್ಬರಿಗೆ ಮದುವೆಯಾಗಲು ಸಾಧ್ಯವಾಗಲಿಲ್ಲ.

4. ಜೆನೆಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್ ಮುಖ್

ಬಾಲಿವುಡ್ ನ ಅತ್ಯಂತ ಸುಂದರವಾದ ಜೋಡಿ ಅಂದರೆ ಅದು ಜೆನೆಲಿಯಾ ಹಾಗೂ ರಿತೇಶ್ ದೇಶ್ ಮುಖ್ ಜೋಡಿ. ‘ತೇರಾ ಮೇರೆ ಕಾಸಮ್’ ಚಿತ್ರದ ಶೂಟಿಂಗ್ ವೇಳೆ ಇವರಿಬ್ಬರ ಮಧ್ಯೆ ಲವ್ ಶುರುವಾಯಿತು. ಇವರಿಬ್ಬರೂ ಪರಸ್ಪರ ಹತ್ತು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. 2012 ಫೆಬ್ರವರಿ 3, ರಂದು ಇವರಿಬ್ಬರು ವಿವಾಹವಾದರು. ಸಿನಿ ವೀಕ್ಷಕರು ಈ ದಂಪತಿಯನ್ನು ತುಂಬಾ ಇಷ್ಟಪಡುತ್ತಾರೆ.

5. ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ

ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇತ್ತೀಚಿಗೆ ಮದುವೆಯಾದ ಬಾಲಿವುಡ್ ದಂಪತಿ. ‘ರಾಮ್ ಲೀಲಾ’ ಚಿತ್ರದ ವೇಳೆ ಇವರಿಬ್ಬರ ನಡುವಿನ ಸಂಬಂಧ ಗಟ್ಟಿಯಾಯಿತು ಎನ್ನುವುದು ಬಾಲಿವುಡ್ ಮಂದಿಯ ಮಾತು. 

 

Tags

Related Articles