ಸುದ್ದಿಗಳು

ಬಾಲಿವುಡ್ ನಟಿಯಿಂದ ಮತ್ತೆ ಭುಗಿಲೆದ್ದ ಮಿಟೂ

ಬೆಂಗಳೂರು, ಜ.12: ಲೈಂಗಿಕ ಕಿರುಕುಳ, ಕಾಸ್ಟಿಂಗ್ ಕೌಚ್ ಅನ್ನೋದು ಇಂದು ನಿನ್ನೆಯದಲ್ಲ. ಆದರೆ ಇದರ ಬಗ್ಗೆ ಅನೇಕರು ಬಾಯ್ಬಿಟ್ಟು ಮಾತನಾಡಿದರೇ ಮತ್ತೊಂದಿಷ್ಟು ಜನ ಈ ಬಗ್ಗೆ ಬಾಯ್ಬಿಟ್ಟರೆ ಎಲ್ಲಿ ಅವಕಾಶಗಳೂ ಸಿಗುವುದಿಲ್ಲವೇ ಅಂತಾ ಸುಮ್ಮನಾಗಿರುತ್ತಾರೆ. ಅಷ್ಟೆ ಅಲ್ಲ ಈ #ಮಿಟೂ ಅನ್ನೋ ವೇದಿಕೆ ಬಂದಿದ್ದೇ ಬಂದಿದ್ದು, ಅದೆಷ್ಟೋ ನಟಿ ಮಣಿಯರು ತಮಗಾದ ಅನುಭವಗಳನ್ನು ಹೇಳಲು ಅವಕಾಶ ಬಳಸಿಕೊಂಡಿದ್ದೂ ಉಂಟು.

ಬಾಲಿವುಡ್ ನಟಿಗೆ ಕಾಸ್ಟಿಂಗ್ ಕೌಚ್

ಇತ್ತೀಚೆಗೆ #ಮಿಟೂ ಬಗ್ಗೆಯಾಗಲೀ ಅಥವಾ ಕಾಸ್ಟಿಂಗ್ ಕೌಚ್ ಬಗ್ಗೆಯಾಗಲೀ ಕೊಂಚ ಆರೋಪಗಳು, ಅನಿಸಿಕೆಗಳು ಕಡಿಮೆಯಾದ್ವು ಎನ್ನುವಷ್ಟರಲ್ಲಿ ಇದೀಗ ಇನ್ನೊಬ್ಬ ನಟಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಹೌದು, ಬಾಲಿವುಡ್ ನಟಿಯೊಬ್ಬರು ಕಾಸ್ಟಿಂಗ್ ಕೌಚ್ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ

ಬಾಲಿವುಡ್ ನಟಿ ಬಿದಿತಾ ಬ್ಯಾಗ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರು ಯಾರು ಎನ್ನುವುದನ್ನು ಮಾತ್ರ ಅವರು ಹೇಳಿಲ್ಲ. ರಾಮ್ ಗೋಪಾಲ್ ವರ್ಮಾ ಅವರ ಸಹಾಯಕನಂತೆ, ಆದರೆ ಹೆಸರನ್ನು ಮಾತ್ರ ಹೇಳಿಲ್ಲ. ಇವರು ನನ್ನ ಜೊತೆ ಪ್ರಾಣಿಯಂತೆ ವರ್ತನೆ ಮಾಡಿದ್ದರು. ಅಷ್ಟೆ ಅಲ್ಲ. ಆ ಕ್ಷಣಕ್ಕೆ ನಾನು ಬೇಡಿಕೊಂಡರು ಬೇರೇನೋ ಮಾತನಾಡಿದ್ದರಂತೆ. ಹೀಗೆ ಸಂದರ್ಶನವೊಂದರಲ್ಲಿ ಈ ನಟಿ ಹೇಳಿಕೊಂಡಿದ್ದಾರೆ.

#bollywood #metoo #bollywoodactress #balkaninews #biditabag

Tags