ಸುದ್ದಿಗಳು

ಫೇಮಸ್ ಆಯ್ತು ಕರೀನಾ ಕಪೂರ್ ಸ್ಲಿಂಗ್ ಬ್ಯಾಗ್!

ಸದ್ಯ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಲಂಡನ್ ನಲ್ಲಿದ್ದಾರೆ. ತಮ್ಮ ಕುಟುಂಬದ ಜೊತೆ ಆರಾಮಾಗಿ ಕಾಲ ಕಳೆಯುತ್ತಿರುವ ಅವರ ಜೊತೆ ಅಕ್ಕ ಕರಿಷ್ಮಾ ಕೂಡ ಇದ್ದಾರೆ. ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ತಮ್ಮ ಕುಟುಂಬದವರ ಜೊತೆಗಿರುವ ಚಿತ್ರವನ್ನು ಕರೀನಾ ಶೇರ್ ಮಾಡಿದ್ದರು.

ಈ ಫೋಟೋದಲ್ಲಿ ಕರೀನಾಳನ್ನು ಗಮನಿಸಿದರೆ ಆಕೆ ಬ್ಲಾಕ್ ಜಾಕೆಟ್, ಡೆನಿಮ್ ಜೀನ್ಸ್ ಧರಿಸಿರುವುದರ ಜೊತೆಗೆ ಸ್ಲಿಂಗ್ ಬ್ಯಾಗ್ ಧರಿಸಿರುವುದು ಕಂಡುಬರುತ್ತದೆ. ಈಗ ವಿಷಯವಿರುವುದೇ ಅಲ್ಲಿ. ಕರೀನಾ ಹೆಗಲ ಮೇಲೆ ನೇತು ಹಾಕಿಕೊಂಡಿರುವ ದುಬಾರಿ ಬೆಲೆಯ ಆ ಸ್ಲಿಂಗ್ ಬ್ಯಾಗ್ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ.

Celebrity Style,Chanel,fashion,kareena kapoor khan

ಹೌದು, ಸಾಧಾರಣವಾದ ಬ್ಯಾಗ್ ಧರಿಸಿದ್ದರೆ ಯಾರೂ ಆ ಬ್ಯಾಗ್ ಮೇಲೆ ದೃಷ್ಟಿ ಬೀರುತ್ತಿರಲಿಲ್ಲವೇನೋ. ಆದರೆ ಆ ಬ್ಯಾಗ್ ಬೆಲೆ ಕೇಳಿದ ಮೇಲೆ ಎಲ್ಲರ ಕಿವಿ ನೆಟ್ಟಗಾಗಿದೆ. ಸಖತ್ ಸ್ಟೈಲೀಶ್ ಆಗಿರುವ ಆ ಬ್ಯಾಗ್ ಬೆಲೆ 3,50,000 ರೂ.ಗಳಂತೆ.

ಎಲ್ಲರಿಗೂ ತಿಳಿದಿರುವ ಹಾಗೆ ದುಬಾರಿ ಬೆಲೆಯ ಆಕ್ಸೆಸರಿ ಖರೀದಿಸುವಲ್ಲಿ ಕರೀನಾ ಸದಾ ಮುಂದು. ಅಂತೆಯೇ ಕರೀನಾ ಬಳಿ ಕ್ಯೂಟ್ ಆದ ಸ್ಲಿಂಗ್ ಬ್ಯಾಗ್ ಇರುವುದರಲ್ಲಿ ಆಶ್ಚರ್ಯವೇನಿಲ್ಲ ಬಿಡಿ. ಆದರೆ ಸೋಜಿಗದ ಸಂಗತಿಯೆಂದರೆ ಇದೀಗ ಕರೀನಾಳ ಸೆಲ್ಫಿ, ಫ್ಯಾಮಿಲಿ ಫೋಟೋ ನೋಡುವವರು ಈ ಸ್ಲಿಂಗ್ ಬ್ಯಾಗ್ ನೋಡುವುದನ್ನು ಮರೆಯುತ್ತಿಲ್ಲವಂತೆ.

 

View this post on Instagram

 

#kareenakapoorkhan snapped at a park in London by our followers #viralbhayani @viralbhayani

A post shared by Viral Bhayani (@viralbhayani) on

ಮಗನ ಈ ಕೆಲಸ ಕಂಡು ಶಾಕ್ ಆದ ತಮಿಳು ನಟ ವಿಕ್ರಂ!

#balkaninews #kareenakapoor#kareenakapoorinstagram #slingbag #bollywoodnews

Tags