ಸುದ್ದಿಗಳು

ಮತ್ತೆ ತಾಯಿಯಾಗಲಿರುವ ಮಾಜಿ ‘ವಿಶ್ವಸುಂದರಿ’

ಮುಂಬೈ, ಸೆ.12: ನಟಿ ಐಶ್ವರ್ಯ ಈಗಾಗಲೇ ತಾಯಿಯಾಗಿದ್ದಾರೆ. ಹಾಗಾದರೆ ಇನ್ನೊಂದು ಮಗುವಿನ ತಾಯಿಯಾಗುತ್ತಿದ್ದಾರಾ..? ಅಥವಾ ಮಗುವಿನ ನಿರೀಕ್ಷೆ ಇದೇಯಾ ಅಂದುಕೊಂಡಿರಾ? ಇದು ನಿಜಕ್ಕೂ ಸುಳ್ಳು, ಐಶ್ವರ್ಯ ತಾಯಿಯಾಗುತ್ತಿರುವುದು ನಿಜ ಜೀವನದಲ್ಲಿ ಅಲ್ಲ, ಸಿನಿಮಾ ಜೀವನದಲ್ಲಿ.ಹೌದು, ಸದ್ಯ ‘ಜಾಸ್ಮಿನ್’ ಸಿನಿಮಾದಲ್ಲಿ ಮಗುವೊಂದರ ತಾಯಿಯಾಗಲಿದ್ದಾರೆ ನಟಿ ಐಶ್ವರ್ಯ. ಅದು ಬಾಡಿಗೆ ತಾಯಿಯಾಗಿ. ಬಾಡಿಗೆ ತಾಯಿ ಹಾಗೂ ಮಗುವೊಂದರ ಕಥೆಯ ಸುತ್ತ ಎಣೆದಿರುವ ಬಲೆಯೇ ಈ ‘ಜಾಸ್ಮಿನ್’ ಸಿನಿಮಾ. ಈ ಸಿನಿಮಾದಲ್ಲಿ ಬಾಡಿಗೆ ತಾಯಿಯ ಪ್ರೀತಿ ಹಾಗೂ ಮಗುವಿನ ನಡುವಿನ ಪ್ರೀತಿ ಹೇಗಿರಲಿದೆ ಎನ್ನವುದನ್ನು ಚಿತ್ರದಲ್ಲಿ  ತೋರಿಸಲಾಗುತ್ತಿದೆಯಂತೆ.

ಇನ್ನು ಈ ಚಿತ್ರಕ್ಕೆ ಬರಹಗಾರ ಸಿದ್ದಾರ್ಥ ಚಿತ್ರಕಥೆ ಬರೆದಿದ್ದು,  ನಾರಾಯಣ್ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಮೂಲಕವೇ ಬಾರಿ ಕುತೂಹಲ ಮೂಡಿಸಿದೆ ಈ ಸಿನಿಮಾ.

Tags