ಸುದ್ದಿಗಳು

ಈ ನಟಿ ಮೇಲೆ ಅಕ್ಷಯ್ ಕುಮಾರ್ ಪುತ್ರನಿಗೆ ಕ್ರಶ್ ಆಗಿದ್ಯಂತೆ..!

ಮುಂಬೈ, ಸೆ.14: ಕ್ರಶ್, ಲವ್ ನಂತರ ಮ್ಯಾರೇಜ್.. ಇದು ಬಾಲಿವುಡ್ ಅಂಗಳದಲ್ಲಿ ಸಾಮಾನ್ಯ ಬಿಡಿ. ಬಾಲಿವುಡ್ ನ “ಕಿಲಾಡಿ ಕಿಂಗ್” ಖ್ಯಾತಿಯ ಅಕ್ಷಯ್ ಕುಮಾರ್ – ಟ್ವಿಂಕಲ್ ಖನ್ನಾ ದಂಪತಿಗೆ ಪುತ್ರನೊಬ್ಬನಿದ್ದಾನೆ ಅನ್ನುವುದು ಹೆಚ್ಚಿನವರಿಗೆ ಗೊತ್ತೇ ಇಲ್ಲ.ಹೌದು, ಅಕ್ಷಯ್ ಕುಮಾರ್ ಗೆ 15 ವರ್ಷದ ಪುತ್ರ ಇದ್ದಾನೆ. ಆತನ ಹೆಸರೇ ಆರಾವ್ ಕುಮಾರ್. ಈತ ತನ್ನ ನೀಲಿ ಕಣ್ಣು ಹಾಗೂ ಸೌಂದರ್ಯದ ಮೂಲಕ ಈಗಾಗಲೇ ಗಮನ ಸೆಳೆದಿದ್ದಾನೆ‌. ಇತ್ತೀಚೆಗೆ ಈತ ಅಕ್ಷಯ್ ಕುಮಾರ್ ಪುತ್ರ ಅಂತಾ ಗೊತ್ತಾದ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸುದ್ದಿಯಾಗಿದ್ದಾನೆ. ವಿಷಯ ಅದಲ್ಲ ಬಿಡಿ. ಈ ಆರಾವ್ ಕುಮಾರ್ ಗೆ ಬಾಲಿವುಡ್ ನ ನಟಿಯೊಬ್ಬಳ ಮೇಲೆ ಕ್ರಶ್ ಆಗಿದ್ಯಂತೆ. ಅದು ಯಾರ ಜೊತೆಗೆ ಗೊತ್ತಾ..?ಆಲಿಯಾಳ ಅಭಿನಯ ಮತ್ತು ಸೌಂದರ್ಯಕ್ಕೆ ಮೆಚ್ಚಿದ ಅಕ್ಕಿ ಪುತ್ರ

ಈತನಿಗಿಂತ  10 ವರ್ಷ ಹಿರಿಯಳಾಗಿರುವ ಅಲಿಯಾ ಭಟ್ ಜೊತೆಗೆ. ಹೌದು. ಅಕ್ಕಿ ಪುತ್ರ ಆರಾವ್ ಒನ್ ಸೈಡ್ ಆಗಿ ಆಲಿಯಾಳನ್ನು ಪ್ರೀತಿಸುತ್ತಿದ್ದಾನೆ. ಈವರೆಗೆ ಆಲಿಯಾ ಎಷ್ಟು ಚಿತ್ರಗಳಲ್ಲಿ ನಟಿಸಿದ್ದಾಳೆ, ಆ ಎಲ್ಲಾ ಚಿತ್ರಗಳನ್ನು ಆರಾವ್ ಕುಮಾರ್ ನೋಡಿದ್ದಾನೆ. ಆಲಿಯಾಳ ಅಭಿನಯ ಮತ್ತು ಸೌಂದರ್ಯದ ದೊಡ್ಡ ಅಭಿಮಾನಿಯಾಗಿರುವ ಆರಾವ್ ಗೆ ಆಲಿಯಾ ಅಂದರೆ ಸಿಕ್ಕಾಪಟ್ಟೆ ಇಷ್ಟ ಅಂತೆ. ಮೊದಲ ಚಿತ್ರದಲ್ಲೇ ಸಕ್ಸಸ್ ಕಂಡ ಆಲಿಯಾ ಭಟ್ ಏಳು ವರ್ಷಗಳಲ್ಲಿ ಸಕ್ಸಸ್ ಹಾದಿಯಲ್ಲಿದ್ದಾಳೆ. ಜೊತೆಗೆ ಬಾಲಿವುಡ್ ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಈಕೆ ಕೂಡಾ ಒಬ್ಬಳು‌. ಇನ್ನು ಆರಾವ್ ಕುಮಾರ್ ಸ್ವತಃ ಆಲಿಯಾ ಭಟ್ ಎದುರು ಹೋಗಿ ಇನ್ನೂ ಪ್ರೊಪೋಸ್ ಮಾಡಿಲ್ವಂತೆ. ಅದಕ್ಕಾಗಿ ಒಳ್ಳೆಯ ದಿನ ಕಾಯುತ್ತಿದ್ದಾನಂತೆ. ಇತ್ತ ಆಲಿಯಾ ಭಟ್ , ರಣಬೀರ್ ಕಪೂರ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾಳೆ. ಅಲ್ಲದೇ ಈ ಜೋಡಿ ಮೊದಲ ಬಾರಿಗೆ ಜೋಡಿಯಾಗಿ ‘ಬ್ರಹ್ಮಾಸ್ತ್ರಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Tags