ಸುದ್ದಿಗಳು

34 ವರ್ಷಗಳ ಹಿಂದೆ ಇಡೀ ದೇಶ ಕಣ್ಣೀರಿಡಲು ಹೊರಟಿತ್ತು.., ಬಚ್ಚನ್ ಬಚಾವಾಗಿಬಿಟ್ಟಿದ್ದರು…!!

ಅಂದು..!, ಆ ದಿನ..!!, 34 ವರ್ಷಗಳ ಹಿಂದೆ ಎಲ್ಲವೂ ಮುಗಿದೇ ಹೋಯಿತು..!!! ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ‘ಇನ್ನಿಲ್ಲ’ ಎಂದು ಇಡೀ ದೇಶ ಕಣ್ಣೀರಿಡಲು ಹೊರಟಿತ್ತು…! ಅಷ್ಟರಲ್ಲಿ ದೇವರೇ ಕೋಟಿ ಅಭಿಮಾನಿಗಳ ಮೊರೆಗೆ ಓಗೊಟ್ಟಿದ್ದ.. ಬಚ್ಚನ್ ಬಚಾವಾಗಿಬಿಟ್ಟಿದ್ದರು…!!

ಮುಂಬೈ, ಸೆ.14: ಬಾಲಿವುಡ್ ನ ಸೂಪರ್ ಸ್ಟಾರ್ ಅಮಿತಾಬ್  ಬಚ್ಚನ್ ಹಿಂದಿ ಸಿನಿಮಾ ರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಈಗಲೂ ಇವರು ತನ್ನ 75 ನೇ ವಯಸ್ಸಿನಲ್ಲೂ ಬಾಲಿವುಡ್ ನಲ್ಲಿ ಸಕ್ರಿಯರಾಗಿದ್ದಾರೆ.  34 ವರ್ಷಗಳ ಹಿಂದೆ ಸಂಭವಿಸಿದ ಆ ದುರಂತ ಘಟನೆ ಅಮಿತಾಭ್ ಬಚ್ಚನ್ ಬದುಕಿನಲ್ಲಿ ಮರೆಯಲಾಗದ್ದು ಅಂತಾ ಹೇಳಬಹುದು. ಅವತ್ತು “ಅಮಿತಾಭ್ ಇನ್ನಿಲ್ಲ” ಎಂದು ಇಡೀ ದೇಶಕ್ಕೆ ದೇಶವೇ ಕಣ್ಣೀರಿಟ್ಟಿತ್ತು. ಒಂದು ರೀತಿಯಲ್ಲಿ ಆ ಘಟನೆ ಇಡೀ ರಾಷ್ಟ್ರವನ್ನೇ ದಿಗ್ಭ್ರಮೆಗೊಳಿಸಿತ್ತು.ಬಿಗ್ ಬಿ ಹೊಟ್ಟೆಗೆ ಪಂಚ್ ಮಾಡಿದ ಪುನೀತ್ ಇಸ್ಸಾರ್

ಹೌದು.  1983 ರಲ್ಲಿ ಬಿಡುಗಡೆಯಾದ “ಕೂಲಿ” ಚಿತ್ರದ ಚಿತ್ರೀಕರಣದ ವೇಳೆ ಒಂದು ಅನಿರೀಕ್ಷಿತ ಘಟನೆಯೊಂದು ನಡೆದಿತ್ತು. ಅಮಿತಾಭ್ ಮತ್ತು ನಟ ಪುನೀತ್ ಇಸ್ಸಾರ್ ಮಧ್ಯೆ ಫೈಟಿಂಗ್ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು‌. ಈ ವೇಳೆ ಅಮಿತಾಭ್ ರ ಹೊಟ್ಟೆಗೆ ಎದುರಾಳಿ ನಟ ಪಂಚ್ ಹೊಡೆಯಬೇಕಾಗಿತ್ತು. ಈ ವೇಳೆ ನಟ ಇಸ್ಸಾರ್, ಬಿಗ್ ಬಿ ಹೊಟ್ಟೆಗೆ ಜೋರಾಗಿ ಪಂಚ್ ನೀಡಿದ್ದರು. ಇದರಿಂದ ಅಮಿತಾಭ್ ಪ್ರಜ್ಞೆ ತಪ್ಪಿ ಬಿದ್ದರು. ಒಂದು ರೀತಿಯಲ್ಲಿ ಅವರ ಉಸಿರೇ ಇಲ್ಲವಾಗಿತ್ತು. ಕೂಡಲೇ ಚಿತ್ರ ತಂಡ ಅಮಿತಾಭ್ ರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿತು. ಆದರೂ ಪ್ರಜ್ಞೆ ಬರಲಿಲ್ಲ. ಕೊನೆಗೆ ಅಮಿತಾಭ್ ರನ್ನು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.ಎರಡನೇ ಜನ್ಮ ಎತ್ತಿದ ಬಿಗ್ ಬಿ

ಈ ವಿಚಾರ ಇಡೀ ರಾಷ್ಟ್ರವನ್ನೇ ಗಾಬರಿಗೊಳಿಸಿತು. ಜಾತಿ ಧರ್ಮ ಮರೆತು ಎಲ್ಲಾ ಧರ್ಮದ ಭಾಂದವರು ಅಮಿತಾಭ್ ಬಚ್ಚನ್ ಗುಣಮುಖರಾಗಲೆಂದು ವಿಶೇಷ  ಪ್ರಾರ್ಥನೆ ಮಾಡಿದರು. ಇನ್ನು ಅಮಿತಾಭ್ ರ ಪಕ್ಕಾ ಅಭಿಮಾನಿಗಳಂತೂ ನೀರು, ಅನ್ನವನ್ನೇ ತ್ಯಜಿಸಿದ್ದರು. ಈ ಮಧ್ಯೆ, ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ನಂತರ, ಅಮಿತಾಭ್ ಬಚ್ಚನ್ ಅಂತಿಮವಾಗಿ ಆಗಸ್ಟ್ 2 ರಂದು ತಮ್ಮ ಕಣ್ಣುಗಳನ್ನು ತೆರೆದರು. ಇದು ಅಮಿತಾಭ್ ಬಚ್ಚನ್ ಪಾಲಿಗೆ ಮರು ಜೀವ ಪಡೆದ ದಿನವಾಗಿತ್ತು‌. ಅಮಿತಾಭ್ ಬಚ್ಚನ್ ಭಾಷೆಯಲ್ಲಿ ಅವರಿಗೆ ಸಿಕ್ಕ “ಎರಡನೇ ಜನ್ಮ” ಎನ್ನಬಹುದು.

Tags