ಸುದ್ದಿಗಳು

ಈ ನಟಿಯರ ಜೊತೆ ನಟಿಸಲು ಅಮಿತಾಬ್ ಗೆ ಭಯವಂತೆ…!

ನಟಿಯರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಬಿಗ್ ಬಿ

ತಮ್ಮ ಪ್ರತಿಭೆಯಿಂದ ಗಮನ ಸೆಳೆದಿರುವ ಯುವ ನಟ ನಟಿಯರು ಸಿಕ್ಕಾಪಟ್ಟೆ ಪ್ರತಿಭೆಯನ್ನು ಹೊಂದಿದ್ದು, ಅವರ ಅಭಿನಯ  ಚಾಕಚಕ್ಯತೆ ಎಲ್ಲರನ್ನೂ ಬೆರಗುಗೊಳಿಸುವಂತಿದೆ.

ಮುಂಬೈ, ಆ.30: ಬಾಲಿವುಡ್ ಬಿಗ್ ಬಿ ಅಮಿತಾಬ್ ಲೆಜೆಂಡ್ರಿ ನಟ ಮಾತ್ರವಲ್ಲ, ಕೊಟ್ಯಾಂತರ ಮಂದಿಗೆ ಮಾದರಿಯಾದವರು. ‘ಶೆಹೆನ್ಷಾ’, ‘ಕಭಿ ಕುಶಿ ಕಭಿ ಗಮ್’, ‘ದೀವಾರ’, ‘ಶೋಲೆ’ ಸೇರಿದಂತೆ ಇನ್ನಿತರ ಹಲವು ಚಿತ್ರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿರುವ ಅಮಿತಾಬ್ ಗೆ 75ರ ಹರೆಯ. ಈಗಲೂ ಬಾಲಿವುಡ್ ನ ಅತೀ ಬೇಡಿಕೆಯ ನಟನಾಗಿರುವ ಅಮಿತಾಬ್ ಗೆ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ದೀಪಿಕಾ ಪಡುಕೋಣೆ , ಅನುಷ್ಕಾ ಶರ್ಮಾ ಜೊತೆಗೆ ನಟಿಸುವುದೆಂದರೆ ಭಯವಂತೆ.ಕಾರಣ ಕೇಳಿದರೆ ಬೆಚ್ಚಿ ಬೀಳುತ್ತೀರಾ?

ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್ ಪತಿ’ ಸೀಸನ್ 10 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಿನಿಮಾ ಹಾಗೂ ಇದೀಗ ಮಿಂಚುತ್ತಿರುವ ಪ್ರಮುಖ ನಟಿಯರ ಕುರಿತಂತೆ ಮಾತನಾಡುತ್ತಾ, ಇತ್ತೀಚೆಗೆ ಸಿನಿಮಾ ಇಂಡಸ್ಟ್ರೀಗೆ ಬಂದು ತಮ್ಮ ಪ್ರತಿಭೆಯಿಂದ ಗಮನ ಸೆಳೆದಿರುವ ಯುವ ನಟ ನಟಿಯರು ಸಿಕ್ಕಾಪಟ್ಟೆ ಪ್ರತಿಭೆಯನ್ನು ಹೊಂದಿದ್ದು, ಅವರ ಅಭಿನಯ  ಚಾಕಚಕ್ಯತೆ ಎಲ್ಲರನ್ನೂ ಬೆರಗುಗೊಳಿಸುವಂತಿದೆ. ಅತ್ಯಂತ ಕಿರಿಯ ವಯಸ್ಸಿನ ಆಲಿಯಾ ಭಟ್, ಅನುಷ್ಕಾ ಮತ್ತು ದೀಪಿಕಾ  ಪಡುಕೋಣೆ ಅತ್ಯುತ್ತಮ ನಟಿಯರಾಗಿದ್ದು, ಅವರೊಂದಿಗೆ ಕೆಲಸ ಮಾಡಲು ನನಗೆ ಭಯವಾಗುತ್ತದೆ ಎಂದಿದ್ದಾರೆ.ಕೊಟ್ಟಿರುವ ಪಾತ್ರವನ್ನು ಕ್ಷಣಾರ್ಧದಲ್ಲಿ ಮಾಡುವ ನಟಿಯರು

ನಾವು ಇಷ್ಟು ವರ್ಷಗಳಿಂದ ಸಿನಿಮಾ ಇಂಡಸ್ಟ್ರೀಯಲ್ಲಿ ಕೆಲಸ ಮಾಡಿದರೂ, ಒಂದು ಪಾತ್ರವನ್ನು ತಿದ್ದಿ ತೀಡಿ ಸರಿಯಾದ ದಾರಿಗೆ ತರಲು ಸಾಕಷ್ಟು ಸಮಯಾವಾಕಾಶವನ್ನು ತೆಗೆದುಕೊಳ್ಳುತ್ತೇವೆ. ಆದರೆ ಈಗಿನ ನಟ ನಟಿಯರು ಸೆಟ್ ಗೆ ಬಂದಾಗಲೇ ನಾವು ಏನೂ ಮಾಡಬೇಕು ಎಂಬುದು ಅವರಿಗೆ ತಿಳಿದಿರುತ್ತದೆ. ಪಾತ್ರ ಏನ್ನನೂ ಬಯಸುತ್ತದೆಯೇ ಅದನ್ನೇ  ಅವರು ಕ್ಷಣಾರ್ಧದಲ್ಲಿ ಮಾಡುತ್ತಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಬಿಗ್ ಬಿ. ಯುವ ನಟರಾದ ವರುಣ್ ಧವನ್, ರಣ್ ಬೀರ್ ಕಪೂರ್, ರಾಜ್ ಕುಮಾರ್ ರಾವ್ ಬಗ್ಗೆಯೂ ಮಾತನಾಡಿರುವ ಅವರು, ಬಾಲಿವುಡ್ ನ ಈ ನಟರ ಪ್ರತಿಭೆ ಸೋಜಿಗವನ್ನುಂಟು ಮಾಡಿದೆ ಎಂದಿದ್ದಾರೆ.

 

Tags