ಸುದ್ದಿಗಳು

‘ಬಿಗ್ ಬಾಸ್’ ನಿರೂಪಣೆಗೆ ಸಲ್ಲು ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತೆ..?

ಮುಂಬೈ, ಸೆ.12: ಹಿಂದಿಯ ಬಿಗ್ ಬಾಸ್‌ 12 ನ ಆವೃತ್ತಿ ಇನ್ನೇನು ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸಲ್ಮಾನ್ ಖಾನ್ ಅವರ ಸಂಭಾವನೆ ಕೂಡ ಹೆಚ್ಚಾಗಿದೆ ಅಂತಾ ಹೇಳಲಾಗುತ್ತಿದೆ.

ಬಿಗ್ ಬಾಸ್ ಅಂದಾಕ್ಷಣ ಪ್ರೇಕ್ಷಕರ ಕಣ್ಣು ನೆಟ್ಟಗಾಗೋದು ಸಾಮಾನ್ಯ. ಯಾಕಂದರೆ ತೆರೆ ಹಿಂದೆ ಸ್ಟಾರ್ ಗಳು ಯಾವ ರೀತಿ ಇರುತ್ತಾರೆ ಅನ್ನುವುದನ್ನು ಬಿಗ್ ಬಾಸ್ ಮನೆ ತೋರಿಸುತ್ತೆ. ಹಿಂದಿಯ ಬಿಗ್ ಬಾಸ್ ನ 12 ನೇ ಆವೃತ್ತಿ ಇನ್ನೇನು ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಗ್ ಬಾಸ್ ಪೋಸ್ಟರ್ ಗಳು, ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಕೂಡಾ ಕಾತುರರಾಗಿದ್ದಾರೆ. ವರದಿಗಳ ಪ್ರಕಾರ ಈ ಬಾರಿ ಬಿಗ್ ಬಾಸ್‌ ನಿರೂಪಣೆ ಮಾಡಲು ಸಲ್ಮಾನ್ ಖಾನ್ ಹೆಚ್ಚಿನ ಸಂಭಾವನೆ ಪಡೆದಿದ್ದಾರಂತೆ.ಸಲ್ಲು ‘ಬಿಗ್ ಬಾಸ್’ ನ ಒಟ್ಟಾರೆ ಸಂಭಾವನೆ

ಹೌದು, ಈ ಬಾರಿ ನಡೆಯುವ ಬಿಗ್ ಬಾಸ್ ನಲ್ಲಿ ಒಂದು ಸಂಚಿಕೆಗೆ ಸುಮಾರು 14 ಕೋಟಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟು 13 ವಾರಗಳ ಕಾಲ ಈ ಬಿಗ್ ಬಾಸ್ ಶೋ ನಡೆಯುತ್ತದೆ. ಅದರಲ್ಲಿ ಶನಿವಾರ ಹಾಗೂ ಭಾನುವಾರ ಅಷ್ಟೆ ಸಲ್ಮಾನ್ ಕಾಣಿಸಲಿದ್ದಾರೆ. ಅಂದರೆ ಒಟ್ಟು 26 ಸಂಚಿಕೆಗಳು ಸಲ್ಮಾನ್ ನಿರೂಪಣೆಯಲ್ಲಿ ನಡೆಯಲಿವೆ. ಅದರಲ್ಲಿ ಒಟ್ಟು 364 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ.ಸೀಸನ್ 11 ರಲ್ಲಿ ಸಲ್ಮಾನ್ ಒಂದು ಸಂಚಿಕೆಗೆ 12 ಕೋಟಿ ಪಡೆದಿದ್ದರು ಇದೀಗ 2 ಕೋಟಿ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಸೀಜನ್ ನಾಲ್ಕರಿಂದ ಆರರವರೆಗೆ ಎರಡೂವರೆ ಕೋಟಿ ಮಾತ್ರ ತೆಗೆದುಕೊಂಡಿದ್ದರು. ಇನ್ನು ಸೀಸನ್ 8 ರಲ್ಲಿ ಮತ್ತೆ ಸಂಭಾವನೆ ಹೆಚ್ಚಿಸಿಕೊಂಡಿದ್ದರು. ಆವೃತ್ತಿ 9ಕ್ಕೆ 7 ಕೋಟಿ, ಆವೃತ್ತಿ 10ಕ್ಕೆ 8 ಕೋಟಿ, ಆವೃತ್ತಿ 10ಕ್ಕೆ 11 ಕೋಟಿ ಪಡೆದಿದ್ದರು ಎನ್ನಲಾಗಿದೆ.

ಇನ್ನು ಈ ಬಾರಿಯ ಹಿಂದಿ ಬಿಗ್ ಬಾಸ್ ಸೆಪ್ಟೆಂಬರ್ 16 ರಿಂದ ಆರಂಭಗೊಳ್ಳಲಿದೆ. ಸದ್ಯ ಗೋವಾದಲ್ಲಿ ಈ ಬಿಗ್ ಬಾಸ್ ನಡೆಯಲಿದ್ದು, ಪ್ರೇಕ್ಷಕರು ಕೂಡ ಕಾತುರರಾಗಿದ್ದಾರೆ.

Tags