ಸುದ್ದಿಗಳು

ಮದುವೆಗಾಗಿ ಫೋಟೋ ಶೂಟ್ ಮಾಡಿಸಿದ್ರ ಡಿಪ್ಪಿ…!

ಮುಂಬೈ, ಆ.23: ಸದ್ಯ ಬಾಲಿವುಡ್‌ ನಲ್ಲಿ ದೀಪಿಕಾ ಹಾಗೂ ರಣ್ವೀರ್ ಮದುವೆ ಬಗ್ಗೆನೇ ಮಾತು. ಪ್ರಣಯ ಪಕ್ಷಿಗಳಾಗಿ ಹಾರಾಡ್ತಾ ಇರೋ ಈ ಜೋಡಿ ಇನ್ನೇನು ಸ್ವಲ್ಪ ದಿನದಲ್ಲೇ ಹಸೆಮಣೆ ಏರುತ್ತಿದೆ ಅನ್ನೊ ಮಾತುಗಳು ಕೇಳುತ್ತಲೇ ಇವೆ. ಇನ್ನು, ಮದುವೆ ಅಂದರೆ ಕೇಳಬೇಕ? ಅದರಲ್ಲೂ ಮಧುಮಗಳನ್ನು  ಮದುವೆಯಲ್ಲಿ ನೋಡೋದೆ ಒಂದು ಚೆಂದ.

ಹೌದು, ಮದುವೆ ಅಂದರೆ ಹಾಗಿರಬೇಕು ಹೀಗಿರಬೇಕು ಅನ್ನೋದು ಸಾಮಾನ್ಯ. ಅದರಲ್ಲೂ ಸ್ಟಾರ್ ನಟಿಯಂದ್ರೆ ಕೇಳ್ಬೇಕಾ. ಸ್ವರ್ಗದಲ್ಲೇ ಮದುವೆನಾ ಅನ್ನೋ ರೀತಿ ಇರುತ್ತವೆ. ಇದೀಗ ದೀಪಿಕಾ ರಣ್ವೀರ್ ಮದುವೆ ಕೂಡ ಹಾಗೆ ಆಗಲಿದೆ ಅನ್ನೋದು ಎಲ್ಲರ ಮಾತು. ಸದ್ಯ ಮದುವೆಗೆ ತಯಾರಿ ನಡೆಸುತ್ತಿರುವ ದೀಪಿಕಾ ಈಗಾಗಲೇ ಕಾಸ್ಟೂಮ್ ಡಿಸೈನ್ ಕೂಡಾ ಮಾಡಿಸುತ್ತಿದ್ದಾರಂತೆ. ಈ ಡಿಸೈನ್‌ ಮಾಡುವವರು ಬೇರೆ ಯಾರೂ ಅಲ್ಲ. ಖ್ಯಾತ ಕಾಸ್ಟೂ‍ಮ್ ಡಿಸೈನ್ ಸ‍ಭ್ಯಸಾಚಿ ಮುಖರ್ಜಿ.

ಇಡೀ ಸಿನಿಮಾ ಮಂದಿಗೆ ಇವರನ್ನು ಬಿಟ್ಟರೆ ಇನ್ಯಾರು ಇಲ್ಲ. ಘಟಾನುಘಟಿ ದಿಗ್ಗಜರಿಗೆ ವಸ್ತ್ರ ವಿನ್ಯಾಸ ಮಾಡೋ ಇವರೆ ದೀಪಿಕಾಗೂ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರಂತೆ. ಇತ್ತೀಚೆನ ಒಂದು ಫೋಟೋಗ್ರಫಿಯಲ್ಲಿ ಡಿಪ್ಪಿ ಆ ರೀತಿ ಕಾಣ್ತಾ ಇದ್ದಾರೆ. ಕೆಂಪು ಬನಾರಸಿ ಸೀರೆಯಲ್ಲಿ ಡಿಪ್ಪಿ ಮಿಂಚುತ್ತಿದ್ದಾರೆ. ಈ ಫೋಟೋ ನೋಡಿದವರು ಮದುವೆಯ ಮುಂಚಿನ ಪ್ರೀ ವೆಡ್ಡಿಂಗ್ ಫೋಟೋಶೂಟ್ ಇರಬಹುದು ಎನ್ನುತ್ತಿದ್ದಾರೆ.

 

Tags