ಆರೋಗ್ಯಪುರುಷಬಾಲ್ಕನಿಯಿಂದಲುಕ್ಸ್ಸುದ್ದಿಗಳು

ಹೃತಿಕ್ ರೋಶನ್ ಗೆ ‘…ನಟನೆ ಮರೆತು ಬಿಡು…’ ಎಂದಿದ್ದರಾ ವೈದ್ಯರು..!?!

ಆನುವಂಶೀಯ  ದೈಹಿಕ  ಅಸ್ಥವ್ಯಸ್ಥತೆಯಿಂದ  ಬಳಲಿದ್ದ ಬಾಲಿವುಡ್ ಡಾನ್ಸಿಂಗ್ ಸ್ಟಾರ್..!!!??

‘ಡುಗ್ಗು’ ವನ್ನು ಭಾಧಿಸುತ್ತಿದ್ದ ‘ಉಗ್ಗು’

..ಯಾವಾಗ ವೈದ್ಯಕೀಯ ವಿಜ್ಞಾನ ಹೃತಿಕ್ ಕೈ ಬಿಟ್ಟಿತೋ, ಹೃತಿಕ್ ಕೂಡಾ ವೈದ್ಯಕೀಯ ವಿಜ್ಞಾನಕ್ಕೆ ಎಳ್ಳು ನೀರೆರಚಿ ತಮ್ಮ ಆತ್ಮ ಸ್ಥೈರ್ಯಕ್ಕೆ , ಸತತ ಸಾಧನೆಗೇ ಶರಣಾದರು.

ಮುಂಬೈ, ಸೆ.4: ಹೃತಿಕ್ ರೋಶನ್ , ಬಾಲಿವುಡ್  ಡಾನ್ಸಿಂಗ್  ಸ್ಟಾರ್ ತನ್ನ ಸಹೋದರಿಗೆ ಬಹಳ ಆತ್ಮೀಯನೇ. ಸುಸೈನಾ ರೋಶನ್ ಕಳುಹಿಸಿದ ಹಳೆಯ ಗುಟ್ಟೊಂದನ್ನು ಹೃತಿಕ್ ಇತ್ತೀಚೆಗೆ ರಟ್ಟುಮಾಡಿದ್ದು ವೈರಲ್ ಆಗಿದೆ.  ಅದರಲ್ಲಿ ತನ್ನ ತಮ್ಮ ‘ಡುಗ್ಗು’ ವನ್ನು ಭಾಧಿಸುತ್ತಿದ್ದ ‘ಉಗ್ಗು’ ಅಂದರೆ  ಸರಾಗವಾಗಿ ಮಾತಾಡಲು ಆಗದ ಪರಿಸ್ಥಿತಿ ಯಾ ‘ಸ್ಟಾಮರಿಂಗ್’ ಸ್ಥಿತಿ ಕುರಿತಾಗಿ ತೋಡಿಕೊಂಡಿದ್ದಾರೆ ಸುಸೈನಾ. ಅದು ಹೇಗೆ ಹೃತಿಕ್ ತನ್ನ ‘ಉಗ್ಗನ್ನು’ ಸಂಭಾಳಿಸಿಕೊಂಡು ಓರ್ವ ನಟನಾಗಿ ಸಫಲತೆಯ ಮೆಟ್ಟಿಲುಗಳನ್ನೇರಿದರು ಎಂಬ ಮಾಹಿತಿಗಳನ್ನೂ ಹೃತಿಕ್ ಸದ್ಯ ಹಂಚಿಕೊಂಡಿದ್ದಾರೆ.

ತಾನು ಬಿಚ್ಚುಮನಸ್ಸಿನವಳೆಂದೂ ತನ್ನ ತಮ್ಮ ‘ಮನುಷ್ಯರು ಮುಟ್ಟಿದ ಗುಬ್ಬಿ’ಯಂತಿದ್ದೂ ಬಹು ಸಂಕೋಚ ಸ್ವಭಾವದವನಾಗಿದ್ದ ಹೃತಿಕ್ ತನ್ನ ಗೆಳತಿಯರನ್ನೂ ಮಾತಾಡಿಸಲು ಹಿಂಜರಿಯುತ್ತಿದ್ದುದ್ದನ್ನು ಸ್ಮರಿಸಿದ್ದಾರೆ.

ಇನ್ನು ತನಗಿದ್ದ ಉಗ್ಗನ್ನು ನಿವಾರಿಸಿಕೊಳ್ಳಲು ನಿತ್ಯವೂ ಗಂಟೆಗಟ್ಟಲೆ ಪುಸ್ತಕಗಳನ್ನು ಮುಕ್ತಕಂಠದಲ್ಲಿ ಓದುವ ಅಭ್ಯಾಸ ಸತತಮಾಡಿದ್ದುದರ ಫಲಶೃತಿಯೇ ವೈದ್ಯರ ಅಭಿಪ್ರಾಯ ಮೀರಿ ಹೃತಿಕ್ ನಟನಾಗಿ, ತನ್ನ ಬಹುಮುಳ ಪ್ರತಿಭೆಯನ್ನು ಜಗಜ್ಜಾಹೀರುಮಾಡಲು ಸಾಧ್ಯವಾಯ್ತು ಎಂದು  ಹೇಳಿಕೊಂಡಿದ್ದಾರೆ. ಅದ್ಯಾವ ಯಾವ ಶಬ್ದಗಳು ತನಗೆ ಉಚ್ಚರಿಸುವಲ್ಲಿ ತೊಡಕಾಗಿ ‘ಉಗ್ಗು’ ಬರುವುದೋ ಅವುಗಳನ್ನೆಲ್ಲಾ ಗುರುತಿಸಿ ಸ್ನಾನಗೃಹದಲ್ಲಿ ಗಂಟೆಗಟ್ಟಲೆ ಕುಳಿತು ಅವುಗಳನ್ನು ಧ್ವನಿಮುದ್ರಿಕೆಯ ಸಹಾಯದಿಂದ  ಹಗಲಿರುಳು ಅಭ್ಯಸಿಸಿ ತನಗಿದ್ದ ಉಗ್ಗಿನ ಸಮಸ್ಯೆಯಯನ್ನು ತಗ್ಗಿಸಿಕೊಂಡಿದ್ದರಂತೆ ಹೃತಿಕ್..!! ‘ಅವನ 13ನೇ ವಯಸ್ಸಿನಿಂದ ಆರಂಭಿಸಿದ  ಈ ಸುಯತ್ನಕ್ಕೆ ಫಲ ದೊರೆತದ್ದು 8-9 ವರ್ಷಗಳ ನಂತರವೇ , ಎಂದು ಸುಸೈನಾ ರೋಶನ್ ಸತ್ಯ ಬಿಚ್ಚಿಟ್ಟಿದ್ದಾರೆ.

ಆ ಕಾಲಕ್ಕೆ ವೈದ್ಯರು ಅದೆಷ್ಟು ಹೆದಿರಿಸಿದ್ದರೆಂದರೆ, ಹೃತಿಕ್ ನರ್ತಿಸಿದರೆ, ಕುಣಿದಾಡಿದರೆ ಮುಂದೆ ಒಂದೈದು ವರ್ಷದೊಳಗೇ ಸದಾಕಾಲ ಗಾಲಿಕುರ್ಚಿಯಲ್ಲೇ ಓಡಾಡಬೇಕಾಗುತ್ತೆಂದು ತಾಕೀತು ಮಾಡಿದ್ದರಂತೆ..!  ಯಾವಾಗ ವೈದ್ಯಕೀಯ ವಿಜ್ಞಾನ ಹೃತಿಕ್ ಕೈ ಬಿಟ್ಟಿತೋ, ಹೃತಿಕ್ ಕೂಡಾ ವೈದ್ಯಕೀಯ ವಿಜ್ಞಾನಕ್ಕೆ ಎಳ್ಳು ನೀರೆರಚಿ ತಮ್ಮ ಆತ್ಮ ಸ್ಥೈರ್ಯಕ್ಕೆ , ಸತತ ಸಾಧನೆಗೇ ಶರಣಾದರು.

ಸುಮಾರು 21 ವರ್ಷ ವಯಸ್ಸಾದಾಗಲೂ ಹೃತಿಕ್ ಸತತ ಉಚ್ಚಾರಣೆ ಹಾಗೂ ನಾಟ್ಯ ಅಭ್ಯಾಸದಲ್ಲೇ ಪ್ರತಿನಿತ್ಯ ನಿಮಗ್ನರಾಗಿದ್ದೂ, ಕೊನೆಗೂ ಸಫಲತೆಯ ಹಾದಿ ತುಳಿದೇ ಇಂದು ಭಾರತದ ಸಿನೆಮಾರಂಗದ ಅಮೂಲ್ಯ ಡಾನ್ಸಿಂಗ್ ಸ್ಟಾರ್ ನಟ ಎಂಬ ಕೀರ್ತಿ ಹೃತಿಕ್ ಗೆ ಸಲ್ಲುತ್ತೆ ಎಂದು ಹೆಮ್ಮೆ ಪಟ್ಟುಕೊಂಡಿದ್ದಾರೆ ಸುಸೈನಾ ರೋಶನ್!

Tags