ಸುದ್ದಿಗಳು

ಹೃತಿಕ್ ಜೊತೆಗಿರುವ ಈ ಯುವತಿ ಯಾರು ಗೊತ್ತೇ..?

ಬಾಲಿವುಡ್ ನ ಅತ್ಯಂತ ಸುಂದರವಾದ ಅಮ್ಮ ಮಗ ಜೋಡಿ

ತಾಯಿ, ಮಗ ಇಬ್ಬರೂ ನಿಯಮಿತವಾಗಿ ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ. ಜಿಮ್ ಮಾಡುವುದರ ಜೊತೆಗೆ ಇವರು ತಮ್ಮ ಆಹಾರ ಪದ್ದತಿಯಲ್ಲಿ ಕೂಡಾ ಬದಲಾವಣೆ ತಂದಿದ್ದಾರಂತೆ.ಮುಂಬೈ, ಆ.28:  ಈಗಂತೂ ಬಾಲಿವುಡ್ ತಾರೆಗಳು ಫಿಟ್ ನೆಸ್ ಕಾಯ್ದುಕೊಳ್ಳಲು ಜಿಮ್ ನಲ್ಲಿ ವಿಭಿನ್ನ ವ್ಯಾಯಾಮಗಳನ್ನು ಮಾಡುತ್ತಾರೆ. ಜಿಮ್ ಗೆ ಹೋಗಲು ಇವರಿಗೆ ವಯಸ್ಸೇನೂ ಅಡ್ಡ ಬರಲ್ಲ. ಅದು ಬಿಡಿ, ನಾವು ಅಸಲಿ ವಿಷಯಕ್ಕೆ ಬರೋಣ.. ಬಾಲಿವುಡ್ ನಟ ಹೃತಿಕ್ ರೋಶನ್ ಬಗ್ಗೆ ನಿಮಗೆ ಗೊತ್ತಿರಬಹುದು. ಇವರು ಜಿಮ್ ನಲ್ಲಿ ಸುಂದರ ಮಹಿಳೆ ಜೊತೆಗೆ ವ್ಯಾಯಾಮ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿದೆ. ಅದ್ಯಾರು ಅಂತಾ ಹುಡುಕಿದಾಗ ಕಾದಿದ್ದು ಮಾತ್ರ ಶಾಕಿಂಗ್..!ತಾಯಿಯ ಜೊತೆಗೆ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುವ ಮಗ

ಹೌದು.. ಹೃತಿಕ್ ರೋಶನ್ ಯಾವುದೋ ಮಹಿಳೆ ಅಥವಾ ಯುವತಿ ಜೊತೆಗೆ ಜಿಮ್ ನಲ್ಲಿ ಕಸರತ್ತು ಮಾಡುತ್ತಿರಲಿಲ್ಲ. ಬದಲಾಗಿ ತನ್ನ 63 ವರ್ಷ ವಯಸ್ಸಿನ ತಾಯಿ ಜೊತೆಗೆ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ವಯಸ್ಸು ಅರವತ್ತು ಕಳೆದರೂ ಹೃತಿಕ್ ತಾಯಿ ಇನ್ನೂ ಯುವತಿಯಾಗಿಯೇ ಇದ್ದಾರೆ ಅಂತಾ ಮೂಗು ಮುರಿದುಕೊಂಡವರೇ ಹೆಚ್ಚು. ಕೆಲವರು ಪ್ರಜ್ಞೆ ತಪ್ಪಿ ಬೀಳುವುದೊಂದೇ ಬಾಕಿ..ಕಾ‍ಳ್ಗಿಚ್ಚಿನಂತೆ ಹರಡಿದ ಅಮ್ಮ ಮಗನ ಫೋಟೋ

ಹೀಗೆ ಹೃತಿಕ್ ರೋಷನ್ ತನ್ನ ತಾಯಿ ಜೊತೆಗಿರುವ ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅಂದಹಾಗೇ ಹೃತಿಕ್ ತಾಯಿ ಹೆಸರು ಪಿಂಕಿ ರೋಷನ್. ಪಿಂಕಿ ರೋಷನ್ ತನ್ನ 63 ನೇ ವಯಸ್ಸಿನಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದಾರೆ. ಇದು ಹೇಗೆ ಸಾಧ್ಯ..? ಅನ್ನುವುದು ಹೆಚ್ಚಿನವರ ಪ್ರಶ್ನೆ. ಹೃತಿಕ್ ರ ತಾಯಿ ಪಿಂಕಿ ಜಿಮ್ ನಲ್ಲಿ ದಿನನಿತ್ಯದ ವ್ಯಾಯಾಮ ಮಾಡುವ ಮೂಲಕ 20 ಕೆಜಿಗಳನ್ನು ಇಳಿಸಿಕೊಂಡಿದ್ದಾರೆ. ತಾಯಿ, ಮಗ ಇಬ್ಬರೂ ನಿಯಮಿತವಾಗಿ ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ. ಜಿಮ್ ಮಾಡುವುದರ ಜೊತೆಗೆ ಇವರು ತಮ್ಮ ಆಹಾರ ಪದ್ದತಿಯಲ್ಲಿ ಕೂಡಾ ಬದಲಾವಣೆ ತಂದಿದ್ದಾರಂತೆ. ಹೆಚ್ಚಿನ ಫೈಬರ್ ಅಂಶದ ಹಣ್ಣುಗಳನ್ನು ಮತ್ತು ಆಹಾರವನ್ನು ಮಾತ್ರ ತಿನ್ನುತ್ತಾರಂತೆ‌. ಆರು ತಿಂಗಳಲ್ಲಿ ಸೌಂದರ್ಯವನ್ನು ಮರು ಪಡೆದಿರುವ ಹೃತಿಕ್ ತಾಯಿ ಬಾಲಿವುಡ್ ನ ಅತ್ಯಂತ ಸುಂದರವಾದ ಅಮ್ಮ ಮಗ ಜೋಡಿ ಎಂದೇ ಕರೆಯಲ್ಪಡುತ್ತಿದ್ದಾರೆ.

Tags