ಸುದ್ದಿಗಳು

ಹಿಂದಿಯಲ್ಲಿ ‘ಕಿರಿಕ್ ಪಾರ್ಟಿ’, ಸಾನ್ವಿಯಾಗಿ ಜಾಕ್ವೆಲಿನ್…!

ಚಂದನವನದಲ್ಲಿ ಬಹಳಷ್ಟು ಯಶಸ್ಸನ್ನು ಕಂಡ ಸಿನಿಮಾ

ಸ್ಯಾಂಡಲ್ ವುಡ್ ದಾಖಲೆಯನ್ನು ಬರೆದ ಸಿನಿಮಾ ಇದೀಗ ಹಿಂದೆಯಲ್ಲಿ ಬರಲು ಸಜ್ಜಾಗಿದೆ. ನಾಯಕನಾಗಿ ಕಾರ್ತಿಕ್ ಆರ್ಯನ್ ಮತ್ತು ನಾಯಕಿಯಾಗಿ ಜಾಕ್ವೆಲಿನ್ ಫರ್ನಾಂಡಿಸ್ ಅಭಿನಯಸಲಿದ್ದಾರೆ.

ಬೆಂಗಳೂರು, ಸೆ.04: ಡಿಸೆಂಬರ್ 30,.2016 ರಂದು ‘ಕಿರಿಕ್ ಪಾರ್ಟಿ’ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿಯಾಗಿ ಪ್ರದರ್ಶನವನ್ನು ಕಾಣುವುದರೊಂದಿಗೆ,  ಚಂದನವನದಲ್ಲಿ ಬಹಳಷ್ಟು ದಾಖಲೆಯನ್ನು ಬರೆಯಿತು. ಕಾಲೇಜು, ಹಾಸ್ಯ, ಪ್ರಣಯ ಹೀಗೆ ಹಲವಾರು ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಕನ್ನಡ ಚಿತ್ರರಂಗದ ಸೂಪರ್ ಹಿಟ್ ಚಿತ್ರಗಳಲ್ಲೊಂದಾಗಿ ದಾಖಲೆ ಬರೆಯಿತು. ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಯಶಸ್ಸನ್ನು ಕಂಡಿದ್ದರು. ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಚಿತ್ರ ಸುಂದರವಾಗಿ ಮೂಡಿಬಂದಿರುವುದರೊಂದಿಗೆ,  ಈ ಚಿತ್ರ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.ತೆಲುಗಿನಲ್ಲಿ ಮಗುಚಿದ ‘ಕಿರಾಕ್ ಪಾರ್ಟಿ’

ಕನ್ನಡದಲ್ಲಿ ಯಶಸ್ಸನ್ನು ಕಂಡ ಸಿನಿಮಾ ‘ಕಿರಿಕ್ ಪಾರ್ಟಿ’, ತೆಲುಗಿನಲ್ಲಿ ರೀಮೆಕ್ ಮೂಲಕ , ‘ಕಿರಾಕ್ ಪಾರ್ಟಿ’ ಯಾಗಿ ಸೆಟ್ಟೇರಿತು. ತೆಲುಗು ಚಿತ್ರದಲ್ಲಿ ನಾಯಕನಾಗಿ ನಿಖಿಲ್ ಸಿದ್ಧಾರ್ಥ್ , ನಾಯಕಿಯಾಗಿ ಸಿಮ್ರಾನ್ ಪರೀಂಜಾ ಅಭಿನಯಿಸಿದ್ದಾರೆ.  ಕನ್ನಡದಲ್ಲಿ ಅಭಿನಯಸಿದ್ದ ಕೆಲ ಕಲಾವಿದರು ತೆಲುಗು ಅವತರಿಣೆಕೆಯಲ್ಲಿ ನಟಿಸಿದ್ದಾರೆ. ಆದರೆ, ಕನ್ನಡ ಚಿತ್ರರಂಗದಲ್ಲಿ   ಕಿರಿಕ್ ಪಾರ್ಟಿ ಕಂಡ ಯಶಸ್ಸನ್ನು , ತೆಲುಗು ಚಿತ್ರರಂಗದಲ್ಲಿ  ಯಶಸ್ಸನ್ನು ಕಾಣದೇ ಚಿತ್ರ ಸೋಲನ್ನು ಅನುಭವಿಸಿತು.ಸಾನ್ವಿಯಾಗಿ ಜಾಕ್ವೆಲಿನ್

ಇದೀಗ ಹಿಂದೆಯಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಅದರಂತೆ ರಕ್ಷಿತ್ ಪಾತ್ರಧಾರಿಯಾಗಿ  ಕಾರ್ತಿಕ್ ಆರ್ಯನ್ , ರಶ್ಮಿಕಾ ಪಾತ್ರಧಾರಿಯಾಗಿ ಜಾಕ್ವೆಲಿನ್ ಫರ್ನಾಂಡಿಸ್ ಅಭಿನಯಿಸಲಿದ್ದು, ಇನ್ನೂ ಉಳಿದ ಪಾತ್ರಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು,  ಇನ್ನೂಳಿದ ಪಾತ್ರಗಳನ್ನು ಅಂತಿಮಗೊಳಿಸಬೇಕಾಗಿದೆ.

Tags