ಸುದ್ದಿಗಳು

ಇನ್ನಷ್ಟು ಸಂಕಷ್ಟಕ್ಕೆ ‘ಮಣಿಕರ್ಣಿಕಾ’ ಚಿತ್ರ

ಮುಂಬೈ, ಸೆ.12: ಕಂಗನಾ ರಣಾವತ್ ನಟಿಸಿರುವ ‘ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ’ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದಿಂದ ಈಗಾಗಲೇ ಸೋನುಸೂದ್ ಹೊರನಡೆದಿದ್ದು ದೊಡ್ಡ ಸುದ್ದಿಯಾಗಿದ್ದರೆ, ಇದೀಗ ಚಿತ್ರದ ಸ್ವಾತಿ ಸೀಮ್ವಾಲ ಸೋನು ದಾರಿಯನ್ನು ಹಿಡಿದಿದ್ದು, ಚಿತ್ರದಿಂದ ಹೊರನಡೆದಿದ್ದಾರೆ. ಆಕೆಯ ಪಾತ್ರವನ್ನು ರೀ ಶೂಟ್ ಮಾಡಲು ಇದೀಗ ನಿರ್ಮಾಪಕರು ಸೂಚಿಸಿದ್ದಾರೆ ಎನ್ನಲಾಗಿದೆ.70 ಕೋಟಿಯಿಂದ 100 ಕೋಟಿಗೆ ಏರಿಕೆಯಾದ ಬಜೆಟ್

ಇದ್ದಕ್ಕಿದ್ದಂತೆ ಚಿತ್ರದ ನಿರ್ದೇಶಕರು ಬದಲಾದರು. ಚಿತ್ರದ ಕೊನೆಯ ಹಂತವನ್ನು ಕಂಗನಾ ರಣಾವತ್ ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದರಿಂದ ಕೋಪಕೊಂಡ  ಸೋನುಸೂದ್ ಚಿತ್ರದಿಂದ ಹೊರನಡೆದಿದ್ದರು. ಇದೀಗ ಬಿಗ್ ಬಜೆಟ್ ಚಿತ್ರ ‘ಮಣಿಕರ್ಣಿಕಾ” ದ ಬಜೆಟ್ ಇದ್ದಕ್ಕಿದ್ದಂತೆ 70 ಕೋಟಿಯಿಂದ 100 ಕೋಟಿರೂಪಾಯಿಗೆ ಏರಿಕೆಯಾಗಿದೆ. ಹೀಗಾಗಿ ಜೀ ಸ್ಟುಡಿಯೋದ ಬ್ಯುಸಿನೆಸ್ ಹೆಡ್, ಮಿ. ಸುಜಯ್ ಕುಟ್ಟಿಯನ್ನು ಕಂಪೆನಿಯಿಂದ ಹೊರಹಾಕಲಾಗಿದೆ. ಚಿತ್ರೀಕರಣಕ್ಕೆ ಮಿ ಸುಜಯ್ ಅವರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇದೇ ಕಾರಣಕ್ಕಾಗಿ ಅವರು ಜೀ ಸ್ಟುಡಿಯೋದಿಂದ ಔಟ್ ಆಗಿದ್ದಾರೆ.ನಿರ್ಮಾಪಕರ ಆತಂಕಕ್ಕೆ ಕಾರಣವಾದ ಸಿನಿಮಾ

ದಿನದಿಂದ ದಿನಕ್ಕೆ ಚಿತ್ರದ ಬಜೆಟ್ ಹೆಚ್ಚುತ್ತಲೇ ಇದ್ದು, ಇದು ನಿರ್ಮಾಪಕರ ಆತಂಕಕ್ಕೆ ಕಾರಣವಾಗಿದೆ. ಚಿತ್ರದಿಂದ ಕೆಲವರು ಹೊರನಡೆದಿರುವುದರಿಂದ, ಆ ದೃಶ್ಯಗಳು ರೀ ಶೂಟ್ ಆಗಬೇಕಿದ್ದು, ಇದಕ್ಕಾಗಿ ಬಜೆಟ್ ಏರುತ್ತಲೇ ಇದೆ. ಮೊದಲು ಇದ್ದ ಚಿತ್ರಕತೆಗೆ ಇನ್ನಷ್ಟು ಕತೆಗಳನ್ನು ಸೇರಿಸಿರುವುದರಿಂದ ಚಿತ್ರದ ನಿರ್ದೇಶಕರು ಹೊರನಡೆದಿದ್ದರು. ಇದರ ಬೆನ್ನಲ್ಲೆ, ನಿರ್ದೇಶಕರ ಹೆಸರಿನ ಸ್ಥಳದಲ್ಲಿ ಕಂಗನಾ ಹೆಸರು ಇದ್ದುದ್ದರಿಂದ ಕೋಪಗೊಂಡ ಸೋನುಸೂದ್, ಇಬ್ಬರು ನಿರ್ದೇಶಕರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿ, ಚಿತ್ರದಿಂದ ಹೊರನಡೆದಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರ 2019ರ ಗಣರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ.

Tags