ಸುದ್ದಿಗಳು

ಈ ಇಬ್ಬರೂ ನಟರು ಮೌನಿ ರಾಯ್ ಗೆ ಅತ್ಯುತ್ತಮ ವ್ಯಕ್ತಿಗಳಂತೆ…!

ಅಕ್ಷಯ್ ಮತ್ತು ಜಾನ್ ಅಬ್ರಹಾಂ ಬಗ್ಗೆ ಮಾತನಾಡಿದ ಮೌನಿ

ಮುಂಬೈ, ಸೆ.11: ಬಹುನಿರೀಕ್ಷಿತ ‘ಬ್ರಹ್ಮಾಸ್ತ್ರಾ’ ಚಿತ್ರದ ಕುರಿತಂತೆ ದಿನೇ ದಿನೇ ಕುತೂಹಲ ಹೆಚ್ಚಾಗುತ್ತಲೇ ಇದೆ. ಇದೀಗ ಈ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸುತ್ತಿರುವ ಮೌನಿ ರಾಯ್, ‘ಬ್ರಹ್ಮಾಸ್ತ್ರ’ ದ ಕುರಿತಂತೆ ಹೆಚ್ಚಿನದ್ದೂ ನಾನು ಏನೂ ಹೇಳುವುದಿಲ್ಲ. ಆದರೆ ಚಿತ್ರ ಅತ್ಯುತ್ತಮವಾಗಿದೆ. ನನ್ನದು ವಿಲನ್ ಪಾತ್ರವಾಗಿದೆ ಎಂದಿದ್ದಾರೆ.ಅಕ್ಷಯ್ ಕುಮಾರ್ ಮತ್ತು  ಜಾನ್ ಅಬ್ರಹಾಂ ಅತ್ಯುತ್ತಮ ವ್ಯಕ್ತಿಗಳಂತೆ

ಇದೇ ವೇಳೆ ‘ಗೋಲ್ಡ್’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೆ ಜೋಡಿಯಾಗಿ ಗಮನ ಸೆಳೆದ ಮೌನಿ ರಾಯ್, ತಮ್ಮ ಸಹನಟರ ಕುರಿತಂತೆ ಮಾತನಾಡಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್ ನಲ್ಲಿ ಜಾನ್ ಅಬ್ರಾಹಾಂ ಜೊತೆಗೆ ಮೌನಿ ತೆರೆ ಹಂಚಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಅಷ್ಟೊಂದು ದೊಡ್ಡ ಮಟ್ಟದ ಹೆಸರು ಮಾಡಿದ್ದರೂ ಜಾನ್ ಅಬ್ರಹಾಂ, ಅಕ್ಷಯ್ ಕುಮಾರ್ ಗೆ ಕೊಂಚವೂ ಅಹಂ ಎಂಬುದೇ ಇಲ್ಲ. ಅವರು ಅತ್ಯುತ್ತಮ ಸಹೃದಯರು. ಚಿತ್ರರಂಗಕ್ಕೆ ಬರುವ ಹೊಸಬರಿಗೆ ಅವರು ನಿಜಕ್ಕೂ ಸಾಕಷ್ಟು ಸಹಾಯ ಮಾಡುತ್ತಾರೆ. ಯಾವುದೇ ಹಮ್ಮು ಬಿಮ್ಮಿಲ್ಲದೆ ತಿಳಿಹೇಳುವ ಅವರ ಗುಣಕ್ಕೆ ಸಾಟಿಯೇ ಇಲ್ಲ ಎಂದಿದ್ದಾರೆ ಮೌನಿ.ಜಾನ್ ಅಬ್ರಹಾಂ ಬಗೆಗಿನ ಮೌನಿ

ಜಾನ್ ಅಬ್ರಹಾಂ ಅವರನ್ನು ಮೊದಲ ಬಾರಿಗೆ ನೋಡಿದಾಗ ಭಯವಾಗಿತ್ತು. ಅವರ ಅಥ್ಲೀಟಿಕ್ ಬಾಡಿ, ಗಂಭೀರ್ಯಾ ಕೊಂಚ ಇರಿಸುಮುರಿಸಲಾಗಿತ್ತು. ಆದರೆ ಚಿತ್ರದ ಸೆಟ್ ನಲ್ಲಿ ಅವರು ಸಿಕ್ಕಾಪಟ್ಟೆ ಕಾಮ್ ಆಗಿರುತ್ತಾರೆ. ಹೊಸಬರಿಗೆ ತಿಳಿಹೇಳುವ, ಅವರ ಗುಣದಿಂದಾಗಿ ನನ್ನಂತ ಹೊಸ ಪ್ರತಿಭೆಗೆ ಹೆಚ್ಚು ಸಹಕಾರಿ. ನಾವು ಮನೆಯಲ್ಲಿ ನಮ್ಮ ಕುಟುಂಬ ಸದಸ್ಯರೊಂದಿಗೆ ಇರುವ ಭಾವನೆಯನ್ನು ಅವರು ಸೆಟ್ ನಲ್ಲಿ ತರುತ್ತಾರೆ. ಇದರಿಂದ ಹೊಸಬರು ಬೇಗ ಕಲಿಯಲು ಸಹಾಯವಾಗುತ್ತದೆ ಎನ್ನುವುದು ಮೌನಿ ಅಭಿಪ್ರಾಯ.ಧರ್ಮಾ ಪ್ರೋಡಕ್ಷನ್ ನಲ್ಲಿ ಮೂಡಿಬರುತ್ತಿರುವ ‘ಬ್ರಹ್ಮಾಸ್ತ್ರ’ ದಲ್ಲಿ ಮೌನಿ ನಟಿಸುತ್ತಿದ್ದು, ಪಾತ್ರದ ಬಗ್ಗೆ ಹೆಚ್ಚು ಹೇಳಲು ಅವರು ಹಿಂಜರೆಯುತ್ತಿದ್ದಾರೆ.

Tags