ಸುದ್ದಿಗಳು

ಪೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್, ಸಲ್ಮಾನ್ ಗೆ ಸ್ಥಾನ

ಮುಂಬೈ, ಆ.23:  ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆದ ಟಾಪ್ ಹತ್ತು ನಟರ ಪಟ್ಟಿಯನ್ನು 2018ನೇ  ಪೋರ್ಬ್ಸ್ ಮ್ಯಾಗಜಿನ್ ಬಿಡುಗಡೆಗೊಳಿಸಿದ್ದು, ಅದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಸ್ಥಾನ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಅಕ್ಷಯ್ ಕುಮಾರ್ ಪಡೆದರೆ, ಸಲ್ಮಾನ್ ಖಾನ್ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಅಕ್ಷಯ್ ಕುಮಾರ್ ಇತ್ತೀಚಿಗೆ ನಟಿಸಿರುವ ‘ಗೋಲ್ಡ್’ ಚಿತ್ರಕ್ಕೆ 40.5 ಮಿಲಿಯನ್ ಡಾಲರ್ ಪಡೆದಿದ್ದು, ಭಾರತದ ನಟರಲ್ಲಿಯೇ ಈ ವರ್ಷ ಅತಿ ಹೆಚ್ಚು ಸಂಭಾವನೆ ಪಡೆದವರು ಎಂದೆನಿಸಿಕೊಂಡಿದ್ದಾರೆ. ಅಂತೆಯೇ 38.5 ಮಿಲಿಯನ್ ಅಮೆರಿಕನ್ ಡಾಲರ್ ಗಳಿಸುವ ಮೂಲಕ ಸಲ್ಮಾನ್ ಖಾನ್ 9ನೇ ಸ್ಥಾನದಲ್ಲಿದ್ದಾರೆ.ಈ ಪಟ್ಟಿ ಬಿಡುಗಡೆಯಾಗುವ ಮುನ್ನ ಕಳೆದ ತಿಂಗಳು ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ 2018ನೇ ಸಾಲಿನ ಟಾಪ್ ನೂರು ಅತಿ ಹೆಚ್ಚು ಸಂಭಾವನೆ ಪಡೆದ ಮನರಂಜನೆಗಾರರ ಪಟ್ಟಿಯಲ್ಲಿ ಕೂಡಾ ಸ್ಥಾನಗಳಿಸಿದ್ದರು ಎಂಬ ಸುದ್ದಿ ಬಂದಿತ್ತು. ಆ ಪಟ್ಟಿಯಲ್ಲಿ  ಅಕ್ಷಯ್ ಕುಮಾರ್ 76ನೇ ಸ್ಥಾನದಲ್ಲಿದ್ದರೆ, ಸಲ್ಮಾನ್ ಖಾನ್ 82ನೇ ಸ್ಥಾನ ಪಡೆದಿದ್ದರು. ಸದ್ಯಕ್ಕೆ ಬಾಲಿವುಡ್ ಚಿತ್ರರಂಗದಲ್ಲಿ ಈ ಇಬ್ಬರು ನಟರು ಬಹು ಬೇಡಿಕೆಯನ್ನು ಹೊಂದಿದ್ದು, ಅತಿ ಹೆಚ್ಚು ಸಂಭಾವನೆಯನ್ನೂ ಪಡೆಯುತ್ತಿದ್ದಾರೆ.

ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಟಾಪ್ 10 ನಟರ ಪಟ್ಟಿಯು ಹೀಗಿದೆ

ಜಾರ್ಜ್ ಕ್ಲೂನಿ ಎಂಬುವವರು 239 ಡಾಲರ್ ಗಳಿಸಿದ್ದು ಮೊದಲ ಸ್ಥಾನದಲ್ಲಿದ್ದಾರೆ. 124 ಮಿಲಿಯನ್ ಡಾಲರ್ ಗಳಿಸುವ ಮೂಲಕ ದ್ವಾಯ್ನೆ ಜಾನ್ಸನ್ ದ್ವಿತೀಯ ಸ್ಥಾನದಲ್ಲಿದ್ದರೆ,  ರಾಬರ್ಟ್ ಡೌನಿ ಜ್ಯೂನಿಯರ್ 81 ಮಿಲಿಯನ್ ಗಳಿಸುವ ಮೂಲಕ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 64.5 ಮಿಲಿಯನ್ ಡಾಲರ್ ಗಳಿಸುವ ಮೂಲಕ ಕ್ರಿಸ್ ಹೆಮ್ಸ್ ವರ್ತ್ ನಾಲ್ಕನೇ ಸ್ಥಾನದಲ್ಲಿದ್ದು,  45.5 ಮಿಲಿಯನ್ ಡಾಲರ್ ಗಳಿಸಿರುವ ಜಾಕಿ ಚಾನ್ 5 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 6 ಸ್ಥಾನ ಪಡೆದಿರುವ ವಿಲ್ ಸ್ಮಿತ್ 42 ಮಿಲಿಯನ್ ಡಾಲರ್ ಗಳಿಸಿದ್ದಾರೆ. ಭಾರತದ ಅಕ್ಷಯ್ ಕುಮಾರ್ 7 ನೇ ಸ್ಥಾನದಲ್ಲಿದ್ದು, ಅಡಮ್ ಸ್ಯಾಂಡ್ಲರ್ 8ನೇ ಸ್ಥಾನ ಗಳಿಸುವುದರ ಮೂಲಕ 39.5 ಮಿಲಿಯನ್ ಡಾಲರ್ ಗಳಿಸಿದ್ದಾರೆ. 9ನೇ ಸ್ಥಾನದಲ್ಲಿರುವ ಬಾಲಿವುಡ್ ತಾರೆ ಸಲ್ಮಾನ್ ಖಾನ್ 38.5 ಮಿಲಿಯನ್ ಡಾಲರ್ ಗಳಿಸಿದ್ದರೆ, 34 ಮಿಲಿಯನ್ ಡಾಲರ್ ಗಳಿಸುವ ಮೂಲಕ ಕ್ರಿಸ್ ಎವನ್ಸ್ 10ನೇ ಸ್ಥಾನ ಪಡೆದಿದ್ದಾರೆ.

Tags

Related Articles