ಸುದ್ದಿಗಳು

ಶಾಹೀದ್ ಮತ್ತು ಸೈಫ್ ನಡುವಿನ ಸ್ಟಾರ್ ವಾರ್ ಗೆ ಕಾರಣವಾದ ‘ಗಡ್ಡ’…!

ಮುಂಬೈ, ಸೆ.12: ಚಿತ್ರರಂಗದಲ್ಲಿ ನಟರ ಮಧ್ಯೆ ಹಾಗೂ ನಟಿಯರ ಮದ್ಯೆ ಸದಾ ಒಂದು ಉತ್ತಮ ಪೈಪೋಟಿ ಇದ್ದೆ ಇದೆ. ಇನ್ನೂ ಕೆಲವೆಡೆ ಇದು ಕೊಂಚ ಅತಿರೇಖಕ್ಕೆ ಹೋಗಿ, ಸ್ಟಾರ್ ವಾರ್ ಗೆ ಕಾರಣವಾಗಿದ್ದೂ ಇದೆ. ಇದೀಗ ನಟ ಸೈಫ್ ಅಲಿಖಾನ್ ಹಾಗೂ ಶಾಹೀದ್ ಕಪೂರ್ ನಡುವೆ ಸ್ಟಾರ್ ವಾರ್ ಶುರುವಾಗಿದೆಯಂತೆ. ಚಿತ್ರರಂಗದ ಒಂದು ಮೂಲಗಳ ಪ್ರಕಾರ, ಶಾಹೀದ್ ಕಪೂರ್ ಅವರ ಮಾಜಿಗೆಳತಿ ಕರೀನಾ ಕಪೂರ್  ಪತಿ ಸೈಫ್ ಅಲಿಖಾನ್ , ಶಾಹೀದ್ ಕಪೂರ್ ಜೊತೆಗೆ ಒಂಥರ ಕೋಲ್ಡ್ ವಾರ್ ಇಟ್ಟುಕೊಂಡಿದ್ದಾರಂತೆ.ಸ್ಟಾರ್ ವಾರ್ ಗೆ ಕರೀನಾ ಕಾರಣವಲ್ಲ!

ಆದರೆ ಇವರಿಬ್ಬರ ಸ್ಟಾರ್ ವಾರ್ ಗೆ ಕರೀನಾ ಕಪೂರ್ ಕಾರಣವಲ್ಲ. ಹಾಗಾದರೆ ‘ಬಟ್ಟಿ ಗುಲ್ ಮೀಟರ್ ಚಾಲು’ ನಟ ಶಾಹೀದ್ ಹಾಗೂ , ‘ಸ್ಕೇರ್ಡ್ ಗೇಮ್ಸ್’ ನಟನ ನಡುವಿನ ಕೋಲ್ಡ್ ವಾರ್ ಗೆ ಕಾರಣವೇನು?. ಶಾಹೀದ್ ಬಹಿರಂಗವಾಗಿಯೇ ಸೈಫ್ ಗೆ ಹಾಕಿದ ಸವಾಲು ಏನು ಗೊತ್ತೆ?ಗಡ್ಡದಲ್ಲಿ ಅಡಗಿದ ರಹಸ್ಯ

ಶಾಹೀದ್ ಕಪೂರ್ , ತಾನು ನವಾಬ್ ಗಿಂತ ಉದ್ದವಾದ ಗಡ್ಡವನ್ನು ಬೆಳೆಸುವುದಾಗಿ ಸವಾಲು ಹಾಕಿದ್ದಾರಂತೆ. ನವ್ ದೀಪ್ ಸಿಂಗ್ ನಿರ್ದೇಶನದ ‘ಹಂಟರ್’ ಚಿತ್ರಕ್ಕಾಗಿ ಸೈಫ್ ಅಲಿಖಾನ್ ಗಡ್ಡ ಬೆಳೆಸಿದ್ದು, ಇದನ್ನು ನೋಡಿ ಹೊಟ್ಟೆ ಉರಿದುಕೊಂಡಿರುವ ಶಾಹೀದ್ ತಾನು ಇದಕ್ಕಿಂತ ಉದ್ದಕ್ಕೆ ಗಡ್ಡ ಬೆಳೆಸಿಕೊಳ್ಳುವುದಾಗಿ ಹೇಳಿದ್ದಾರಂತೆ.  ಸೈಫ್ ಅಲಿಖಾನ್ ‘ಹಂಟರ್’ ಚಿತ್ರದಲ್ಲಿ ನಾಗಸಾಧುವಾಗಿ ಕಾಣಿಸಿಕೊಂಡಿದ್ದು ಹೀಗಾಗಿ ಗಡ್ಡ ಬೆಳೆಸಿದ್ದಾರೆ.

Tags