ಸುದ್ದಿಗಳು

‘ಎಂಎಸ್ ಧೋನಿ’ ಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಬಾಲಿವುಡ್ ಬೆಡಗಿಯರಿವರು!

ಕ್ರಿಕೇಟ್ ಆಟಗಾರ ಎಂ ಎಸ್ ಧೋನಿ, ಮೈದಾನಕ್ಕಿಳಿದರೆಂದರೆ ಸಾವಿರಾರು ಮಂದಿ ಕ್ರಿಕೆಟ್ ಅಭಿಮಾನಿಗಳ ಕಣ್ಣು ಅವರ ಮೇಲೆಯೇ ನೆಟ್ಟಿರುತ್ತಿತ್ತು. 37ರ ಹರೆಯದ ಎಂ ಎಸ್ ಧೋನಿ ಯಶಸ್ವಿಯಾಗಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಮುನ್ನಡೆಸಿಕೊಂಡು ಬಂದವರು. ರಾಂಚಿಯ ಈ ಹುಡುಗನ ಆಟದ ವೈಖರಿಗೆ ಅದೆಷ್ಟೋ ಯುವತಿಯರು ಫಿದಾ ಆಗಿದ್ದರೆ, ಬಾಲಿವುಡ್ ಬೆಡಗಿಯರು ಕೂಡ ಧೋನಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು ಸುಳ್ಳಲ್ಲಾ. ಇದೀಗ ಸಾಕ್ಷಿಯನ್ನು ವರಿಸಿರುವ ಧೋನಿಗೆ, ಜೀವಾ ಎಂಬ ಮುದ್ದಾದ ಹೆಣ್ಣು ಮಗುವು ಇದೆ. ಮದುವೆಗೂ ಮುಂಚೆ ಧೋನಿಯ ಜೊತೆಗೆ ಹಲವು ಬಾಲಿವುಡ್ ಬೆಡಗಿಯರ ಹೆಸರು ಥಳಕು ಹಾಕಿಕೊಂಡಿತ್ತು.

ಎಂಎಸ್ ಧೋನಿ-ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಹಾಗೂ ಎಂ ಎಸ್ ಧೋನಿಯ ಹೆಸರು 2007ರಲ್ಲಿ ರೂಮರ್ ಗೆ ಕಾರಣವಾಯಿತು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಎಂ ಎಸ್ ಧೋನಿ, ನನಗೆ ನಟಿ ದೀಪಿಕಾ ಪಡುಕೋಣೆಯೆಂದರೆ ಇಷ್ಟ ಎಂದಿದ್ದರು. ಒಂದು ಮೂಲಗಳ ಪ್ರಕಾರ ಡಿಂಪಲ್ ಸುಂದರಿಯ ಮೇಲೆ ಪ್ರೀತಿಗೆ ಬಿದ್ದಿದ್ದರು ಎಂ ಎಸ್ ಧೋನಿ ಎನ್ನಲಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ 20 ಪಂದ್ಯ ವೀಕ್ಷಣೆಗೂ ನಟಿಯನ್ನು ಧೋನಿ ಆಹ್ವಾನಿಸಿದ್ದರು. ಉದ್ದ ಕೂದಲೊಂದಿಗೆ ಕ್ರಿಕೆಟ್ ಜಗತ್ತಿಗೆ ಪರಿಚಿತರಾದ ಧೋನಿ, ದೀಪಿಕಾ ಉದ್ದ ಕೂದಲಿನ ಹುಡುಗರನ್ನು ಇಷ್ಟಪಡುವುದಿಲ್ಲ ಎಂಬ ಕಾರಣಕ್ಕಾಗಿ ಕೂದಲನ್ನು ಟ್ರಿಮ್ ಮಾಡಿದ್ದರು ಎಂದೂ ಕೂಡ ಕೆಲವರು ಹೇಳುತ್ತಾರೆ. ಆದರೆ ಇದನ್ನು ಎಂ ಎಸ್ ಧೋನಿ ನಿರಾಕರಿಸುತ್ತಲೇ ಬಂದಿದ್ದಾರೆ.

ಧೋನಿ- ಪ್ರೀತಿ ಸಿಮೋಯ್

ಕಪಿಲ್ ಶರ್ಮಾ ಅವರ ಗೆಳತಿ ಪ್ರೀತಿ ಜೊತೆಯೂ ಧೋನಿ ಹೆಸರು ಕೇಳಿಬಂದಿತ್ತು. ಕಪಿಲ್ ಶರ್ಮಾ ಜೊತೆಗೆ ಸ್ನೇಹದಲ್ಲಿದ್ದ ಧೋನಿ, ಬಳಿಕ ಪ್ರೀತಿ ಸಿಮೋಯ್ ಜೊತೆಗೆ ಪ್ರೀತಿ ಪ್ರೇಮ ಎಂದು ಡೇಟಿಂಗ್ ಮಾಡಿದ್ದರು ಎಂಬ ಸುದ್ದಿಯೂ ಹರಿದಾಡಿತ್ತು.

ಧೋನಿ – ಆಸಿನ್

ದಕ್ಷಿಣ ಭಾರತದ ನಟಿ ಆಸಿನ್, ಗಜಿನಿ ಚಿತ್ರದ ಬಳಿಕ ಬಾಲಿವುಡ್ ನಲ್ಲೂ ಗಮನ ಸೆಳೆದವರು. ಪ್ಯಾಷನ್ ಬ್ರಾಂಡ್ ಒಂದರ ಅಂಬಾಸಿಡರ್ ಆಗಿದ್ದ ಧೋನಿ ಮತ್ತು ಆಸಿನ್ ನಡುವೆ ಬೆಳೆದ ಸ್ನೇಹ, ಬಳಿಕ ಪ್ರೀತಿಗೆ ತಿರುಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. 2010 ರ ಐಪಿಎಲ್ ಸೆಮಿಪೈನಲ್ ಸಂದರ್ಭದಲ್ಲಿ ಆಸಿನ್ ಮನೆಗೆ ಧೋನಿ ಹೋಗಿದ್ದು ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ಧೋನಿ ಹಾಗೂ ಸಾಕ್ಷಿಯ ನಿಶ್ಚಿತಾರ್ಥ ನೆರವೇರಿತ್ತು. 2011ರಲ್ಲಿ ಶ್ರೀಲಂಕಾದಲ್ಲಿ ನಡೆದ ಇವೆಂಟ್ ಗೂ ಇವರಿಬ್ಬರು ಜೊತೆಯಾಗಿಯೇ ಸಾಗಿದ್ದರು.

ಧೋನಿ – ರಾಯ್ ಲಕ್ಷ್ಮೀ

ರಾಯ್ ಲಕ್ಷ್ಮಿ ಮತ್ತು ಧೋನಿ  2009ರಲ್ಲಿ ಡೇಟಿಂಗ್ ನಲ್ಲಿದ್ದರು ಎಂಬುದು ಮಾಧ್ಯಮಗಳಲ್ಲಿ ಹರಿದಾಡಿದ ಸುದ್ದಿ. ಈ ವಿಚಾರವನ್ನು ಮಾಧ್ಯಮದೊಂದಿಗೆ ಮಾತನಾಡಿದ ವೇಳೆ ರಾಯ್ ಲಕ್ಷ್ಮೀ ಒಪ್ಪಿಕೊಂಡಿದ್ದರೂ ಕೂಡ. ಆದರೆ ಈ ರೂಮರ್ ಕೆಲವೇ ದಿನಗಳ ಕಾಲ ಓಡಿ ಬಳಿಕ ತಣ್ಣಗಾಯಿತು.

Tags

Related Articles

Leave a Reply

Your email address will not be published. Required fields are marked *