ಸುದ್ದಿಗಳು

ಸಲ್ಮಾನ್ ಮದುವೆಯಾಗಲು ಬಂದ ಯುವತಿ…!

ನಾನು ಸಲ್ಮಾನ್ ಮದುವೆಯಾಗಲು ಮುಂಬೈಗೆ ಬಂದಿದ್ದೇನೆ ಎಂದ ಮಾನಸಿಕ ಅಸ್ವಸ್ಥೆ.

ಮುಂಬೈ, ಸೆ.07: ನೆಚ್ಚಿನ ನಟರನ್ನು ನೋಡಬೇಕು, ಅವರೊಟ್ಟಿಗೆ ಇರಬೇಕು ಅಂತ ಅಭಿಮಾನಿಗಳು ಅಂದುಕೊಂಡ್ರೆ, ಇನ್ನೊಂದಿಷ್ಟು ಮಂದಿ ಯುವತಿಯರು ನೆಚ್ಚಿನ ನಟರನ್ನು ಮದುವೆಯಾಗಲು ಬಯಸುತ್ತಾರೆ. ಅಂಥಹ ಘಟನೆಗಳು ಈಗಾಗಲೇ ಸಾಕಷ್ಟು ನಡೆದಿವೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆಯಾಗೋದಿಕ್ಕೆ ಮುಂಬೈಗೆ ಯುವತಿಯೊಬ್ಬಳು ಬಂದಿದ್ದು, ಪೊಲೀಸರು ಈ ಯುವತಿಯನ್ನು ವಶಕ್ಕೆ ಪಡೆದಿದ್ದಾರಂತೆ.ಬಾಂದ್ರಾದ ಗ್ಯಾಲಾಕ್ಸಿ ಅಪಾರ್ಟ್ ಮೆಂಟ್ ಬಳಿ ಅಸ್ವಸ್ಥೆ

ಹೌದು, ಆಗಷ್ಟ್ ೧೧ ರಂದು ಮಾನಸಿಕ ಅಸ್ವಸ್ಥೆಯೊಬ್ಬರು ಮನೆ ಬಿಟ್ಟು ಮುಂಬೈಗೆ ಬಂದಿರೋದಾಗಿ ವರದಿಯಾಗಿದೆ. ಸಲ್ಮಾನ್ ಉಳಿದುಕೊಂಡಿರುವ ಬಾಂದ್ರಾದ ಗ್ಯಾಲಾಕ್ಸಿ ಅಪಾರ್ಟ್ ಮೆಂಟ್ ಬಳಿ ಬಂದಿದ್ದಾರೆ. ಆ ಕಟ್ಟಡದ ಸೆಕ್ಯುರಿಟಿ ಅವರನ್ನು ಒಳಗೆ ಬಿಟಿಲ್ಲ. ತನ್ನನ್ನು ಒಳಗೆ ಬಿಡುವಂತೆ ಗಲಾಟೆ ಕೂಡ ಮಾಡಿದ್ದಾರಂತೆ. ಇನ್ನು ಒಳಗೆ ಬಿಡದ ಕಾರಣ ಅಲ್ಲಿಯೇ ಓಡಾಡುತ್ತಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ನಾನು ಸಲ್ಮಾನ್ ಮದುವೆಯಾಗಲು ಬಂದಿದ್ದೇನೆ ಎಂದ ಆ ಹುಡುಗಿ

ಇನ್ನು ಇವರನ್ನು ವಶಕ್ಕೆ ಪಡೆದಿರುವ ಪೊಲೀಸರು, ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಆಗ ಮಾನಸಿಕ ಅಸ್ವಸ್ಥೆ ಅನ್ನೋದು ಸಾಬೀತಾಗಿದೆ. ಇನ್ನು ಪೊಲೀಸರು ಬಂಧೀಸಿದಾಗ ನಾನು ಸಲ್ಮಾನ್ ಮದುವೆಯಾಗಲು ಬಂದಿದ್ದೇನೆ ಎಂದಿದ್ದಾರೆ ಆ ಹುಡುಗಿ. ಇನ್ನು ಈ ಹುಡುಗಿಗೆ ಆಗಷ್ಟ್ ೨೯ ರಂದು ಕೆಲವೊಂದು ಫೋನ್ ಗಳು ಬಂದಿದ್ದಾವೆ. ಅದರಲ್ಲಿ ಅವರ ಅಪ್ಪ ಕೂಡಾ ಕರೆ ಮಾಡಿದ್ದಾರೆ. ನಂತರ ಆ ನಂಬರ್‌ ಗೆ ಪುನಃ ಕರೆ ಮಾಡಿರುವ ಪೊಲೀಸರು ಮಗಳನ್ನು ತಂದೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

Tags

Related Articles