ಸುದ್ದಿಗಳು

ತನ್ನ ಕೆಂಪು ಕೂದಲಿನಿಂದ ಟ್ರೋಲ್ ಗೆ ಒಳಗಾದ ಬಾಲಿವುಡ್ ಬೆಡಗಿ

ಈ ಕೆಂಪು ಬಣ್ಣದ ಕೂದಲನ್ನು ಕಂಡ ಅಭಿಮಾನಿಗಳು ಇವರಿಗೆ ಈ ಕೂದಲು ಚೆನ್ನಾಗಿ ಕಾಣಿಸುತ್ತಿಲ್ಲ...ಎನ್ನುವುದೇ..?!

ಪರಿಣಿತಿ ಮಾಡಿಕೊಂಡಿರುವ ಕೆಂಪು ಬಣ್ಣದ  ಕೂದಲಿನಿಂದ ಅವರ ಅಭಿಮಾನಿಗಳಿಗೆ ಇಷ್ಟವಾಗದ ಕಾರಣಕ್ಕಾಗಿ ಎಲ್ಲೆಡೆ ಟ್ರೋಲ್ ಗೆ ಗುರಿಯಾಗಿದ್ದಾರೆ.

ಮುಂಬೈ, ಆ.31: ಬಾಲಿವುಡ್ ನ ಮುದ್ದು ಮುಖದ ಸುಂದರಿ ಪರಿಣಿತಿ ಚೋಪ್ರಾ. ತನ್ನ ನಟನೆಯಿಂದ ಹಿಂದಿ ಚಿತ್ರರಂಗದಲ್ಲಿ  ತನ್ನ ನೆಲೆಯನ್ನು ಕಂಡುಕೊಂಡಿದ್ದಾರೆ. ಇತ್ತೀಚೆಗೆ ಪರಿಣಿತಿ ಚೋಪ್ರಾ ತಾನು ಧರಿಸಿದ್ದ ಬಟ್ಟೆಯಿಂದಾಗಿ ಟ್ರೋಲ್ ಗೆ ಒಳಗಾಗಿದ್ದರು. ಸಿನಿಮಾ ಪ್ರಮೋಶನ್ ಗಾಗಿ ತೆರಳಿದ್ದ ವೇಳೆ ಬಿಗಿಯಾದ ನೀಲಿ ಉಡುಗೆಯನ್ನು ತೊಟ್ಟು, ಬಟ್ಟೆಯನ್ನು ಸರಿಮಾಡಿಕೊಳ್ಳುವುದನ್ನು ಕಂಡು ಮುಜುಗರಕ್ಕೆ ಒಳಗಾಗಿದ್ದರು.ಮತ್ತೆ ಸುದ್ದಿಯಾದ ಪರಿಣಿತಿ

ಇದೀಗ ಮತ್ತೆ ಈ ನಟಿ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು, ಪರಿಣೀತಿ ತನ್ನ ಮುಂದಿನ ಸಿನಿಮಾಗಾಗಿ ತನ್ನ ಕೂದಲನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿಕೊಂಡಿದ್ದಾರೆ. ಇವರ ಈ ಕೆಂಪು ಬಣ್ಣದ ಕೂದಲನ್ನು ಕಂಡ ಅಭಿಮಾನಿಗಳು ಇವರಿಗೆ ಈ ಕೂದಲು ಚೆನ್ನಾಗಿ ಕಾಣಿಸುತ್ತಿಲ್ಲ. ಇವರಿಗೆ ಈ ಕೂದಲು ಬೇಕಿತ್ತಾ? ಎಂಬ  ಭಾರೀ ಚರ್ಚಗೆ ಗ್ರಾಸವಾಗಿದೆ… ಸಂದರ್ಶನದಲ್ಲಿ ಮಾತನಾಡಿದ ಪರಿಣಿತಿ

ಸಂದರ್ಶನವೊಂದರಲ್ಲಿ ಮಾತನಾಡಿದ ಪರಿಣಿತಿ, ನನ್ನ ಮುಂದಿನ ಸಿನಿಮಾದಲ್ಲಿ ಕೆಂಪು ಬಣ್ಣದ ಕೂದಲನ್ನು ಮಾಡಿಕೊಳ್ಳಬೇಕೆಂದು ಚಿತ್ರದ ನಿರ್ಮಾಪಕರು ಹೇಳಿದ್ದರು. ಅದರ ಸಲುವಾಗಿ ನಾನು ನನ್ನ ಕೂದಲನ್ನು ಕೆಂಪು ಬಣ್ಣವಾಗಿ ಬದಲಾಯಿಸಿಕೊಂಡೆ ಎಂದು ಹೇಳಿದ್ದಾರೆ.ಈ ಹಿಂದೆ ಕತ್ರೀನಾ ಕೈಫ್ ಕೂಡಾ ತಮ್ಮ ಕೂದಲನ್ನು ಕೆಂಪು ಬಣ್ಣವಾಗಿ ಬದಲಾಯಿಸಿಕೊಂಡಿದ್ದರು.  ಆ ಕೂದಲಿನಿಂದ ಕತ್ರೀನಾ ಚೆನ್ನಾಗಿ ಸಹ ಕಾಣಿಸಿಕೊಂಡಿದ್ದರು. ಪರಿಣಿತಿ ಮತ್ತು ಕತ್ರೀನಾ ರವರನ್ನು ಹೋಲಿಕೆ ಮಾಡಿ ನೋಡಿದ ಜನರು ಪರಿಣಿತಿ ನಿನಗೆ ಈ ಕೂದಲು ಚೆನ್ನಾಗಿ ಕಾಣುತ್ತಿಲ್ಲ ಎನ್ನುವುದರ ಮೂಲಕ ಪರಿಣಿತಿ ಎಲ್ಲಡೆ ಸುದ್ದಿಯಾಗಿದ್ದಾರೆ.

 

Tags

Related Articles