ಸುದ್ದಿಗಳು

ಜನರು ನನ್ನ ಪೋಷಕರ ಬಳಿ, ನನ್ನ ಬಗ್ಗೆ ಹೇಳುತ್ತಿದ್ದ ದೂರುಗಳಿಂದ ನಾನು ಬೇಸತ್ತಿದ್ದೆ- ಸಲ್ಮಾನ್ ಖಾನ್…!

ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೆಚ್ಚು ಮನೆಮಾತಾದ ಸಲ್ಲು

ಮುಂಬೈ, ಸೆ.11: ಸಲ್ಮಾನ್ ಖಾನ್ ಉತ್ತಮ ನಟ ಎಂಬುವುದರಲ್ಲಿ ಎರಡು ಮಾತಿಲ್ಲ. ಕ್ಯಾಮೆರಾ ಎದುರು ನಿಂತರೆಂದರೆ ಸಲ್ಲು ಅಭಿಮಾನಿಗಳು ಕೊಟ್ಟ ದುಡ್ಡಿಗೆ ಮೋಸ ಮಾಡುವುದಿಲ್ಲ. ಇನ್ನೂ ನಿರ್ಮಾಪಕರಿಗೂ ಹಾಕಿದ ಬಂಡವಾಳ ವಾಪಸ್ಸಾಗುವುದು ಗ್ಯಾರಂಟಿ. ಪಾತ್ರವನ್ನು ತಾನಾಗಿಸಿ ನಟಿಸುವ ಸಲ್ಮಾನ್ ಖಾನ್ ಎಂದರೆ ಅಭಿಮಾನಿಗಳಿಗೆ ಹಚ್ಚು ಪ್ರೀತಿ.

ಕಾಂಟ್ರೋವರ್ಸಿಗಳಿಂದ ಹೆಚ್ಚು ಸುದ್ದಿಯಾಗುವ ಸಲ್ಲು

ಈ ನಡುವೆ ನಟನೆಯಿಂದ ಗಮನ ಸೆಳೆಯುವ ಸಲ್ಮಾನ್ ಖಾನ್, ಕಾಂಟ್ರೋವರ್ಸಿಗಳಿಂದಲೂ ಹೆಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಅವರ ವೈಯಕ್ತಿಕ ಬದುಕು ಹಾಗೂ ಕಾನೂನು ವಿಚಾರಗಳು ಕೂಡ ಮಾಧ್ಯಮಗಳಿಗೆ ಆಹಾರ. ‘ದಸ್ ಕಾ ದಮ್’ ಬಳಿಕ ಇದೀಗ ಬಿಗ್ ಬಾಸ್ ರಿಯಾಲಿಟಿ ಶೋ  ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.ಬೇಸರ ವ್ಯಕ್ತಪಡಿಸಿದ ಸಲ್ಮಾನ್ ಖಾನ್

ಈ ನಡುವೆ ರಿಯಾಲಿಟಿ ಶೋ ಕುರಿತಂತೆ ಮಾತನಾಡಿರುವ ಸಲ್ಮಾನ್ ಖಾನ್, ಟಿವಿ ಶೋ ನಡೆಸುವುದು ಎಂದರೆ ನನಗೆ ಭಯವಾಗುತ್ತದೆ. ನನ್ನ ಜೊತೆ ವಿವಾದಗಳು ಹುಟ್ಟಿಕೊಳ್ಳುತ್ತಲೇ ಇದ್ದು, ನಾನು ಟಿವಿ ಶೋ ನಲ್ಲಿ ನನ್ನ ನೈಜತೆಯನ್ನು ಪ್ರದರ್ಶಿಸುತ್ತಿದ್ದೇನೆ. ಆದರೆ ಪ್ರೇಕ್ಷಕರು ನನ್ನ ಪೋಷಕರಿಗೆ ಕರೆ ಮಾಡಿ, ಸಲ್ಮಾನ್ ಹೀಗೆ ಮಾಡಿದ ಹಾಗೆ ಮಾಡಿದ ಎಂದು ಒಂದಷ್ಟು ದೂರುಗಳನ್ನು ನೀಡುತ್ತಿರುವುದರಿಂದ ನಾನು ಇಕ್ಕಟ್ಟಿಗೆ ಸಿಲುಕುತ್ತಿದ್ದೇನೆ. ನನ್ನ ಪೋಷಕರಿಗೆ ನನ್ನ ಬಗ್ಗೆ ಗೊತ್ತಿದೆ ಆದರೂ ಜನ ಈ ರೀತಿ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಭಯದ ಪರಿಸ್ಥಿತಿಯಲ್ಲಿ ಸಲ್ಲು ಪೋಷಕರು

ನನ್ನ ಮನೆಯ ಸುತ್ತ ಪೊಲೀಸರು ಬಂದರೆ ನನ್ನ ಪೋಷಕರು ಸಿಕ್ಕಾಪಟ್ಟೆ ಭಯಪಡುತ್ತಾರೆ. ಒಂದು ದಿನ ಇದ್ದಕ್ಕಿದ್ದಂತೆ ನನ್ನ ಮನೆಯ ಕಾಂಪೌಂಡ್ ಒಳಗೆ ಪೊಲೀಸ್ ಒಬ್ಬ ಬಂದಿದ್ದಾನೆ. ಇದನ್ನು ನೋಡಿದ ನನ್ನ ತಾಯಿ ಸಿಕ್ಕಾಪಟ್ಟೆ ಭಯಪಟ್ಟು ಏನಾಯಿತು ಎಂದು ಕೇಳಿದ್ದಾರೆ. ಆತ ಮನೆಯ ನಾಲ್ಕನೆ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಉತ್ತರಿಸುತ್ತಾನೆ. ಪೊಲೀಸರು ಉತ್ತಮ ಕಾರ್ಯಕ್ಕಾಗಿ ನಮ್ಮ ಮನೆಯ ಗೇಟ್ ಒಳಗೆ ಬಂದರೂ ನನ್ನ ಪೋಷಕರಿಗೆ ಭಯವಾಗುತ್ತದೆ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಲ್ಮಾನ್ ಹೇಳಿಕೊಂಡಿದ್ದಾರೆ.

Tags