ಸುದ್ದಿಗಳು

ಸಲ್ಲು ಮನೆಗೆ ಗಣಪ

ಮುಂಬೈ, ಸೆ.14: ಗಣೇಶ ಹಬ್ಬ ಭಾವೈಕ್ಯತೆಯ ಸಂಕೇತ, ಜಾತಿ, ಭೇದ ಭಾವವಿಲ್ಲದೆ ಎಲ್ಲರೂ ಈ ಹಬ್ಬವನ್ನು  ಒಟ್ಟಾಗಿ ಆಚರಿಸುವುದು ಸಾಮಾನ್ಯ, ನಟ ಸಲ್ಮಾನ್  ಖಾನ್ ಕೂಡ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ.

ಹೌದು, ಗಣೇಶ ಹಬ್ಬ ಬಂದರೆ ಸಾಕು ಎಲ್ಲರೂ ಒಟ್ಟಾಗಿ ಹಬ್ಬ ಆಚರಣೆ ಮಾಡಿ ಖುಷಿ ಪಡುತ್ತಾರೆ. ಈಗಾಗಲೇ ಹಬ್ಬದ ವಾತಾರವಣ ಎಲ್ಲೆಡೆ ಮನೆ ಮಾಡಿದೆ. ಇನ್ನು ಮುಸ್ಲಿಂ ಬಾಂದವರು ಕೂಡ ಹಬ್ಬವನ್ನು  ವಿಜೃಂಭಣೆಯಿಂದ ಮಾಡುತ್ತಿದ್ದಾರೆ.

ಸಲ್ಮಾನ್ ಖಾನ್ ಮನೆಗೂ ಗಣಪತಿ ಆಗಮಿಸಿದ್ದಾನೆ. ನಿನ್ನೆ, ಅದ್ಧೂರಿಯಾಗಿ ಸಲ್ಲು ಮನೆಯಲ್ಲಿ ಹಬ್ಬ ಆಚರಣೆ ಮಾಡಿದ್ದಾರೆ. ಸಲ್ಲು ಸಹೋದರಿ ಅರ್ಪಿತಾ ಖಾನ್ ಗಣೇಶ ಮೂರ್ತಿ ಕೊಂಡೊಯ್ದು ಶಾಸ್ತ್ರೋಕ್ತವಾಗಿ ಹಬ್ಬವನ್ನು  ಆಚರಣೆ ಮಾಡಿದ್ದಾರೆ.

Tags

Related Articles