ಸುದ್ದಿಗಳು

ಸೋಲರಿಯದ ಸುಲ್ತಾನಾ ಈ ಸಲ್ಲು ಭಾಯ್

ಬದುಕಿನ  ಏರುಪೇರುಗಳನ್ನು ಸಲೀಸಾಗಿ ಏರಿದವ

ವೃತ್ತಿ ಜೀವನದ ಜೊತೆ ಜೊತೆಗೆ ಕೆಲವೊಂದು ವೈಯಕ್ತಿಕ ಕಾರಣಗಳಿಗಾಗಿಯೂ ಸಲ್ಮಾನ್ ಖಾನ್ ಸುದ್ದಿಯಾದವರು.ಹಿಟ್ ಆಂಡ್ ರನ್ ಪ್ರಕರಣ, ಕೃಷ್ಣ ಮೃಗ ಬೇಟೆ ಪ್ರಕರಣಗಳು ಸಲ್ಮಾನ್ ಖಾನ್ ಅವರನ್ನು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದರೆ, ನಟಿಯರೊಂದಿಗಿನ ಪ್ರೇಮ ಪ್ರಸಂಗಗಳು ಅವರಿಗೆ ಬ್ಯಾಡ್ ಬಾಯ್ ಪಟ್ಟಕೇರಿಸಿತು.

ಮುಂಬೈ, ಆ-27: ಸಲ್ಮಾನ್ ಧಭಾಂಗ್ 2010ರ ಸೆಪ್ಟೆಂಬರ್ 10ಕ್ಕೆ ಬೆಳ್ಳಿ ತೆರೆಯನ್ನು ಅಪ್ಪಳಿಸಿತ್ತು. 2012ರಲ್ಲಿ ಧಭಾಂಗ್ -2 ದೊಡ್ಡ ಯಶಸ್ಸು ಕಂಡ ಸೀಕ್ವೆಲ್ ಆಗಿತ್ತು..! ಇನ್ನೇನು ಜನವರಿ 2019ಕ್ಕೆ ಧಭಾಂಗ್ -3 ಕೂಡಾ ಬೆಳ್ಳಿ ತೆರೆಯ ಮೇಲೆ ವಿರಾಜಿಸಲು ಗರಿಗೆದರುತ್ತಿದೆ. ಬನ್ನಿ ಇಲ್ಲಿದೆ ಸಲ್ಲು ಚಿತ್ರರಂಗದ ನಡೆಯ ಪಕ್ಷಿನೋಟ…

“ಮೈನೆ ಪ್ಯಾರ್ ಕಿಯಾ ಸಿನಿಮಾ” ಚಿತ್ರದ ಅಭಿನಯಕ್ಕಾಗಿ ಸಲ್ಮಾನ್ ಖಾನ್ ಗೆ 1989ರಲ್ಲಿ ಮೊದಲ ಫಿಲಂ ಫೇರ್ ಪ್ರಶಸ್ತಿಯೂ ದೊರೆಯಿತು. 1991ರಲ್ಲಿ ಬಿಡುಗಡೆಯಾದ ಸಾಜನ್, 1994ರ ಹಮ್ ಆಪ್ಕೆ ಹೈ ಕೌನ್, 1999ರ ಬೀವಿ ನಂ.1 ಯಶಸ್ವಿ ಚಿತ್ರಗಳ ಪೈಕಿ ಕೆಲವು. 1998ರ ಕುಚ್‌ ಕುಚ್‌ ಹೋತಾ ಹೈ , 1999ರ ಹಮ್‌ ದಿಲ್‌ ದೆ ಚುಕೆ ಸನಮ್‌, 2003ರ ತೆರೆ ನಾಮ್, 2005ರ  ನೋ ಎಂಟ್ರಿ, ಸೂಪರ್ ಹಿಟ್ ಆಯ್ತು.

ಸೂಪರ್ ಹಿಟ್ ಚಿತ್ರಗಳ  ಸುಲ್ತಾನ್

ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ದಭಾಂಗ್’, ‘ಬಾಡಿಗಾರ್ಡ್’, ಭಜರಂಗಿ ಬಾಯೀಜಾನ್,  ಸುಲ್ತಾನ್, ಟೈಗರ್ ಜಿಂದಾಹೈ……, ಚಿತ್ರಗಳೂ ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲ, ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಸಾಲಿಗೆ ಸೇರಿದವು. ವೃತ್ತಿ ಜೀವನದ ಜೊತೆ ಜೊತೆಗೆ ಕೆಲವೊಂದು ವೈಯಕ್ತಿಕ ಕಾರಣಗಳಿಗಾಗಿಯೂ ಸಲ್ಮಾನ್ ಖಾನ್ ಸುದ್ದಿಯಾದವರು.

ಹಿಟ್ ಆಂಡ್ ರನ್ ಪ್ರಕರಣ, ಕೃಷ್ಣ ಮೃಗ ಬೇಟೆ ಪ್ರಕರಣಗಳು ಸಲ್ಮಾನ್ ಖಾನ್ ಅವರನ್ನು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದರೆ, ನಟಿಯರೊಂದಿಗಿನ ಪ್ರೇಮ ಪ್ರಸಂಗಗಳು ಅವರಿಗೆ ಬ್ಯಾಡ್ ಬಾಯ್ ಪಟ್ಟಕೇರಿಸಿತು. ಐಶ್ವರ್ಯಾ ರೈ, ಕತ್ರೀನಾ ಕೈಫ್ ಜೊತೆಗಿನ ಸ್ನೇಹ ಹಾಗೂ ಮುರಿದು ಬಿದ್ದ ಪ್ರೇಮ ಪ್ರಸಂಗಗಳು ಬಾಲಿವುಡ್ ನಲ್ಲಿ ಹೆಚ್ಚು ಸದ್ದು ಮಾಡಿತು.

 

Tags