ಸುದ್ದಿಗಳು

“ಯಾವುದು ನಿಮಗೆ ಆಕ್ಷೇಪಣೀಯ..?, ನಮ್ಮ ಮಂದಿರ ಯಾತ್ರೆಯೋ, ಪ್ರಾರ್ಥನೆಯೋ..?

ಸಾರಾ ಆಲಿ ಖಾನ್ ಮುಂಬೈ ದೇವಾಲಯವೊಂದರಲ್ಲಿ ಹಾಜರ್

ಮುಂಬೈ ದೇವಾಲಯವೊಂದರಲ್ಲಿ ಹಾಜರ್,  ದೇವಸ್ಥಾನದ  ಪ್ರಾಂಗಣದಲ್ಲಿ ನೆರೆದಿದ್ದ ಭಿಕ್ಷುಕರಿಗೆ ಕೊಂಚ ಹಣ, ವಸ್ತ್ರಗಳನ್ನು ದಾನವನ್ನಾಗಿ ನೀಡಿದ, ಬಾಲಿವುಡ್ ನಟಿ, ಸಾರಾ ಆಲಿ ಖಾನ್

ಹೌದು, ತನ್ನ ತಾಯಿ ಅಮೃತಾ ಸಿಂಗ್ ಜೊತೆ ಬಾಲಿವುಡ್ ನಟಿ ಮುಂಬೈ ಮಹಾನಗರದ ಪ್ರಸಿದ್ಧ ಹಿಂದೂ ದೇವಾಲಯದಲ್ಲಿ ಇಂದು ಕಾಣಿಸಿಕೊಂಡರು. ತನ್ನ ತಾಯಿ  ಮತ್ತು ಸಹೋದರ ಇಬ್ರಾಹಿಂ ಆಲಿ ಖಾನ್  ಒಡನೆ  ಮುಂಬೈನ ದೇವಾಲಯವೊಂದರಲ್ಲಿ ಪ್ರತ್ಯಕ್ಷಳಾದ ಸಾರಾ ಒಲಗೆ ನಡೆದು ಪೂಜೆ ಮುಗಿಸಿ ಹೊರಬರುವಷ್ಟರಲ್ಲೇ ಮಾಧ್ಯಮದ ಕ್ಯಾಮೆರಾ ಕಣ್ಣುಗಳಿಗೆ ಗುರಿಯಾದರು.

ಆನಂತರ ಸಾರಾ ಹೊರನಡೆದು ಆ ದೇವಸ್ಥಾನದ  ಪ್ರಾಂಗಣದಲ್ಲಿ ನೆರೆದಿದ್ದ ಭಿಕ್ಷುಕರಿಗೆ ಕೊಂಚ ಹಣ, ವಸ್ತ್ರಗಳನ್ನು ದಾನವನ್ನಾಗಿ ನೀಡಿದರು ಕೂಡಾ. ಇಷ್ಟರಲ್ಲೇ ಮತ್ತೆ ಕ್ಯಾಮೆರಾಗಳು ಅವರನ್ನು ಸುತ್ತುವರೆದಿದ್ದರು. ಈಗ ಹೌಹಾರಿದ ಸುಂದರಿ ಅವರನ್ನು , ಅವರ  ಈ ‘ಪಾಪರಾಜಿ’ ಕ್ರಿಯೆಗಳನ್ನು ಖಂಡಿಸತೊಡಗಿದರು.

‘’ಯಾವುದು ನಿಮಗೆ ಆಕ್ಷೇಪಣೀಯ..?, ನಮ್ಮ ಮಂದಿರ ಯಾತ್ರೆಯೋ, ಪ್ರಾರ್ಥನೆಯೋ, ಈ ನಮ್ಮ ಸದ್ದಿಲ್ಲದ ಪರೋಪಕಾರವೋ..??”, ಗುಡುಗಿದ್ದರು ಸಾರಾ.

 

 

Tags

Related Articles