ಸುದ್ದಿಗಳು

ಎಂಟು ವರ್ಷಗಳ ಸಿನಿ ಜರ್ನಿಯಲ್ಲಿ ನಾನು ಕಲಿತ್ತದ್ದು ಜಾಸ್ತಿ: ಶಾಹೀದ್ ಕಪೂರ್!

ಮುಂಬೈ, ಸೆ.12: ‘ದಿಲ್ ತೋ ಪಾಗಲ್ ಹೈ’ ಮತ್ತು ‘ತಾಲ್’ ಚಿತ್ರದಲ್ಲಿ ಹಿನ್ನೆಲೆ ನೃತ್ಯಗಾರನಾಗಿ ಚಿತ್ರರಂಗ ಪ್ರವೇಶಿಸಿದ ಶಾಹೀದ್ ಕಪೂರ್, 2003ರ ‘ಇಷ್ಕ್ ವಿಷ್ಕ್’ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಕಾಣಿಸಿಕೊಂಡರು.

ಸಂದರ್ಶನವೊಂದರಲ್ಲಿ ಮಾತನಾಡಿದ ಶಾಹೀದ್

ಸಂದರ್ಶನವೊಂದರಲ್ಲಿ  ಮಾತನಾಡಿದ ಶಾಹೀದ್ ಕಪೂರ್, ಬಾಲಿವುಡ್ ಜರ್ನಿಯ 15 ವರ್ಷಗಳಲ್ಲಿ ರಿಲವೆಂಟ್ ಆಗಿರಲು ನಿಮಗೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರಿಸಿರುವ ಶಾಹೀದ್, ಬಾಲಿವುಡ್ ನಲ್ಲಿ 7 ರಿಂದ 8 ವರ್ಷಗಳನ್ನು ಕಳೆದ ಬಳಿಕವೇ ನನಗೆ ಅಲ್ಲಿನ ಜಗತ್ತು ಅರ್ಥವಾಗಿದ್ದು, ನಾನು ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಇಲ್ಲಿ ಎಲ್ಲವನ್ನೂ ಕಲಿತೆ. ನನ್ನ ಅನುಭವಗಳೇ ನನಗೆ ಪಾಠವಾಯಿತು ಎಂದಿದ್ದಾರೆ.ಶಾಹೀದ್ ಕಾಪೂರ್ ನಟಿಸಿರುವ ‘ಬಟ್ಟಿ ಗುಲ್ ಮೀಟರ್ ಚಾಲು’ ಚಿತ್ರ ಸೆಪ್ಟೆಂಬರ್ 21ರಂದು ಬಿಡುಗಡೆಯಾಗಲಿದ್ದು, ಇದರ ಪ್ರಮೋಷನ್ ನಲ್ಲಿ ಚಿತ್ರತಂಡ ನಿರತರಾಗಿದ್ದಾರೆ.

ನನ್ನ ಕೆಲಸದಲ್ಲಿ ನನಗೆ ತೃಪ್ತಿ ಇದೆ

ಆರಂಭದಲ್ಲಿ ನಾನು ಎಲ್ಲವನ್ನೂ ಕಳೆದುಕೊಂಡೆ ಎಂದೇ ನಾನು ಭಾವಿಸಿದ್ದೆ. ಆದರೆ ಬಾಲಿವುಡ್ ನಲ್ಲಿ ಕಳೆದ 7 ರಿಂದ 8 ವರ್ಷಗಳ ಅವಧಿ ನನಗೆ ಪಾಠ ಕಲಿಸಿತು. ಇಷ್ಟು ವರ್ಷಗಳ ನಂತರವೇ ನನಗೆ ದೈರ್ಯ ಸ್ಥೈರ್ಯ ಬಂತು. ಇದರಿಂದಾಗಿ ನಾನು ರಿಲವೆಂಟ್ ಆಗಿರಲು ಸಾಧ್ಯವಾಯಿತು ಎಂದವರು ಹೇಳಿದ್ದಾರೆ.ಒಂದೇ ರೀತಿಯ ಚಿತ್ರಗಳು ಮೂಡಿಬರುತ್ತಿದ್ದವು. ನನಗೆ ಒಂದೇ ರೀತಿಯ ಪಾತ್ರಗಳು ಸಿಗುತ್ತಿದ್ದವು. ಯಾರೊಬ್ಬರು ವಿಭಿನ್ನವಾಗಿರುವ ಚಿತ್ರಗಳನ್ನು ಮಾಡಲು ಮುಂದಾಗುತ್ತಿರಲಿಲ್ಲ. ಆದರೆ ಕಳೆದ ಐದು ವರ್ಷಗಳಿಂದ ಬಾಲಿವುಡ್ ನಲ್ಲಿ ಭಾರಿ ದೊಡ್ಡ ಬದಲಾವಣೆಯಾಗಿದೆ. ಇದೀಗ ನನಗೆ ಒಂದು ರೀತಿಯ ತೃಪ್ತಿ ಇದೆ. ಉಪ್ಪು ನೀರಿನಲ್ಲಿ ಇರಬೇಕಾದ ಮೀನು ಕೊನೆಗೂ  ಸಮುದ್ರ ಸೇರಿದೆ ಎಂಬ ಭಾವನೆ ನನಗೆ ಮೂಡಿದೆ ಎಂದು ಶಾಹೀದ್ ಕಪೂರ್ ಹೇಳಿಕೊಂಡಿದ್ದಾರೆ.

‘ಬಟ್ಟಿ ಗುಲ್ ಮೀಟರ್ ಚಾಲು’ ಚಿತ್ರ ಸಂಪೂರ್ಣ ವಿಭಿನ್ನವಾಗಿದ್ದು, ನನ್ನ ಪಾತ್ರವೂ ಭಿನ್ನವಾಗಿದೆ. ಚಿತ್ರಕತೆ ಮುಂಬೈಗೆ ಸೇರಿದ್ದಾಗಿದ್ದು, ಚಿತ್ರ ಪ್ರೇಕ್ಷಕನಿಗೆ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ ಎಂದಿದ್ದಾರೆ ಶಾಹೀದ್ ಕಪೂರ್.

Tags