ಸುದ್ದಿಗಳು

ಬಾಲಿವುಡ್ ಖಾನ್ ತ್ರಿವಳಿಗಳನ್ನು ಮೀರಿಸಲು ಬಂದ ಆ ಹೊಸ ನಟ ಯಾರು?

ಕಳೆದ ಮೂರು ದಶಕಗಳಿಂದ ಬಾಲಿವುಡನ್ನು ಆಳುತ್ತಿರುವ ಖಾನ್ ದ್ವಯರಿಗೆ, ಇಂದಿಗೂ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ. ಮೂರು ದಶಕಗಳಿಂದ ಬೇಡಿಕೆಯನ್ನು ಹಾಗೆ ಉಳಿಸಿಕೊಂಡು ಬಂದಿರುವ ಶಾರೂಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದು, ಇವರ ನಟನೆಯ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಎರಡು ಮಾತಿಲ್ಲ ಎಂಬುದು ನಿರ್ಮಾಪಕರ ಅಭಿಪ್ರಾಯ. ಹೀಗಾಗಿ ಅವರ ಮೇಲೆ ಕೋಟಿ ಕೋಟಿ ಬಂಡವಾಳ ಹೂಡಲು, ನಿರ್ಮಾಪಕರು ನಾ ಮುಂದು ತಾ ಮುಂದು ಎನ್ನುತ್ತಾರೆ.

ಜನರ ಮೆಚ್ಚುಗೆಗೆ ಪಾತ್ರವಾದ ಬಾಲಿವುಡ್ ಖಾನ್ ಗಳು

ಬಾಕ್ಸ್ ಆಫೀಸ್ ನಲ್ಲಿ ಇವರಂತೆ ಯಾರೂ ಕೂಡ ಹಣಮಾಡಲು ಸಾಧ್ಯವಿಲ್ಲ. ಇವರ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗುವಷ್ಟು ಇನ್ಯಾವ ನಟರಿಗೂ ಆಗೋದಿಲ್ಲ ಎಂಬುದು ನಿರ್ದೇಶಕರ ನಂಬಿಕೆ. ಕಳೆದ ಕೆಲವು ವರ್ಷಗಳಲ್ಲಿ ಶಾರೂಖ್ ಖಾನ್ ಟಾಪ್ ಒನ್ ಲಿಸ್ಟ್ ನಲ್ಲಿದ್ದರೆ, ಕೆಟ್ಟ ಸ್ಕ್ರೀಪ್ಟ್ ಆಯ್ಕೆಯಿಂದಾಗಿ, ಸಲ್ಮಾನ್ ಖಾನ್ ಗೆ ಪ್ರೇಕ್ಷಕ  ಟಾಪ್ 1ರ ಪಟ್ಟಿಯಲ್ಲಿ ಕೂರಿಸಲಿಲ್ಲ. ಆದರೆ ಈ ವರ್ಷ ಹೆಚ್ಚು ಸುದ್ದಿಯಲ್ಲಿರುವುದು ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್. ಅವರ ಹೊಸ ಪ್ರಾಜೆಕ್ಟ್ ಗಳು ಹಾಗೂ ಶೋ ಗಳು ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇನ್ನೂ ಹೃತಿಕ್ ರೋಷನ್ ವಿಚಾರಕ್ಕೆ ಬಂದರೆ ಅವರು ವಿಭಿನ್ನ ಆಯ್ಕೆಯಿಂದ ಬಾಲಿವುಡ್ ಅಂಗಳದಲ್ಲಿ ವಿಶಿಷ್ಟ ಬೇಡಿಕೆ ಉಳಿಸಿಕೊಂಡವರು. ಆದರೆ ಇದೀಗ ಈ ಖಾನ್ ದ್ವಯರನ್ನು ಮೀರಿಸುವ ಏಕೈಕ ಪ್ರತಿಭೆಯೊಂದು ನಿಧಾನವಾಗಿ ಬಾಲಿವುಡ್ ಅಂಗಳದಲ್ಲಿ ಚಿಗುರೊಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಮೂವರು ಖಾನ್ ಗಳಷ್ಟು ಹಿಡಿತ ಹೊಂದಬಲ್ಲ ಯಾವ ನಟನೂ ಈಗಿಲ್ಲ

ಜಾಕಿ ಶ್ರಾಫ್ ಅವರ ಪುತ್ರ ಟೈಗರ್ ಶ್ರಾಫ್ , ಈ ಖಾನ್ ದ್ವಯರ ಸ್ಥಾನ ತುಂಬ ಬಲ್ಲ ನಟನಾಗುವ ಸಾಮಾರ್ಥ್ಯ ಹೊಂದಿದ್ದಾನೆ ಎಂಬುದು ಬಾಲಿವುಡ್ ಪಂಡಿತರ ಅಭಿಪ್ರಾಯ. ಇದಕ್ಕೆ ಪೂರಕ ಎಂಬಂತೆ ಟೈಗರ್ ಶ್ರಾಫ್ ನಟನೆಯ ಎಲ್ಲಾ ಚಿತ್ರಗಳೂ ಕೂಡ ಸೂಪರ್ ಹಿಟ್ ಆಗಿವೆ. ಇನ್ನೂ ಹೊಸ ತಲೆಮಾರಿನ ಅಭಿಮಾನಿಗಳು, ಈ ಹಿಂದಿನಂತೆ ಒಂದೇ ನಟರ ಬಗ್ಗೆ ಒಲವು ಹೆಚ್ಚಿಸಿಕೊಂಡಿಲ್ಲ.ಅವರ ಅಭಿಪ್ರಾಯಗಳು ಮತ್ತು ಇಷ್ಟಗಳು ಬದಲಾಗುತ್ತಾ ಹೋಗುತ್ತಿರುವುದರಿಂದ, ಈಗಾಗಲೇ ಬಾಲಿವುಡ್ ನ ಟಾಪ್ ನಟರ ಪಟ್ಟಿಯಲ್ಲಿರುವ ಮೂವರು ಖಾನ್ ಗಳಷ್ಟು ಹಿಡಿತ ಹೊಂದಬಲ್ಲ ಯಾವ ನಟನೂ ಈಗಿಲ್ಲ ಎಂಬುದು ತಜ್ಞರ ಅಭಿಪ್ರಾಯ.

Tags