ಸುದ್ದಿಗಳು

‘ಮಣಿಕರ್ಣಿಕಾ’ ಸಿನಿಮಾದಿಂದ ಹೊರನಡೆದಿದ್ದಕ್ಕೆ ಕಾರಣ ಹೇಳಿದ ಸೋನು ಸೂದ್

ಮುಂಬೈ, ಸೆ.12: ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮಣಿಕರ್ಣಿಕಾ:  ದಿ ಕ್ವೀನ್ ಆಫ್ ಝಾನ್ಸಿ’  ಚಿತ್ರದಿಂದ ಇದ್ದಕ್ಕಿದ್ದಂತೆ ಸೋನುಸೂದ್ ಹೊರಬಂದಿದ್ದು ದೊಡ್ಡ ಸುದ್ದಿಯಾಗಿದೆ. ಚಿತ್ರದ ಬಹುತೇಕ ಶೂಟಿಂಗ್ ಮುಗಿದ ಬಳಿಕ ಸೋನುಸೂದ್ ಹೊರಬಂದಿದ್ದರಿಂದ ಕೊಂಚ ಇರಿಸುಮುರಿಸಿಗೊಳಗಾದ ನಿರ್ಮಾಪಕರು ಬಳಿಕ ಅವರ ಸ್ಥಾನಕ್ಕೆ ಮತ್ತೊಬ್ಬ ನಟನನ್ನು ಆಯ್ಕೆ ಮಾಡಿ ಚಿತ್ರದ ರೀ ಶೂಟಿಂಗ್ ಮಾಡಲು ನಿರ್ಧರಿಸಿದ್ದಾರೆ.ಇಬ್ಬರು ನಿರ್ದೇಶಕರೊಂದಿಗೆ ಕೆಲಸ ಮಾಡುವುದು ಕಷ್ಟ

ಆದರೆ ಯಾವ ಕಾರಣಕ್ಕಾಗಿ ಸೋನು ಸೂದ್ ಹೊರಬಂದಿದ್ದರು ಎಂಬ ಬಗ್ಗೆ ಖಚಿತವಾಗಿರಲಿಲ್ಲ. ಇದೀಗ ಈ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿರುವ ಸೋನುಸೂದ್, ನನಗೆ ಮಹಿಳಾ ನಿರ್ದೇಶಕರೊಂದಿಗೆ ಕೆಲಸ ಮಾಡಲು ಯಾವುದೇ ಸಮಸ್ಯೆ ಇಲ್ಲ.  ಸೋನು ಸೂದ್ ಗೆ ಮಹಿಳಾ ನಿರ್ದೇಶಕರೊಂದಿಗೆ ಕೆಲಸ ಮಾಡಲು ಇಷ್ಟವಿಲ್ಲ ಎಂಬ ಹೇಳಿಕೆ ನನ್ನದಲ್ಲ. ನಾನು ಪರ್ಹಾ ಖಾನ್, ಜೊತೆಗೆ ಸಿನಿಮಾ ಮಾಡಿದ್ದೇನೆ. ನನ್ನ ಸಮಸ್ಯೆ ಇರುವುದು ಇಬ್ಬರು ನಿರ್ದೇಶಕರೊಂದಿಗೆ ಒಂದೇ ಚಿತ್ರದಲ್ಲಿ ನಟಿಸಲು ನನಗೆ ಸಾಧ್ಯವಿಲ್ಲ .’ಮಣಿಕರ್ಣಿಕಾ:  ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರಕ್ಕೆ ಆರಂಭದಲ್ಲಿ ಒಬ್ಬ ನಿರ್ದೇಶಕರಿದ್ದರು, ಬಳಿಕ ಇದೀಗ ಬದಲಾಗಿದೆ. ಹೀಗಾಗಿ ಇಬ್ಬಿಬ್ಬರು ನಿರ್ದೇಶಕರೊಂದಿಗೆ ಒಂದು ಚಿತ್ರದಲ್ಲಿ ನಟಿಸುವುದು ನನಗೆ ಕಷ್ಟದ ಕೆಲಸ ಎಂದವರು ಹೇಳಿದ್ದಾರೆ.ನಾನು ಇದುವರೆಗೂ 80ರಿಂದ 90 ಚಿತ್ರಗಳನ್ನು ಮಾಡಿದ್ದೇನೆ. ನಾನು ಒಂದೇ ಸೆಟ್ ನಲ್ಲಿ ಇಬ್ಬರು ನಿರ್ದೇಶಕರೊಂದಿಗೆ ಇದುವರೆಗೂ ಕೆಲಸ ಮಾಡಿಲ್ಲ. ಈ ಸ್ಟಾಂಡ್ ಅನ್ನು ನಾನು ಯಾವಾಗಲೂ ಕಾಪಾಡಿಕೊಂಡು ಬರುತ್ತಿದ್ದು, ಇದೀಗ ಈ ಗೊಂದಲದಿಂದಾಗಿ ‘ಮಣಿಕರ್ಣಿಕಾ:  ದಿ ಕ್ವೀನ್ ಆಫ್ ಝಾನ್ಸಿ’  ಚಿತ್ರದಿಂದ ಹೊರಬಂದಿದ್ದೇನಷ್ಟೇ ಎಂದಿದ್ದಾರೆ.

ರಾಣಿ ಲಕ್ಷ್ಮೀ ಬಾಯ್ ಅವರ ಬಯೋಪಿಕ್ ಅನ್ನು ಕ್ರಿಶ್ ನಿರ್ದೇಶಿಸುತ್ತಿದ್ದರು. ಇದಾದ ಬಳಿಕ ಕ್ರಿಶ್ ಎನ್ ಟಿಆರ್ ಅವರ ಬಯೋಪಿಕ್ ನಿರ್ದೇಶನದಲ್ಲಿ ನಿರತರಾದರು. ಹೀಗಾಗಿ ಚಿತ್ರದ ಉಳಿದ ಭಾಗವನ್ನು ಕಂಗನಾ ನಿರ್ದೇಶಿಸಲು ಮುಂದಾದರು. ಇದರಿಂದಾಗಿ ಸೋನುಸೂದ್ ಚಿತ್ರದಿಂದಲೇ ಹೊರಬಂದಿದ್ದಾರೆ ಎಂಬುದನ್ನು ಇದೀಗ ಸೋನುಸೂದ್ ಸ್ಪಷ್ಟಪಡಿಸಿದ್ದಾರೆ.

Tags