ಸುದ್ದಿಗಳು

ಕೃಷ್ಣ ಮೃಗ ಭೇಟೆ ಪ್ರಕರಣ, ಸೆಲೆಬ್ರಿಟಿಗಳಿಗೆ ನೋಟೀಸ್ ಜಾರಿ

ಮುಂಬೈ, ಮೇ.23:

1998ರಲ್ಲಿ ನಡೆದಿದ್ದ ಕೃಷ್ಣಮೃಗ ಬೇಟೆ ಪ್ರಕರಣ ಗೊತ್ತಿರುವ ವಿಚಾರವೇ. 1998ರಲ್ಲಿ ಹಮ್  ಸಾಥ್ ಸಾಥ್  ಹೈ ಸಿನಿಮಾ ಶೂಟಿಂಗ್​ ವೇಳೆ  ಜೋಧ್‍ಪುರದ ಬಳಿಯಲ್ಲಿರುವ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್​ ಕೃಷ್ಣಮೃಗ ಬೇಟೆಯಾಡಿದ್ದರು. ರಕ್ಷಿತ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ಬೇಟೆಯಾಡಿದ್ದರೆಂದು ಹೇಳಲಾಗಿತ್ತು. ಹೀಗಾಗಿ ಸಲ್ಮಾನ್ ಖಾನ್ ಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಆದರೆ ಸಹನಟರನ್ನು ದೋಷಮುಕ್ತರನ್ನಾಗಿಸಿತ್ತು. ಆದರೆ ಇದೀಗ ಸಹ ನಟರಿಗೂ ನೋಟೀಸ್ ನೀಡಲಾಗಿದೆಯಂತೆ.

ಮತ್ತೆ ನಟರಿಗೆ ನೋಟೀಸ್

ಇನ್ನೂ ಈ  ಬಾಲಿವುಡ್ ನಟ ಸೈಫ್ ಅಲಿಖಾನ್ ಹಾಗೂ ನಟಿಯರಾದ ಸೋನಾಲಿ ಬೇಂದ್ರೆ, ನೀಲಂ ಕೊಠಾರಿ, ಟಬುಗೆ ದೋಷ ಮುಕ್ತ ಎಂದು ಸಿಜೆಎಂಸಿ ನ್ಯಾಯಾಲಯ  ನೀಡಿತ್ತು. ಆದರೆ ಇದೀಗ ರಾಜಸ್ತಾನ ಹೈಕೋರ್ಟ್‌ನ ಜೋಧ್‌ಪುರ ಏಕ ಸದಸ್ಯ ಪೀಠ ಮತ್ತೆ ನೋಟಿಸ್ ನೀಡಿದೆ ಎಂದು ವರದಿಗಳಾಗಿವೆ. ಸದ್ಯ ಮತ್ತೆ ಈ ಸೆಲಿಬ್ರಿಟಿಗಳಿಗೆ ಕಂಟಕ ಎದುರಾಗಿದೆ.

ಮತ್ತೆ ಪ್ರಕರಣದ ಉರುಳು

ಕಳೆದ ವರ್ಷ ಏಪ್ರಿಲ್ 5 ರಂದು ಸಿಜೆಎಂಸಿ ನ್ಯಾಯಾಲಯ ಸಲ್ಮಾನ್ ಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ರಾಜಸ್ತಾನ ಸರ್ಕಾರ  ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟಿನ ಏಕ ಸದಸ್ಯ ಪೀಠ ಇದೀಗ ನೋಟಿಸ್ ನೀಡಿದೆ. ಸದ್ಯ ನಿರಾಳರಾಗಿದ್ದ ಪ್ರಕರಣದ ಸೆಲಿಬ್ರಿಟಿಗಳಿಗೆ ಮತ್ತೆ ಕುತ್ತಿಗೆಗೆ ಉರುಳಾಗಿದೆ ಈ ಪ್ರಕರಣ.

ಈ ವಾರದ ‘ವೀಕೆಂಡ್’ ಮಸ್ತಿಯಲ್ಲಿ ನೋಡಿ 4 ಚಿತ್ರಗಳು: ಈ ವಾರ ಬಿಡುಗಡೆ

#balkaninews #bollywood #saifalikhanandsonalibendre #blackbuckcase

Tags