ಸುದ್ದಿಗಳು

ಈ ಬಾಲಿವುಡ್ ತಾರೆಗಳ ಬಾಡಿಗಾರ್ಡ್ ಗಳು ಯಾರು ಗೊತ್ತೇ..? ಅವರ ಸಂಬಳ ಎಷ್ಟು ಗೊತ್ತೇ..?

ಮುಂಬೈ, ಸೆ.12: ನೀವು ಬಾಲಿವುಡ್ ನಟ, ನಟಿಯರನ್ನು ನೋಡಿದ್ದೀರಾ. ಅದು ಸಿನಿಮಾದಲ್ಲೋ ಅಥವಾ ಪ್ರತ್ಯಕ್ಷವಾಗಿ ನೋಡಿರಬಹುದು‌. ಈ ವೇಳೆ ತಾರೆಯರ ಬೆನ್ನ ಹಿಂದೆ ಬಾಡಿಗಾರ್ಡ್ ಗಳು ಇರುವುದನ್ನು ನೋಡಿರಬಹುದು‌. ಆದರೆ ಅವರು ಯಾರಂತ ಹೆಚ್ಚಿನವರಿಗೆ ಗೊತ್ತಿಲ್ಲ. ಜೊತೆಗೆ ಅವರ ವೇತನ ಕೂಡಾ ಎಷ್ಟಿವೆ ಎಂಬುದು ಕೂಡಾ ಹೆಚ್ಚಿನವರಿಗೆ ಗೊತ್ತಿಲ್ಲ. ಅದರ ವಿವರ ಇಲ್ಲಿದೆ ನೋಡಿ..

ಅಮೀರ್ ಖಾನ್ – ಯುವರಾಜ್ ಘೋರ್ಪಡೆ

ನೀವು ಬಾಲಿವುಡ್ ನಟ ಅಮೀರ್ ಖಾನ್ ರನ್ನು ನೋಡಿರಬಹುದು‌. ಅವರ ಜೊತೆ ಇರುವ ಬಾಡಿಗಾರ್ಡ್ ಹೆಸರೇ ಯುವರಾಜ್ ಘೋರ್ಪಡೆ. ಅಮೀರ್ ಖಾನ್ ಜೊತೆಗೆ ಫರ್ಪೆಕ್ಟ್ ಆಗಿ ಕೆಲಸ ಮಾಡಿ ಅಮೀರ್ ಪ್ರೀತಿ ಗಳಿಸಿರುವ ಯುವರಾಜ್  ವಾರ್ಷಿಕ ಸಂಬಳ 2 ಕೋಟಿ ರೂಪಾಯಿ.ಅಮಿತಾಭ್ ಬಚ್ಚನ್ – ಜಿತೇಂದ್ರ ಶಿಂಧೆ

ಬಾಲಿವುಡ್ ನ ಹಿರಿಯ ನಟ ಅಮಿತಾಭ್ ಬಚ್ಚನ್ ರ ಬಾಡಿಗಾರ್ಡ್ ಹೆಸರು ಜಿತೇಂದ್ರ ಶಿಂಧೆ. ಬಾಲಿವುಡ್ ನ ಆಂಗ್ರಿ ಮ್ಯಾನ್ ಬಚ್ಚನ್ ರ  ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಶಿಂಧೆಯ ವರ್ಷದ ಸಂಬಳ 1.5 ಕೋಟಿ ರೂಪಾಯಿ.ದೀಪಿಕಾ ಪಡುಕೋಣೆ – ಜಲಾಲ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬಾಡಿಗಾರ್ಡ್ ಹೆಸರು ಏನು ಗೊತ್ತೇ..? ಆತನ ಹೆಸರೇ ಜಲಾಲ್. ಜಲಾಲ್, ದೀಪಿಕಾ ಪಡುಕೋಣೆಗೆ ಕೇವಲ ಅಂಗರಕ್ಷಕನ ಜೊತೆಗೆ ರಾಖಿ ಸಹೋದರ ಕೂಡಾ ಹೌದು. ಈತನನ್ನು ಸಹೋದರನಂತೆ ನೋಡುವ ದೀಪಿಕಾ ಪ್ರತಿ ವರ್ಷ  ರಾಖಿ ಕಟ್ಟುತ್ತಾರೆ. ಜಲಾಲ್ ನ ವರ್ಷದ ವೇತನ 80 ಲಕ್ಷ ರೂಪಾಯಿ.ಕ್ಷಯ್ ಕುಮಾರ್ – ಶ್ರೀಸೇ ಥೆಲ್

ಇನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್  ಬಾಲಿವುಡ್ ನ ಕಿಲಾಡಿ ಎಂದೇ ಗುರುತಿಸಿಕೊಂಡವರು. ಇವರ ಬಾಡಿಗಾರ್ಡ್ ಹೆಸರು ಶ್ರೀಸೇ ಥೇಲ್. ಇವರು ಅಕ್ಷಯ್ ಕುಮಾರ್ ರನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಮೂಲಕ ಸಂಪೂರ್ಣವಾಗಿ ಅಂಗರಕ್ಷಕನ ಕೆಲಸವನ್ನು ಮಾಡಿದ್ದಾರೆ. ಇವರಿಗೆ ವಾರ್ಷಿಕವಾಗಿ 1.2 ಕೋಟಿ ರೂಪಾಯಿ ವೇತನ ನೀಡಲಾಗುತ್ತದೆ.ಸಲ್ಮಾನ್ ಖಾನ್ – ಶೆರಾ

ಇನ್ನು ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬಂದರೆ ಗಮನ ಸೆಳೆಯುವುದು ಅವರ ಬಾಡಿಗಾರ್ಡ್. ಇವರ ಹೆಸರೇ ಶೆರಾ. ಶೆರಾ ಸಲ್ಮಾನ್ ಖಾನ್ ರ ಕುಟುಂಬದ ಸದಸ್ಯನಂತೆ . ಶೆರಾಗೆ ವರ್ಷಕ್ಕೆ 2 ಕೋಟಿ ರೂಪಾಯಿ ಮೊತ್ತವನ್ನು ಸಂಬಳದ ರೂಪದಲ್ಲಿ ಸಲ್ಮಾನ್ ಖಾನ್ ನೀಡುತ್ತಾರೆ.ಶಾರುಖ್ ಖಾನ್ – ರವಿ ಸಿಂಗ್

ಬಾಲಿವುಡ್ ನ ಬಾದ್ ಶಾ ಶಾರೂಖ್ ಖಾನ್ ಬಾಡಿಗಾರ್ಡ್ ಹೆಸರು  ರವಿ ಸಿಂಗ್ . ರವಿ ಸಿಂಗ್ ಗೆ ಈ ಪಟ್ಟಿಯಲ್ಲಿ ಅತ್ಯಧಿಕ ಸಂಬಳ ಪಡೆಯುವ ಬಾಡಿಗಾರ್ಡ್. ವಾರ್ಷಿಕವಾಗಿ ಇವರು 2.5 ಕೋಟಿ ರೂಪಾಯಿ ಮೊತ್ತವನ್ನು ಸಂಬಳದ ರೂಪದಲ್ಲಿ ಪಡೆಯುತ್ತಾರೆ.

Tags