ಸುದ್ದಿಗಳು

ಇವರು ಕಲಿಕೆಯಲ್ಲಿ ಹಿಂದೆ ಇದ್ದವರು.. ಆದರೆ ಬಾಲಿವುಡ್ ನಲ್ಲಿ ಹಿಟ್ ನಟರಾದವರು..!

ಮುಂಬೈ, ಸೆ.14:ಬಾಲಿವುಡ್ ನಲ್ಲಿರುವ ಎಲ್ಲಾ ನಟ, ನಟಿಯರು ಉನ್ನತ ವ್ಯಾಸಂಗ ಮಾಡಿದವರಲ್ಲ. ನಾವು ಯಾರನ್ನು ಸಕ್ಸಸ್ ನಟ ಎಂದು ಗುರುತಿಸುತ್ತೇವೆ ಅವರಲ್ಲಿ ಹೆಚ್ಚಿನವರು ಕಲಿಕೆಯಲ್ಲಿ ಹಿಂದೆ ಇದ್ದವರು. ಹೌದು. ಇದು ಅಚ್ಚರಿಯಾದರೂ ಸತ್ಯ‌.

ಸಲ್ಮಾನ್ ಖಾನ್:

ಬಾಲಿವುಡ್ ನ ಬಾಯ್ ಜಾನ್ ಸಲ್ಮಾನ್ ಖಾನ್ , ಮುಂಬೈನ ಸ್ಟಾನಿಸ್ಲಾಸ್ ಪ್ರೌಢಶಾಲೆಯಲ್ಲಿ ಶಿಕ್ಷಣವನ್ನು ಪಡೆದರು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಸಲ್ಮಾನ್ ಖಾನ್ ಗೆ ತಮ್ಮ ಕಾಲೇಜು ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.ಅಮೀರ್ ಖಾನ್:

ಬಾಲಿವುಡ್ ನ ಫರ್ಪೇಕ್ಟನಿಸ್ಟ್ ಅಮೀರ್ ಖಾನ್ ಗೆ ಕಲಿಕೆಯಲ್ಲಿ ಆಸಕ್ತಿ ಇರಲಿಲ್ಲ. ಅಂತೂ ಪಿಯುಸಿ ಮುಗಿಸಿದರು. ನಂತರ ಕಾಲೇಜಿಗೆ ಹೋಗದೇ ಬಾಲಿವುಡ್ ನಲ್ಲಿ ವೃತ್ತಿ ಜೀವನ ಆರಂಭಿಸಿದರು.ಅಕ್ಷಯ್ ಕುಮಾರ್:

ಅಕ್ಷಯ್ ಕುಮಾರ್ ಬಾಲಿವುಡ್ ನ ಕಿಲಾಡಿ. ಇವರಿಗೆ ಶಾಲೆಗೆ ಹೋಗುವುದು ಇಷ್ಟ ಇರಲಿಲ್ಲ. ಮುಂಬೈನ ಡಾನ್ ಬಾಸ್ಕೋ ಹೈಸ್ಕೂಲ್ ನಲ್ಲಿ ತಮ್ಮ ಪ್ರೌಢಶಾಲಾ  ಶಿಕ್ಷಣವನ್ನು ಮುಗಿಸಿದರು. ಹೈಸ್ಕೂಲ್ ನಂತರ ಗುರುನಾನಕ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ಆದರೆ ಈ ಕಾಲೇಜನ್ನು ತೊರೆದು ಮಾರ್ಷಲ್ ಆರ್ಟ್ ಕಲಿಯೋಕೇ ಹೋದರು.ರಣಬೀರ್ ಕಪೂರ್:

ಸದ್ಯ ‘ಸಂಜು’ ಚಿತ್ರದ ಸಕ್ಸಸ್ ಮೂಡ್ ನಲ್ಲಿರುವ ರಣಬೀರ್ ಕಪೂರ್ ಈಗ ಬಾಲಿವುಡ್ ನ ಶ್ರೇಷ್ಠ ನಟರಲ್ಲಿ ಒಬ್ಬರು. ಬಹುಶಃ ರಣಬೀರ್ ಬಾಲಿವುಡ್ ನಲ್ಲಿ ಅತ್ಯಂತ ಕಡಿಮೆ ಶಿಕ್ಷಣ ಪಡೆದ ವ್ಯಕ್ತಿ ಇರಬಹುದು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೇವಲ 54% ಅಂಕಗಳನ್ನು ಪಡೆದ ನಂತರ ರಣಬೀರ್ ತಮ್ಮ ಅಧ್ಯಯನವನ್ನೇ ಬಿಟ್ಟು ಚಲನಚಿತ್ರ ನಿರ್ದೇಶನದಲ್ಲಿ ಭಾಗಿಯಾದರು.

Tags