ಸುದ್ದಿಗಳು

ಮೋದಿಯವರನ್ನು ಭೇಟಿಯಾದ ಬಾಲಿವುಡ್ ಕಲಾವಿದರು

ಮುಂಬೈ, ಜ.11:  ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಬಾರೀ ಸದ್ದು ಮಾಡುತ್ತಿದೆ. ಅದು ಇನ್ಯಾವ ಫೋಟೋನೂ ಅಲ್ಲ, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಬಾಲಿವುಡ್ ಮಂದಿ ಭೇಟಿಯಾಗಿದ್ದಾರೆ. ಈ ವೇಳೆ ಕ್ಲಿಕ್ಕಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಯಾರ್ಯಾರು ಭೇಟಿ ಮಾಡಿದ್ರು…?

ಹೌದು, ಬಾಲಿವುಡ್ ನ ರಣವೀರ್ ಸಿಂಗ್, ರಣಬೀರ್ ಕಪೂರ್, ಆಲಿಯಾ ಭಟ್, ರಾಜಕುಮಾರ್ ರಾವ್, ಆಯುಷ್ಯಮಾನ್ ಖುರಾನಾ, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ, ನಿರ್ದೇಶಕರಾದ ರೋಹಿತ್ ಶೆಟ್ಟಿ, ಕರಣ್ ಜೋಹರ್, ನಿರ್ಮಾಪಕರಾದ ಏಕ್ತಾ ಕಪೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭೇಟಿ ಮಾಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಫೋಟೋ ವೈರಲ್

ತಾರೆಯರು ಭೇಟಿ ಮಾಡಿದ್ದ ಉದ್ದೇಶವೇ ಭೇರೆಯಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಚಿತ್ರೋದ್ಯಮದ ಪಾತ್ರದ ಕುರಿತು ಚರ್ಚೆ ಮಾಡಿದ್ದಾರೆ. ಇನ್ನೂ ಎಲ್ಲರು ತಮ್ಮ ತಮ್ಮ ಇನ್ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಮೋದಿ ಭೇಟಿಯಾಗಿ ಖುಷಿಯಾದ ಕರಣ್ ಬರೆದುಕೊಂಡಿದ್ದಾರೆ.

ಟ್ವಿಟ್ಟರ್ ನಲ್ಲಿ ಏನಿದೆ..?

ಶಕ್ತಿಯುತ ಮತ್ತು ಸಕಾಲಿಕ ಸಂಭಾಷಣೆಗಳು ಬದಲಾವಣೆಯನ್ನು ತರುತ್ತವೆ ಮತ್ತು ಇದು ಸಾಮಾನ್ಯವಾದ ಸಂಭಾಷಣೆಯಾಗಲಿದೆ ಎಂದು ನಾವು ಭಾವಿಸುತ್ತೇವೆ. ಗೌರವಾನ್ವಿತ ಪ್ರಧಾನ ಮಂತ್ರಿ  ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು, ಒಂದು ಅದ್ಭುತ ಅವಕಾಶ. ಒಂದು ಸಮುದಾಯವಾಗಿ, ರಾಷ್ಟ್ರದ ಕಟ್ಟಡಕ್ಕೆ ಕೊಡುಗೆ ನೀಡಲು ಭಾರಿ ಆಸಕ್ತಿ ಇದೆ. ನಾವು ಮಾಡಬೇಕಾದುದು ತುಂಬಾ ಇದೆ. ವಿಶ್ವದಲ್ಲೇ ಅತಿ ದೊಡ್ಡ ಚಲನಚಿತ್ರೋದ್ಯಮದೊಂದಿಗೆ ಕೈಗೆತ್ತಿಕೊಂಡಾಗ, ನಾವು ಹೊಂದಿಕೊಳ್ಳುವ ಶಕ್ತಿ ಎಂದು ಭಾವಿಸುತ್ತೇವೆ. ಒಟ್ಟಾಗಿ ನಾವು ಒಂದು ಪರಿವರ್ತಕ ಭಾರತಕ್ಕೆ ಧನಾತ್ಮಕ ಬದಲಾವಣೆಗಳನ್ನು ನೀಡುತ್ತದೆ. ಇತ್ತೀಚೆಗೆ ಜಾರಿಗೊಳಿಸಲಾದ ಚಲನಚಿತ್ರ ಟಿಕೆಟ್ ದರಗಳಲ್ಲಿ ಜಿಎಸ್ಟಿ ಕಡಿತಕ್ಕೆ ಚಿತ್ರರಂಗವು ನಿಮಗೆ ಶುಭಾಶಯವನ್ನು ತಿಳಿಸುತ್ತದೆ. ನಿಮ್ಮ ಸಮಯಕ್ಕೆ ಸರ್, ತುಂಬಾ ಧನ್ಯವಾದಗಳು! ಎಂದು ಬರೆದುಕೊಂಡಿದ್ದಾರೆ.

 

View this post on Instagram

 

Had a good meeting with popular film personalities.

A post shared by Narendra Modi (@narendramodi) on

#bollywood #bollywood2019 #narendramodi #bollywoodstars #balkaninews #pmnarendramodimeetsbollywoodstars

Tags