ಸುದ್ದಿಗಳು

ವಯಸ್ಸು 40 ಕಳೆದರೂ ಮದುವೆಯಾಗದ ಬಾಲಿವುಡ್ ನಟರಿವರು…!

ಮುಂಬೈ, ಸೆ.14: ಮದುವೆ ಅನ್ನುವುದು ಎರಡು ಮನಸ್ಸುಗಳ ಮಿಲನ.. ಎರಡು ಜೀವಗಳು ಜತೆಯಾಗಿ ಬಾಳಲು ಮುಹೂರ್ತ ನಿಗದಿಪಡಿಸುವ ಸಮಯ.. ಮದುವೆ ಅನ್ನುವುದು ಜೀವನದಲ್ಲಿ ಬರುವ ಒಂದು ಅಧ್ಯಾಯ..

ಇದು ಪೀಠಿಕೆ ಅಷ್ಟೇ. ಅದಿರಲಿ, ಬಾಲಿವುಡ್ ನಲ್ಲಿ ಇಂದಿಗೂ ವಯಸ್ಸು ನಲ್ವತ್ತು ಕಳೆದರೂ ಮದುವೆಯಾಗದ ಅನೇಕರಿದ್ದಾರೆ. ಅವರು ಯಾರು..? ಬನ್ನಿ, ನೋಡೋಣ..

 ಅಕ್ಷಯ್ ಖನ್ನಾ

ಅಕ್ಷಯ್ ಖನ್ನಾ. ನಿಮಗೆ ಇವರ ಬಗ್ಗೆ ಗೊತ್ತಿರಬಹುದು. ಇವರ ವಯಸ್ಸು 43. ಅಕ್ಷಯ್ ಖನ್ನಾಗೆ ಇನ್ನೂ ನೆಚ್ಚಿನ ವಧು ಸಿಗಲಿಲ್ವಂತೆ. ಇದರ ಹಿಂದಿನ ಕಾರಣ ಏನು ಅನ್ನುವುದು ಯಾರಿಗೂ ತಿಳಿದಿಲ್ಲ. ಈಗಲೂ ಖನ್ನಾ ಸಿಂಗಲ್ ಆಗಿಯೇ ಇದ್ದಾರೆ.ಉದಯ್ ಚೋಪ್ರಾ

ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.  ನೋಡಲು ಚೆನ್ನಾಗಿರುವ ಈ ನಟ ಸುಂದರವಾಗಿದ್ದಾರೆ ಕೂಡಾ. ಆದರೆ ಇವರಿಗೆ ವಯಸ್ಸು 45 ಆದರೂ ಇನ್ನೂ ಮದುವೆಯಾಗಲಿಲ್ಲ. ಇವರು ಯಾಕೆ ಮದುವೆಯಾಗಲಿಲ್ಲ ಎನ್ನುವುದು ಇನ್ನೂ ಗೌಪ್ಯವಾಗಿದೆ. ಹರ್ಮನ್ ಬವೆಜಾ

ಹರ್ಮನ್ ಬವೆಜಾ ಬಾಲಿವುಡ್ ನ ಪ್ರಸಿದ್ಧ ನಿರ್ಮಾಪಕ. ಹಾಗೂ ಪ್ರಸಿದ್ಧ ನಟ ಕೂಡಾ. ಇವರ ವಯಸ್ಸು 40 ಕಳೆದರೂ ಇನ್ನೂ ಮದುವೆಯಾಗಿಲ್ಲ. ಕಾರಣ ಮಾತ್ರ ಬಿಟ್ಟು ಕೊಟ್ಟಿಲ್ಲ.ಸಲ್ಮಾನ್ ಖಾನ್

 

ಇನ್ನೂ ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ , ಬಾಯಿಜಾನ್  ಸಲ್ಮಾನ್ ಖಾನ್ ಯಾವಾಗ ಮದುವೆ ಆಗುತ್ತಾರೆ ಅನ್ನುವುದು ಹೆಚ್ಚಿನವರ ಪ್ರಶ್ನೆ. ಅದಕ್ಕೆ ಸಲ್ಮಾನ್ ಖಾನ್ ಇನ್ನೂ ಉತ್ತರ ಕೊಟ್ಟಿಲ್ಲ. ಇವರ ವಯಸ್ಸು 52 ದಾಟಿದೆ. ಆದರೆ ಸಲ್ಲು ಮದುವೆಯಾಗುವುದು ಮಾತ್ರ ಕಾಣುತ್ತಿಲ್ಲ.

Tags

Related Articles