ಸುದ್ದಿಗಳು

ಐಶಾರಾಮಿ ಗೃಹ ಪ್ರವೇಶ ಮಾಡಿದ ಸನ್ನಿ ದಂಪತಿ

ಮುಂಬೈ, ಸೆ.14: ಮುಂಬೈನ ಹೊಸ ಮನೆಗೆ ನಟಿ ಸನ್ನಿಲಿಯೋನ್ ವಾಸ್ತವ್ಯ ಹೂಡಿದ್ದಾರೆ. ಹಬ್ಬದ ದಿನವಾದ ನಿನ್ನೆ ಹೊಸ ಮನೆ ಪ್ರವೇಶ ಮಾಡಿದ್ದಾರೆ.

ಹಬ್ಬಗಳು ಬಂದರೆ ಸಾಕು ಜನ ಹೊಸ ಮನೆ, ಹೊಸ ಕಾರು ಹೀಗೆ ಶುಭ ದಿನ ಅಂತಾ ಹೊಸ ಯೋಜನೆಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ಸನ್ನಿ ಲಿಯೋನ್ ಕೂಡ ಹೊಸ ಮನೆಯೊಂದನ್ನು ತೆಗೆದುಕೊಂಡಿದ್ದಾರೆ.

ಐಶಾರಾಮಿ ಮನೆಗೆ ಸನ್ನಿ ದಂಪತಿ

ನಿನ್ನೆ ಗಣೇಶ ಹಬ್ಬದ ಪ್ರಯುಕ್ತ ನಟಿ ಸನ್ನಿಲಿಯೋನ್ ಹೊಸ ಮನೆ ಕೊಂಡುಕೊಂಡಿದ್ದಾರೆ. ಮುಂಬೈ ನಗರದ ಐಶಾರಾಮಿ ಮನೆಯಂದನ್ನು ಕೊಂಡುಕೊಂಡಿರುವ ಸನ್ನಿ ಲಿಯೋನ್ ಈ ವಿಚಾರವನ್ನು ತಮ್ಮ ಇನ್ ನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಇಂದು ಏನು ಮಾಡಬೇಕು ಏನು ಮಾಡಬಾರದು ಅಂತಾ ನನಗೆ ಗೊತ್ತಿಲ್ಲ. ಆದರೆ ದೇವರು ಗಣೇಶ ಹೊಸ ಮನೆಗೆ ಪ್ರವೇಶ ಮಾಡಿದ್ದಾನೆ. ಎಲ್ಲರಿಗೂ ಗಣೇಶ ಹಬ್ಬದ ಶುಭಾಷಯ ಅಂತಾ ಬರೆದುಕೊಂಡಿದ್ದಾರೆ.

Tags

Related Articles