ಫ್ಯಾಷನ್ಬಾಲ್ಕನಿಯಿಂದಮಹಿಳೆಸುದ್ದಿಗಳುಸೌಂದರ್ಯ
Trending

ಯಾಮಿನಿಗೆ ಬ್ಯೂಟಿ ಟಿಪ್ಸ್​ ಕೊಟ್ಟಿದ್ದೇ ಇವ್ರಂತೆ

ಅವರಜ್ಜಿ ಮಾತುಗಳ ಅನುಸರಿಸಿದ ಬಾಲಿವುಡ್ ಚೆಲುವೆ!

 

ಮುಂಬೈ, ಸೆ-4 :  ಯಾಮಿ ಗೌತಮ್‌ ಎಂಬ ಬಾಲಿವುಡ್‌ ಚೆಲುವೆ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ರು. ಜಾಹೀರಾತಿನಲ್ಲಿ ಅಂದಿನಿಂದ ಇಂದಿನವರೆಗೆ ಮಿಂಚುತ್ತಿರುವ ನುಣುಪು ಕೆನ್ನೆಯ ಚೆಲುವೆ ಈಕೆ. ನೋಡಲು ಎಷ್ಟೊಂದು ಆಕರ್ಷಕ…!

ಹೌದು..!​ ಈ ಬೆಡಗಿ ಇಷ್ಟೊಂದು ಅಂದ ಚೆಂದವಾಗಿ ಕಾಣಲು ಒಂದು ದೊಡ್ಡ​ ಸೀಕ್ರೇಟ್​ ಇದೆ.  ಯಾಮಿ ಸಿನಿಮಾ ಪಯಣ ಶುರು ಆಗಿದ್ದು ಸ್ಯಾಂಡಲ್​ವುಡ್​ನಿಂದ. “ಉಲ್ಲಾಸ -ಉತ್ಸಾಹ “ ಚಿತ್ರದಲ್ಲಿ ಸಖತ್​ ಉತ್ಸಾಹದೊಂದಿಗೆ ನಟಿಸಿ ಸೈ ಅನಿಸಿಕೊಂಡ ಈ ಬೆಡಗಿ ಪಂಜಾಬಿ, ಮಲಯಾಳಂ, ಹಿಂದಿ, ತಮಿಳು ಹೀಗೆ ನಾನಾ ಭಾಷೆಯಲ್ಲಿ ನಟಿಸಿ ಬಹುಭಾಷಾ ತಾರೆಯಾಗಿ ಹೊರಹೊಮ್ಮಿದ್ರು. ನೋಡಲು ಆಕರ್ಷಕವಾಗಿರುವ ಈ ತಾರೆ ಇತ್ತೀಚೆಗೆ ಬಂದ  ಕಾಬಿಲ್ ಮತ್ತು ಸರ್ಕಾರ್ 3 ಚಿತ್ರಗಳ ಮೂಲಕ ಗಮನಾರ್ಹ ಅಭಿನಯ ನೀಡಿದ್ರು. ಆದ್ರೆ ಈ ಬೆಡಗಿ ಕೇವಲ ನಟನೆ ಮಾತ್ರವಲ್ಲದೇ ಬ್ಯೂಟಿ ಕಡೆಗೂ ತುಂಬಾನೇ ಇಂಪಾರ್ಟೆನ್ಸ್​ ಕೊಡ್ತಾರೆ.

ಈ ಫೇರ್​ ಆಂಡ್​ ಲವ್ಲಿ ಬೆಡಗಿ ಬ್ಯೂಟಿ ಕಾಪಾಡಿಕೊಳ್ಳಲು ಏನ್​ ಮಾಡ್ತಿದ್ದಾರೆ ಅಂತ ಪ್ರಶ್ನೆ ಎದುರಾಗಿದ್ಯಾ?

ಇಲ್ನೋಡಿ..!​ ಈ ಚೆಲುವೆ ತಮ್ಮ ಅಭಿಮಾನಿಗಳಿಗೆ ಒಂದಷ್ಟು ಟಿಪ್ಸ್​ ಕೊಟ್ಟಿದ್ದಾರೆ. “ಸೌಂದರ್ಯ ಹೆಚ್ಚಲು ನೈಸರ್ಗಿಕ ವಸ್ತುಗಳ ಜೊತೆಗೆ ಹೆಚ್ಚು ನೀರನ್ನು ಕುಡಿಯಬೇಕು. ಉದ್ದನೆಯ ರೆಪ್ಪೆಗಾಗಿ ಹರಳೆಣ್ಣೆ, ವಿಟಮಿನ್ ಇ ಆಯಿಲ್ ಮತ್ತು ಲೋಳೆಸರವನ್ನು ಪೇಸ್ಟ್ ಮಾಡಿಕೊಂಡು ಬಳಸಬೇಕಂತೆ. ಮುಖದ ಚರ್ಮ ಕೂದಲಿನ ಸ್ನಾನದ ಬಳಿಕ ಕಂಡಿಷನರ್, ಹೇರ್ ಜೆಲ್ ಬಳಕೆ ಮಾಡುವ ಬದಲು ಒಂದು ಬಟ್ಟಲು ವಿನೆಗರ್ ಬಳಕೆ ಮಾಡುವುದರಿಂದ ಕೂದಲು ಮೃದುವಾಗಿರುತ್ತದೆ ” ಎಂದು ಯಾಮಿ ಗೌತಮ್’ರವರು ಹೇಳಿದ್ದಾರೆ. ಇದನ್ನು ಯಾಮಿಗೆ ಅವ್ರ ಪ್ರೀತಿಯ ಅಜ್ಜಿ ಹೇಳಿ ಕೊಟ್ಟ ಟಿಪ್ಸ್​ ಅಂತೆ .  ಅಜ್ಜಿ ಹೇಳಿದ್ದ ಮನೆ-ಮದ್ದುಗಳೇ ನಟಿ ಯಾಮಿ ಗೌತಮ್’ರವರ ಸೌಂದರ್ಯದ ಗುಟ್ಟು ಅನ್ನೋದು ವಿಶೇಷ.

Tags

Related Articles