ಸುದ್ದಿಗಳು

ಬಾಲಿವುಡ್ ನಲ್ಲಿ ಕೊನೆ ಕ್ಷಣದಲ್ಲಿ ಮುರಿದು ಬಿದ್ದ ಸಂಬಂಧಗಳಿವು

ಬಾಲಿವುಡ್ ನಲ್ಲಿ ನಟ ನಟಿಯರ ಹೆಸರು ಒಂದಾಲ್ಲಾ ಒಂದು ಹಿರೋ, ಹಿರೋಯಿನ್ ಜೊತೆಗೆ ಥಳಕು ಹಾಕಿಕೊಳ್ಳುತ್ತಲೇ ಇರುತ್ತದೆ. ಪ್ರತಿದಿನ ಮಾಧ್ಯಮಗಳಲ್ಲಿ ಅವರು ಇವರೊಂದಿಗೆ ಡೇಟಿಂಗ್ ಹೋಗಿದ್ದರಂತೆ. ಇವರು ಅವರನ್ನು ಮದುವೆಯಾಗುತ್ತಾರಂತೆ. ಇವರಿಬ್ಬರ ಸಂಬಂಧ ಮುರಿದು ಬಿತ್ತಂತೆ ಹೀಗೆ ಅಂತೆ ಕಂತೆಗಳ ಸುದ್ದಿಗಳು ಸಿನಿಮಾ ಇಂಡಸ್ಟ್ರೀಯಲ್ಲಿ ಹೊಸದೇನು ಅಲ್ಲ. ಅವುಗಳಲ್ಲಿ ಎಷ್ಟು ನಿಜವೋ ಸುಳ್ಳೋ ಎಂಬುದು ಮಾತ್ರ ಯಾರಿಗೂ ಗೊತ್ತಿರುವುದಿಲ್ಲ. ಆದರೆ ಬಾಲಿವುಡ್ ನಲ್ಲಿ ಅಧಿಕೃತವಾಗಿ ಸಂಬಂಧವಿಟ್ಟುಕೊಂಡು, ಅದು ಮದುವೆಯ ಮಾತುಕತೆವರೆಗೂ ಹೋಗಿ, ಕೊನೆ ಕ್ಷಣದಲ್ಲಿ ಮುರಿದು ಬಿದ್ದ ಅದೆಷ್ಟೋ ಉದಾಹರಣೆಗಳು ಇವೆ. ಅವುಗಳಲ್ಲಿ ಬಾಲಿವುಡ್ ನ ಪ್ರಸಿದ್ಧ ನಟ-ನಟಿರೂ ಸೇರಿದ್ದು ಅವರ ಒಂದಿಷ್ಟು ವಿವರ ಇಲ್ಲಿದೆ.

ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ 

ನಟಿ ರವೀನಾ ಟೆಂಡನ್ ಹಾಗೂ ಅಕ್ಷಯ್ ಪರಸ್ಪರ ಪ್ರೀತಿಸುತ್ತಿದ್ದರು. ಹಲವು ವರ್ಷಗಳ ಕಾಲ ನಡೆದ ಇವರ ಪ್ರೀತಿ ಪ್ರೇಮ, ಮದುವೆಯವರೆಗೂ ಬಂದು ತಲುಪಿತ್ತು. ಆದರೆ ಅದ್ಯಾಕೋ ಏನೂ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿ, ಕೊನೆಕ್ಷಣದಲ್ಲಿ ಸಂಬಂಧಮುರಿದು ಬಿತ್ತು.

 ಅಭಿಷೇಕ್ ಬಚ್ಚನ್ ಮತ್ತು ಕರೀಷ್ಮಾ ಕಪೂರ್
ನಟಿ ಕರೀಷ್ಮಾ ಕಪೂರ್ ಮತ್ತು ಅಭಿಷೇಕ್ ಬಚ್ಚನ್ ಕೂಡ ತುಂಬಾನೆ ಕ್ಲೋಸ್ ಆಗಿದ್ದವರು. ಅವರಿಬ್ಬರ ನಡುವಿನ ಸಂಬಂಧ ಆ ಕಾಲದಲ್ಲಿ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಲ್ಲಿತ್ತು. ಇವರಿಬ್ಬರು ಮದುವೆಯಾಗುವ ನಿರ್ಧಾರವನ್ನು ಮಾಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಕರೀಷ್ಮಾ  ಉದ್ಯಮಿಯೊಬ್ಬರ ಕೈ ಹಿಡಿದರೆ.,  ಅಭಿಷೇಕ್, ಐಶ್ವರ್ಯಾ ರೈ ಜೊತೆಗೆ ವಿವಾಹವಾದರು.
 
  ಜಿತೇಂದ್ರ ಹಾಗೂ ಹೇಮಮಾಲಿನಿ
ಬಾಲಿವಡ್ ಲೆಜೆಂಡ್ ಹಾಗೂ ಹೇಮಮಾಲಿನಿ ಕೂಡ ಪರಸ್ಪರ ಪ್ರೀತಿಸುತ್ತಿದ್ದವರು. ಆದರೆ ಅವರಿಬ್ಬರ ವಿವಾಹ ನಡೆಯಲಿಲ್ಲ.
 
ಸಲ್ಮಾನ್ ಖಾನ್ ಸಂಗೀತ ಬಿಜಿಲಾನಿ
ನಟ ಸಲ್ಮಾನ್ ಖಾನ್ ಹೆಸರು ಹಲವರೊಂದಿಗೆ ಕೇಳಿಬಂದಿದ್ದು ಇದೆ. ಆದರೆ ಅವು ಯಾವುದು ದೀರ್ಘಕಾಲ ಉಳಿದಿಲ್ಲ. ನಟ ಸಲ್ಮಾನ್ ಖಾನ್ ಸಂಗೀತ ಬಿಜಿಲಾನಿಯನ್ನು ತುಂಬಾನೆ ಪ್ರೀತಿಸುತ್ತಿದ್ದರು. ಅವರಿಬ್ಬರ ಸಂಬಂಧ ವಿವಾಹವಾಗುವವರೆಗೂ ಸಾಗಿತ್ತು. ಆದರೆ ಅದ್ಯಾವುದೋ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ.
 
ವಿವೇಕ್ ಒಬೆರಾಯ್ ಮತ್ತು ಗುರುಪ್ರೀತ್ ಗಿಲ್
ನಟ ವಿವೇಕ್ ಒಬೆರಾಯ್ ಮತ್ತು ಗುರುಪ್ರೀತ್ ಗಿಲ್ ಕೂಡ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದಿದ್ದರು. ಮಾದ್ಯಮಗಳೆದರು ಹಲವು ಬಾರಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಆದರೆ ಇವರಿಬ್ಬರ ಪ್ರೀತಿ ಬ್ರೇಕ್ ಅಪ್ ಆಯಿತು.
Tags