ಸುದ್ದಿಗಳು

ಭಾರತದಲ್ಲಿ ಜನಿಸದ ಬಾಲಿವುಡ್ ನ ಈ ಸೆಲೆಬ್ರಿಟಿಗಳು

ಹೆಸರು ಮಾಡಿರುವ ನಾಯಕಿಯರು

ಮುಂಬೈ ಅ.29: ನಾವು, ನೀವು ಗುರುತಿಸುವ ಈ 6 ಮಂದಿ ಬಾಲಿವುಡ್ ಖ್ಯಾತನಾಮರು ಭಾರತದಲ್ಲಿ ಹುಟ್ಟಿದವರಲ್ಲ. ಅಂದರೆ ವಿದೇಶದಲ್ಲಿ ಇವರು ಜನಿಸಿದವರಾಗಿದ್ದಾರೆ. ಸದ್ಯ ಇವರು ಬಾಲಿವುಡ್ ನಲ್ಲಿ ತಮ್ಮದೇ ಆದಂತ ಛಾಪನ್ನು ಮೂಡಿಸಿ ಹೆಸರುವಾಸಿಯಾಗಿದ್ದಾರೆ.

ದೀಪಿಕಾ ಪಡುಕೋಣೆ

ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆಯವರ ಪುತ್ರಿಯೇ ದೀಪಿಕಾ ಪಡುಕೋಣೆ. ಈ ನಟಿ ಕೋಪನ್ ಹ್ಯಾಗನ್ ನಲ್ಲಿ ಜನಿಸಿದರು. ಇವರು ಜನಿಸುವ ಸಮಯ, ತಂದೆ  ಡ್ಯಾನಿಷ್ ನಲ್ಲಿ ತರಬೇತಿ ಪಡೆಯುತ್ತಿದ್ದರು. 

ಕತ್ರಿನಾ ಕೈಫ್

ನಟಿ ಕತ್ರೀನಾ ಕೈಫ್ ತಂದೆ ಕಾಶ್ಮೀರ ನಿವಾಸಿ. ಈಕೆಯ ತಾಯಿ ಬ್ರಿಟಿಷ್ ಮೂಲದವರು. ಕತ್ರಿನಾ ಕೈಫ್ ಹಾಂಗ್ ಕಾಂಗ್ ನಲ್ಲಿ ಜನಿಸಿದರು. ಇವರು ಪ್ರಪಂಚದ ವಿವಿಧ ಭಾಗಗಳಲ್ಲಿ ವಾಸಿಸಿದ್ದರು. ಆರಂಭದಲ್ಲಿ ಇವರಿಗೆ ಹಿಂದಿ ಭಾಷೆಯ ಅರಿವು ಇರಲಿಲ್ಲ.ಆದರೂ ಬಾಲಿವುಡ್ ಪ್ರವೇಶಿಸಿ ಕಮಾಲ್ ಮಾಡಿಯೇ ಬಿಟ್ಟರು.

ಇಮ್ರಾನ್ ಖಾನ್

ನಟ ಇಮ್ರಾನ್ ಖಾನ್ ಅಮೇರಿಕಾದ ವಿಸ್ಕಾನ್ಸಿನ್ ನಲ್ಲಿ ಜನಿಸಿದರು. ತಮ್ಮ ಹೆತ್ತವರ ವಿಚ್ಛೇದನದ ಬಳಿಕ ಇವರು ಭಾರತಕ್ಕೆ ಮರಳಿದರು. ಇವರು ಬಾಲಿವುಡ್ ನ ಉದಯೋನ್ಮುಖ ನಟರಾಗಿದ್ದಾರೆ.ಆಲಿಯಾ ಭಟ್

ಈ ವಿಚಾರ ಬಹುಪಾಲು ಜನರಿಗೆ ಶಾಕ್ ನೀಡಬಹುದು. ಆಲಿಯಾ ಭಟ್ ಹುಟ್ಟಿದ್ದು ಭಾರತದಲ್ಲಿ ಅಲ್ಲ. ಇವರು ಲಂಡನ್ ನಲ್ಲಿ ಜನಿಸಿದರು. ಇವರ ತಾಯಿ ಸೋನಿ ರಾಜದಾನ್ ಕೂಡ ಮೂಲತಃ ಬ್ರಿಟೀಷ್ ನವರು. ಹಾಟ್ ಕ್ವೀನ್ ಆಗಿರುವ ಆಲಿಯಾ ಸದ್ಯದ ಪಡ್ಡೆ ಹುಡುಗರ ಫೇವರಿಟ್ ನಾಯಕಿಯಾಗಿದ್ದಾರೆ.ಎವೆಲಿನ್ ಶರ್ಮಾ

ಎವೆಲಿನ್ ಶರ್ಮಾ ‘ಯೇ ಜವಾನಿ ಹಾಯ್ ದಿವಾನಿ’ ಖ್ಯಾತಿಯ ನಟಿ ಆಗಿದ್ದಾರೆ. ಇವರು ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿ ಜನಿಸಿದರು. ಯುನೈಟೆಡ್ ಕಿಂಗ್ಡಮ್ ನಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ನಂತರ ಇವರು ಬಾಲಿವುಡ್ ನಲ್ಲಿ ತಮ್ಮ ಅದೃಷ್ಟ ಹುಡುಕಿದರು.

ಸಪ್ನಾ ಪಬ್ಬಿ

ಸಪ್ನಾ ಪಬ್ಬಿ ‘ಖಮೋಶಿಯಾನ್ ‘ ಖ್ಯಾತಿಯ ನಟಿ. ಇವರು ಲಂಡನ್ ನವರು. ಅವರು “ಘರ್ ಆಜಾ ಪರ್ದೇಸಿ” ಧಾರಾವಾಹಿಯಲ್ಲಿ ನಟಿಸಿದ್ದರು. ಭಾರತವನ್ನು ಪ್ರೀತಿಸುವ ಈ ನಟಿ ಸದ್ಯ ಇಲ್ಲೇ ನೆಲೆಸಿದ್ದಾರೆ.

Tags

Related Articles