ಸುದ್ದಿಗಳು

ಸಲ್ಮಾನ್ ಸಹೋದರಿಯ ಮ್ಯಾರೇಜ್ ಸ್ಟೋರಿ…..

ಅರ್ಪಿತಾ ಕೈ ಹಿಡಿದ ಆಯುಶ್

ನಟ ಸಲ್ಮಾನ್ ಖಾನ್ ಬಾಲಿವುಡ್ ನ ಬ್ಯಾಡ್ ಬಾಯ್ ಎಂದು ಖ್ಯಾತಿಯಾಗಿದ್ದರೂ, ಅವರು ಪಕ್ಕಾ ಕೌಟುಂಬಿಕ ವ್ಯಕ್ತಿ. ಕುಟುಂಬ ಸದಸ್ಯರೊಂದಿಗೆ ಅವರಿಗಿರುವ ಅಟ್ಯಾಚ್ ಮೆಂಟ್ ನಿಜಕ್ಕೂ ಅನನ್ಯ. ತನ್ನ ಸಹೋದರಾದ ಅರ್ಬಜ್ ಖಾನ್ , ಸೋಹಾಲಿ ಖಾನ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಸಲ್ಮಾನ್ ಖಾನ್ ಗೆ, ತನ್ನ ಮುದ್ದು ತಂಗಿ ಅರ್ಪಿತಾ ಎಂದರೆ ಎಲ್ಲಿಲ್ಲದ ಪ್ರೀತಿ. ಈ ಮೂರು ಮಂದಿ ಸಹೋದರರಿಗೆ ಅರ್ಪಿತಾ ಖಾನ್ ಎಂದರೆ ಎಲ್ಲಿಲ್ಲದ ಅಕ್ಕರೆ. 2014ರಲ್ಲಿ ಅರ್ಪಿತಾ ಖಾನ್ ಆಯುಶ್ ಶರ್ಮಾ ಅವರ ಕೈ ಹಿಡಿಯುತ್ತಾರೆ. ಅಂದಹಾಗೆ  ಅಯುಶ್ ಶರ್ಮಾ, ಮತ್ತು ಅರ್ಪಿತಾರದ್ದು ಪ್ರೇಮ ವಿವಾಹ. ಲವ್ ರಾತ್ರಿ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ತಯಾರಾಗಿದ್ದಾರೆ ಆಯುಶ್.ಇತ್ತೀಚೆಗೆ ಚಿತ್ರದ ಟ್ರೈಲರ್ ಲಾಂಚ್ ಆಯ್ತು. ಈ ಸಂದರ್ಭ ಸಲ್ಮಾನ್ ಖಾನ್ ಮಾತನಾಡಿ, ಅರ್ಪಿತಾ ಖಾನ್ ತಾನು ಆಯುಶ್ ಅವರನ್ನು ಪರಿಚಯಿಸಿ ತಾನು ಇವರನ್ನು ಮದುವೆಯಾಗುತ್ತಿರುವುದಾಗಿ ಹೇಳಿದಾಗ ಮನೆ ಮಂದಿಯ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ.ತಂಗಿ ಎಂದರೇ ಸಲ್ಮಾನ್ ಖಾನ್ ಗೆ ಎಲ್ಲಿಲ್ಲದ ಪ್ರೀತಿ

ಆರಂಭದಲ್ಲಿ ಅರ್ಪಿತಾ ಅವರ ಆಯ್ಕೆ ಬಗ್ಗೆ ಭಯವಾಗಿತ್ತು. ಆದರೆ ನಿಧಾನವಾಗಿ ಆಕೆಯ ಆಯ್ಕೆ ಉತ್ತಮವಾಗಿದೆ ಎಂಬುದು ತಿಳಿಯಿತು ಎಂದಿದ್ದಾರೆ ಖಾನ್ ಸಹೋದರರು. ನಾವು ಬೆಳಗ್ಗೆ ಎಳುವುದು ನಿಧಾನವಾಗಿ. ಆದರೆ ಮದುವೆಯ ಪ್ರೋಪೋಸಲ್ ಗಳೆಲ್ಲಾ ಬೆಳಗ್ಗೆ ಬೇಗ ಬರುತ್ತಿದ್ದವು. ಹೀಗಾಗಿ ಪ್ರಪೋಸಲ್ ಗಳನ್ನು ನೋಡಲು ನಮಗೆ ಆಗುತ್ತಿರಲಿಲ್ಲ. ನಾನು ಆ ಸಮಯದಲ್ಲಿ ಮೈ ಪಂಜಾಬಿ ನಿಖಾ ಚಿತ್ರದ ಟೈಟಲ್ ರೆಡಿ ಮಾಡುತ್ತಿದ್ದೇವು. ಇನ್ನೂ ನಿರ್ಮಾಣ ಹಂತದಲ್ಲಿದ್ದ ಚಿತ್ರಕ್ಕೆ ಹೊಸ ಹುಡುಗನೊಬ್ಬನಿಗಾಗಿ ನಾವು ಹುಡುಕಾಟ ನಡೆಸುತ್ತಿದ್ದೆವು.ಕೆಲ ತಿಂಗಳ ನಂತರ, ನನ್ನ ಸಹೋದರ ಸೋಹೆಲ್, ನಾನು ಜಿಮ್ ನಲ್ಲಿ ಒಬ್ಬ ಹುಡುಗನ ನೋಡಿದ್ದೇನೆ. ಆತ ಈ ಚಿತ್ರಕ್ಕೆ ಸೂಟ್ ಆಗುತ್ತಾನೆ ಎಂದಿದ್ದೆ. ನಾನು ಸರಿ ಹಾಗಾದರೆ ಆ ಹುಡುಗನನ್ನು ಚಿತ್ರಕ್ಕೆ ಸಹಿ ಮಾಡಿಸು ಎಂದಿದ್ದೆ. ಆದರೆ ಅದೇ ಹುಡುಗ ನಮ್ಮ ಮನೆಗೆ ಅರ್ಪಿತಾ ಜೊತೆಗೆ ಬಂದಿದ್ದು, ಅರ್ಪಿತಾ ನಾನು ಈತನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದು ಅಚ್ಚರಿಯಾಯಿತು. ಈಸಂದರ್ಭ ಸೋಹಾಲಿ, ಇದೇ ಹುಡುಗನನ್ನು ನಾನು ಜಿಮ್ ನಲ್ಲಿ ನೋಡಿದ್ದಾಗಿ ಹೇಳಿದ್ದರು. ಇದೊಂದು ಕೋ ಇನ್ಸಿಡೆಂಟ್ . ಆಯುಷ್ ನಿಜಕ್ಕೂ ಒಳ್ಳೆಯ ಹುಡುಗ ಎಂದು ನಕ್ಕಿದ್ದಾರೆ ಸಲ್ಮಾನ್ ಖಾನ್.

Tags

Related Articles