ಸುದ್ದಿಗಳು

ಬೆಳ್ಳಿ ಒಡವೆಗಳೇ ‘ಡಿಪ್ಪಿ’ ಗೆ ಮುತ್ತು ರತ್ನ

ಮುಂಬೈ, ಆ.18: ಯಾವುದೇ ಒಬ್ಬ ಹುಡುಗಿ ಯಾವುದೇ ಒಂದು ಸಾಮಾನ್ಯ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಇರೋ ಬರೋ ಬಂಗಾರದ ಒಡವೆಗಳನ್ನು ಧರಿಸುವುದು ಸಾಮಾನ್ಯ . ಇನ್ನು ಮದುವೆಗೆ ಅಂದ್ರೆ ಕೇಳಬೇಕಾ..? ಹೊಸ ಒಡವೆಗಳನ್ನು ಸಾಲಾ ಮಾಡಿ ಆದ್ರು ತೆಗೆದುಕೊಂಡು ಹಾಕಿಕೊಳ್ತಾರೆ. ಅದರಲ್ಲೂ ಫೇಮಸ್ ನಟಿ ಅಂದ್ರೆ ಕೇಳಾಬೇಕ..? ಯಾವುದಕ್ಕೆ ಕಡಿಮೆ ಇರುತ್ತೆ ಹೇಳಿ. ಎಲ್ಲ ಜಾಸ್ತಿನೇ ಇರುತ್ತೆ. ಇಂಥವರ ಮದುವೆ ಅಂದ್ರೆ ಇನ್ನೇಗೆ ಇರಬೇಡ ಲೆಕ್ಕಾ ಹಾಕಿ. ಆದ್ರೆ ಇಲ್ಲೊಬ್ಬ ಫೇಮಸ್ ನಟಿ ತಮ್ಮ ಮದುವೆಗೆ ಬೆಳ್ಳಿಯ ಆಭರಣಗಳನ್ನು ಹಾಕ್ತಾ ಇದ್ದಾರೆ. ಯಾರು ಅಂದ್ರಾ ಮುಂದೆ ನೋಡಿ..

ಬಾಲಿವುಡ್ ಬೆಡಗಿ

ಹೌದು, ಇವಾಗ ಹೇಳ್ತಾ ಇರೋ ನಟಿ ಇನ್ಯಾರು ಅಲ್ಲ ದೀಪಿಕಾ ಪಡುಕೋಣೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ವೀರ್ ಸಿಂಗ್ ನವೆಂಬರ್‌ ನಲ್ಲಿ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಹಳೆಯ ವಿಚಾರ. ಯಾಕಂದ್ರೆ ಇದಕ್ಕೆ ಬೇಕಾದ ಎಲ್ಲಾ ಮಾಹಿತಿ ಕೂಡ ಮೂಲಗಳಿಂದ ಗೊತ್ತಾಗಿದೆ. ದಟ್ಟವಾಗ್ತಿದೆ. ನವೆಂಬರ್ ೧೨ ರಿಂದ ೧೬ರ ನಡುವೆ ದಿಪ್ವೀರ್ ಮದುವೆ ನಡೆಯಲಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಇಂಬು ನೀಡುವಂತ ವಿಚಾರ ಒಂದು ಹೊರ ಬಿದ್ದಿದೆ.ಇಟಲಿಯಲ್ಲಿ ಮದುವೆ ಸಮಾರಂಭ

ನವೆಂಬರ್ ೧೦ ರಂದು ಇಟಲಿಯ ಲೇಕ್ ಕಾಮೋದಲ್ಲಿ ಈ ಜೋಡಿ ಹಸೆಮಣೆ ಏರೋದಕ್ಕೆ ಸಿದ್ಧತೆ ನಡೆಸಿದೆಯಂತೆ. ಲೋಂಬರ್ಡಿ ಪ್ರದೇಶದಲ್ಲಿರುವ ಈ ಸುಂದರ ಸರೋವರ ಲೇಕ್ ಕಾಮೋ ರೋಮನರ ಕಾಲದಿಂದಲೂ ಶ್ರೀಮಂತರ ಸಂಪತ್ತು ಎಂಬಂತೆಯೇ ಕಾಣಿಸಿಕೊಂಡಿದೆ. ಇದೀಗ ಈ ಮದುವೆ ವಿಚಾರಕ್ಕೆ ಸಂಭಂಧಿಸಿದಂತೆ ದೀಪಿಕಾ ತಯಾರಿಯನ್ನು ಕೂಡಾ ನಡೆಸ್ತಾ ಇದ್ದಾರೆ. ತಮ್ಮ ಮದುವೆಗೆ ಏನು ಬೇಕೋ ಅದನ್ನು ಕೊಂಡುಕೊಳ್ಳುತ್ತಿದ್ದಾರೆ .

ಆದರೆ ವಿಷೇಶ ಏನಪ್ಪಾ ಅಂದ್ರೆ ದೀಪಿಕಾ ಮದುವೆಗೆ ಎಂತಹ ಒಡವೆಗಳನ್ನು ಕೊಂಡುಕೊಳ್ತಾ ಇದ್ದಾರೆ. ಆದ್ರೆ ಅದ್ಯಾವುದು ವಜ್ರ, ಚಿನ್ನ, ಪ್ಲಾಟಿನಂ ಅಲ್ಲ, ಬದಲಿಗೆ ಬೆಳ್ಳಿಯ ಒಡವೆಗಳನ್ನು ತೆಗೆದುಕೊಳ್ತಾ ಇದ್ದಾರಂತೆ. ಮದುವೆಗೆ ಏನೆಲ್ಲಾ ಬೇಕೊ ಅದನ್ನ ಬೆಳ್ಳಿಯಲ್ಲಿಯೇ ಕೊಳ್ಳಲಿದ್ದಾರಂತೆ. ಸದ್ಯ ಈ ಆಭರಣಕ್ಕೆ ತಕ್ಕಂತೆ ಇದೀಗ ಕಾಸ್ಟೂಮ್ ಡಿಸೈನ್ ಕೂಡ ಮಾಡಲಿದ್ದಾರಂತೆ. ಬೆಳ್ಳಿ ಒಡವೆಗೆ ಯಾವ ರೀತಿ ಸರಿ ಹೊಂದುತ್ತೋ ಅಂಥಹ ಬಟ್ಟೆಗಳನ್ನ ಹಾಕಲಿದ್ದಾರಂತೆ.

Tags