ಸುದ್ದಿಗಳು

ಹೊಸ ಅತಿಥಿಯ ನಿರೀಕ್ಷೆಯಲ್ಲಿ ಬಾಲಿವುಡ್ ಜೋಡಿ……

ಬಾಲಿವುಡ್ ನಟಿ ನೇಹಾ ದೂಪಿಯಾ ಮತ್ತು ಅಂಗದ್ ದಿಡೀರನೆ ತಮ್ಮ ಮದುವೆಯ ವಿಚಾರವನ್ನು ಘೋಷಿಸಿ ಎಲ್ಲರಲ್ಲೂ ಅಚ್ಚರಿ ಸೃಷ್ಟಿಸಿದ್ದರು. ಸದ್ದು ಗದ್ದಲವಿಲ್ಲದೆ, ಆಡಂಬರವಿಲ್ಲದೇ  ಸರಳವಾಗಿ ಕಳೆದ ಮೇ 10ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ದಂಪತಿಗಳು, ಸಾಮಾಜಿಕ ಜಾಲತಾಣದಲ್ಲೋ ಫೋಟೋವೊಂದನ್ನು ಹರಿಬಿಟ್ಟು, ನಾವೀಗ ಪತಿ ಪತ್ನಿಯರು ಎಂದು ಘೋಷಿಸಿದ್ದರು. ಅಲ್ಲಿಯವರೆಗೆ ಅವರಿಬ್ಬರ ಮದುವೆಯ ವಿಚಾರ ತಿಳಿದಿರಲಿಲ್ಲ.

 ಮಗಳ ಬೆನ್ನೆಲುಬಾಗಿ ನಿಂತ

ನೇಹಾ ಹಾಗೂ ಅಂಗದ್ ದಿಡೀರ್ ವಿವಾಹಕ್ಕೆ ಹಲವು ಊಹಾಪೋಹಗಳು ಹರಿದಾಡಿದವು. ಇವರಿಬ್ಬರದ್ದು ಪ್ರೇಮ ವಿವಾಹ. ಮದುವೆಗೆ ಮುಂಚೆಯೇ ನೇಹಾ ಗರ್ಭಧರಿಸಿದ್ದರಿಂದ, ಈ ರೀತಿ ತರಾತುರಿಯಲ್ಲಿ ಮದುವೆಯಾಗಿದ್ದಾರೆ ಎಂಬಿತ್ಯಾದಿ ಗಾಳಿಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಯಿತು. ಈ ಬಗ್ಗೆ ದೊಡ್ಡ ಗುಲ್ಲಾಗುತ್ತಿದ್ದೆ ಮಗಳ ಸಹಾಯಕ್ಕೆ ಬಂದ ತಂದೆ, ಆ ಥರದ ಯಾವುದೇ ಸುದ್ದಿ ಇಲ್ಲ. ಆತುರವಾಗಿ ಮದುವೆಯಾಗಿದ್ದಾರೆ ಎಂಬ ಕಾರಣ ನೀಡಿ ಇಂತಹ ಆರೋಪ ಮಾಡುವುದು ಸರಿಯಲ್ಲ. ಅಂತಹ ಯಾವುದೇ ರೀತಿಯ ವಿಚಾರವೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಜನ ಸುಖಾಸುಮ್ಮನೆ ಏನೆನೋ ಮಾತನಾಡಿ ಗಾಳಿಸುದ್ದಿಗಳನ್ನು ಹರಡುತ್ತಿದ್ದಾರೆ ಎಂದಿದ್ದರು.ಅಂಗದ್ ಮಾತುಗಳು

ಈ ನಡುವೆ ಮಾಧ್ಯಮವೊಂದಕ್ಕೆ ಬಂದಿರು ವರದಿಯನ್ವಯ, ದುಪಿಯಾ ಹಾಗೂ ಅಂಗದ್ ಪೋಷಕರಾಗುತ್ತಿದ್ದು, ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಈ ಸಿಹಿಸುದ್ದಿಯನ್ನು ಬಹಿರಂಗಪಡಿಸಲಿದ್ದಾರೆ ಎನ್ನಲಾಗುತ್ತಿದೆ. ಅಂಗದ್ ಬೇಡಿ ತಮ್ಮ ಸೂರಮ್ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದು, ದುಪಿಯಾ ಅವರ ಬಗ್ಗೆ ಎದ್ದಿರುವ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಆದರೆ ಈ ಬಗ್ಗೆ ದುಪಿಯಾ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಂಗದ್, ನಮಗೆ ಮನೆಯೊಂದನ್ನು ಖರೀದಿ ಮಾಡಬೇಕಿದೆ. ಕೊಂಚ ಹಣ ಸಂಪಾದನೆ, ಕೆಲಸದಲ್ಲಿ ಸೆಟಲ್ ಆದ ಬಳಿಕವಷ್ಟೇ ನಾವು ಕೌಟುಂಬಿಕ ಜೀವನ ನಡೆಸುವ ಬಗ್ಗೆ ನಿರ್ಧಾರ ಮಾಡಿರುವುದಾಗಿ ನಟ ತಿಳಿಸಿದ್ದರು.

Tags

Related Articles