ಸುದ್ದಿಗಳು

ಶಾಲಾ ಶಿಕ್ಷಕಿಗೆ ಫ್ಲರ್ಟ್ ಮಾಡಿದ್ದ ಬಾಲಿವುಡ್ ಬ್ಯಾಡ್ ಬಾಯ್

ಮುಂಬೈ, ಆ.17: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಿನಿಮಾಗಳು ಇಂದಿಗೂ ಹವಾ ಸೃಷ್ಟಿ ಮಾಡುತ್ತವೆ. ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆ ಮೂಡಿಸುವ ಈ ಸಿನಿಮಾಗಳು ಸಾಕಷ್ಟು ಯಶಸ್ಸನ್ನು ಪಡೆಯುತ್ತವೆ. ಈಗಾಗಲೇ ಅನೇಕ ವೈಯಕ್ತಿಕ ವಿಚಾರಗಳನ್ನು ಹೇಳಿಕೊಂಡಿರುವ ಸಲ್ಮಾನ್ ಇದೀಗ ಇನ್ನೊಂದು ವಿಚಾರ ಹೇಳುವುದರ ಮೂಲಕ ಸುದ್ದಿಯಾಗಿದ್ದಾರೆ.  ಶಾಲಾ ದಿನಗಳಲ್ಲಿ ಶಿಕ್ಷಕಿಯೊಂದಿಗೆ ಫ್ಲರ್ಟ್ ಮಾಡುತ್ತಿದ್ದೆ ಎಂದು ಸಲ್ಮಾನ್ ಹೇಳಿಕೊಂಡಿದ್ದಾರೆ.

ವಾರಾಂತ್ಯದಲ್ಲಿ ಬರುವ ‘ದಸ್ ಕಾ ದಮ್ – ದುಮ್ಡಾರ್’  ನ ಚಿತ್ರಿಕರಣದ ವೇಳೆ ಸಲ್ಲು ತನ್ನ ಫ್ಲರ್ಟಿಂಗ್ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ. ನೀವು ಶಾಲಾ ಶಿಕ್ಷಕಿಯ ಜೊತೆ ಪ್ರೀತಿಯ ಬಲೆಯಲ್ಲಿ ಸಿಲುಕಿಕೊಂಡಿದ್ದಿರಾ ಎಂದು ಇಂಡಿಯನ್ಸ್ ಕಾರ್ಯಕ್ರಮದಲ್ಲಿ ಕೇಳಿದಾಗ ಸಲ್ಲು, ತನ್ನ ಶಾಲೆಯಲ್ಲಿ ಒಬ್ಬರು ಶಿಕ್ಷಕಿ ಮೇಲೆ ಪ್ರೀತಿ ಹುಟ್ಟಿತ್ತು. ಅಷ್ಟೇ ಅಲ್ಲದೆ ಅವರನ್ನು ನಾನು ತನ್ನ ಸೈಕಲ್‍ನಲ್ಲಿ ಮನೆಯವರೆಗೂ ಡ್ರಾಪ್ ಮಾಡುತ್ತಿದ್ದೆ. ಈ ಮೂಲಕ ಅವರು ನನ್ನ ಮುಂದೆ ಕುಳಿತುಕೊಳ್ಳುವಂತೆ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಯಾರೊಬ್ಬರು ಶಾಲೆಯಲ್ಲಿ ಶಿಕ್ಷಕಿಯ ಜೊತೆ ಪ್ರೀತಿಯಲ್ಲಿ ಬೀಳದೆ ಇರಲು ಸಾಧ್ಯವಿಲ್ಲ. ಅದನ್ನು ಹೆಚ್ಚು ಜನರು ಒಪ್ಪಿಕೊಳ್ಳುವುದಿಲ್ಲ. ಆದರೆ ನಾನು ನನ್ನ ಶಿಕ್ಷಕಿ ಜೊತೆ ತುಂಬಾ ಫ್ಲರ್ಟ್ ಮಾಡುತ್ತಿದ್ದೆ ಎಂದು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ಸದ್ಯ ಸಲ್ಲು ‘ದಸ್ ಕಾ ದಮ್- ದುಮ್ಡಾರ್’  ವಾರಾಂತ್ಯದ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದು, ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

Tags