ಸುದ್ದಿಗಳು

ತಾಯಿನಾಡಿನ ಬಗ್ಗೆ ಟ್ವಿಟ್ ಮಾಡಿದ ‘ಸಲ್ಲು’…!

ನಟ ಸಲ್ಮಾನ್ ಖಾನ್, ಅನೇಕ ಸಿನಿಮಾಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ ನಟ. ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಸಾಕಷ್ಟು ಜನ ಮನ ಗೆದ್ದ ಈ ನಟ, ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗ್ತಾನೇ ಇರುತ್ತಾರೆ. ನಿನ್ನೆಯಷ್ಟೆ ಕಾರ್ ವಿಚಾರಕ್ಕೆ ಸುದ್ದಿಯಾಗಿದ್ದ ಈ ನಟ ಇದೀಗ ತಾಯಿನಾಡಿನ ಬಗ್ಗೆ ಮಾತನಾಡಿದ್ದಾರೆ.

ಸಲ್ಮಾನ್ ಖಾನ್ ಟ್ವೀಟ್

ಇದೀಗ ದೇಶ ಪ್ರೇಮ ವಿಚಾರವಾಗಿ ಟ್ವಿಟ್ ಮಾಡೋ ಮೂಲಕ ಸಾಮಾಜಿಕ ಜಾಲತಾಣದಲ್ಲೊಂದು ಹವಾ ಎಬ್ಬಿಸಿದ್ದಾರೆ. ‘ಭಾರತ ಸ್ವಚ್ಛವಾಗಿದ್ರೆ ನಾವು ಫಿಟ್ ಆಗಿರ್ತಿವಿ – ನಾವು ಫಿಟ್ ಆಗಿದ್ರೆ ಇಂಡಿಯಾ ಫಿಟ್ ಆಗಿರುತ್ತೆ ಆಗ ನಿನಗೆ ಏನು ಅನ್ನಿಸುತ್ತೋ ಅದನ್ನು ಮಾಡು ಆದ್ರೆ ನೀನು ಹುಟ್ಟಿದ ತಾಯಿನಾಡಿಗೆ ಮಾತ್ರ ತೊಂದರೆ ಕೊಡಬೇಡ’  ಅಂತಾ ತಮ್ಮ ಟ್ಟಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ದೇಶದ ಸ್ವಚ್ಛತೆಯ ಬಗ್ಗೆ, ಇಂಡಿಯಾದ ಫಿಟ್ನೆಸ್ ಬಗ್ಗೆ ಟ್ವೀಟ್ ಮಾಡಿರುವ ಸಲ್ಲು ಕೊನೆಯಲ್ಲಿ ‘ನಿನಗೆ ಏನು ಅನ್ನಿಸುತ್ತೋ ಅದನ್ನು ಮಾಡು ಆದ್ರೆ ನೀನು ಹುಟ್ಟಿದ ತಾಯಿನಾಡಿಗೆ ತೊಂದರೆ ಮಾಡಬೇಡ, ಕೆಡುಕು ಮಾಡಬೇಡ’ ಅಂತಾ ಟ್ವೀಟಿಸುವ ಮೂಲಕ ದೇಶದ ಬಗ್ಗೆ ಅವರಿಗಿರುವ ಅಭಿಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಟ್ವೀಟ್ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

Tags

Related Articles