ಸುದ್ದಿಗಳು

ಕೇವಲ 75ರೂ. ಸಂಭಾವನೆಯಿಂದ ಚಿತ್ರವೊಂದಕ್ಕೆ 60 ಕೋಟಿಗೇರಿದ ಸಲ್ಲೂ ಅಂದಾಜು ಆಸ್ತಿ1480 ಕೋಟಿ

ಮೂರು ದಶಕಗಳ ಸಿನಿಪಯಣ- ಹಳೆನೆನಪುಗಳನ್ನು ಮೆಲುಕು ಹಾಕಿದ ಸಲ್ಲು

ಸಲ್ಲೂ ಎಂಬ ಸಾಧಕನಿಗೊಂದು ಸಲ್ಯೂಟ್

ಕೇವಲ 75ರೂ. ಸಂಭಾವನೆಯಿಂದ 60 ಕೋಟಿಗೇರಿದ ಸಲ್ಲೂ ಅಂದಾಜು  ಆಸ್ತಿ1480 ಕೋಟಿ

ಮುಂಬೈ, ಆ-27:  ಅತೀ ಹೆಚ್ಚು ಸಂಭಾವಣೆ ಪಡೆಯುವ ನಟರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ನಟ ಸಲ್ಮಾನ್ ಖಾನ್, ಬಾಲಿವುಡ್ ಗೆ ಬಂದು ಬರೋಬ್ಬರಿ 30 ವರ್ಷಗಳು ಸಂದಿದೆ. 1988ರ “ಬಿವಿ ಹೊ ತೊ ಐಸಿ “, ಚಿತ್ರದಲ್ಲಿ ಪೋಷಕರ ಪಾತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಸಲ್ಮಾನ್ ಖಾನ್ ಅವರ ಸಿನಿ ಪಯಣ ಕೇವಲ ಹೂವಿನ ಹಾಸಿಗೆಯಾಗಿರಲಿಲ್ಲ. ಆರಂಭದ ದಿನಗಳಲ್ಲಿ ತಮ್ಮ ನಟನೆಯಿಂದ ಹಲವು ಟೀಕೆಗಳನ್ನು ಎದುರಿಸಿದ್ದ ಸಲ್ಮಾನ್ ಖಾನ್ ಗೆ ನಟನೆಯೇ ಗೊತ್ತಿಲ್ಲ ಎಂದು ಅದೆಷ್ಟೋ ಮಂದಿ ಮೂಗು ಮುರಿದಿದ್ದರು. ಆರಂಭದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದ ಸಲ್ಮಾನ್ ಖಾನ್ ಅವರ ವೃತ್ತಿಬದುಕಕನ್ನು ಕೈ ಹಿಡಿದ ಚಿತ್ರವೇ, 1989ರಲ್ಲಿ ಬಿಡುಗಡೆಯಾದ “ಮೈನೆ ಪ್ಯಾರ್ ಕಿಯಾ ಸಿನಿಮಾ”. ಈ ಚಿತ್ರದ ಅಭಿನಯಕ್ಕಾಗಿ ಸಲ್ಮಾನ್ ಖಾನ್ ಗೆ ಮೊದಲಫಿಲಂ ಫೇರ್ ಪ್ರಶಸ್ತಿಯೂ ದೊರೆಯಿತು.

ಹಳೆಯ ನೆನಪುಗಳ ಮೆಲುಕು ..: ಅತೀಹೆಚ್ಚು ಸಂಭಾವಣೆ ಪಡೆಯುತ್ತಿದ್ದ ಈ ನಟ ಮೊದಲ ಸಂಭಾವನೆ ಕೇವಲ 75ರೂಪಾಯಿಗಳಾಗಿತ್ತಂತೆ. ಈ ಕುರಿತಂತೆ ನಟ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು ಹಾಗೆ ಸುಮ್ಮನೆ ಗೆಳೆಯರೊಂದಿಗೆ ಸೇರಿ ತಾಜ್ ಹೋಟೆಲ್ ನಲ್ಲಿ ನಡೆದ ನೃತ್ಯ ಸಮಾರಂಭವೊಂದಲ್ಲಿ ಪಾಲ್ಗೊಂಡಿದ್ದಕ್ಕಾಗಿ ನನಗೆ 75 ರೂಪಾಯಿ ನೀಡಲಾಗಿತ್ತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದರು.  ಕ್ಯಾಂಪ ಕೋಲಾ ಪಾನೀಯಾ  ಬ್ರಾಂಡ್ ಗೆ ಆಯ್ಕೆಯಾದ ನನಗೆ 750 ರೂಪಾಯಿ ಸಂಭಾವನೆ ಸಿಕ್ಕಿತು. ಕಾಲಾನಂತರ ಇದು 1500 ರೂಪಾಯಿಗಳಾಯಿತು. “ಮೈನೆ ಪ್ಯಾರ್ ಕಿಯಾ ” ಚಿತ್ರದ ಅಭಿನಯಕ್ಕಾಗಿ ನನಗೆ 31 ಸಾವಿರ ರೂಪಾಯಿ ಸಂಭಾವನೆ ದೊರೆಯಿತು. ಬಳಿಕ 75 ಸಾವಿರ ರೂಪಾಯಿಗೆ ಏರಿಕೆಯಾಯಿತು. ಆದಾದ ಬಳಿಕ ಆಗಿದ್ದೆಲ್ಲವೂ ಇತಿಹಾಸ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದರು ಸಲ್ಮಾನ್ ಖಾನ್ .

Tags