ಬಾಲ್ಕನಿ ವಾರ ಭವಿಷ್ಯಸುದ್ದಿಗಳು

ಸನ್ನಿಲಿಯೋನ್ ಭಾವಚಿತ್ರ…ಉತ್ತರ ಪ್ರದೇಶ ಮತದಾರರ ಪಟ್ಟಿಯಲ್ಲಿ …!

ಯಾರದ್ದೋ ಬದಲಿಗೆ ಸನ್ನಿಲಿಯೋನ್ ಫೋಟೋ ಬಂದಿರೋದು ಸದ್ಯದ ಚರ್ಚೆ..!

ಮುಂಬೈ, ಆ.25: ಇತ್ತೀಚೆಗೆ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳ ಜೊತೆಗೆ ಅವರ ಫೋಟೋಗಳು ಕೂಡ ಮಾಯವಾಗುತ್ತಿರೋದನ್ನು ನಾವು ನೋಡಿದ್ದೇವೆ. ಇದೀಗ ನಟಿ ಸನ್ನಿ ಲಿಯೋನ್ ಫೋಟೋ ಉತ್ತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ಬಂದಿದೆ. ಯಾರದ್ದೋ ಬದಲಿಗೆ ಸನ್ನಿಲಿಯೋನ್ ಫೋಟೋ ಬಂದಿರೋದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಬಾಲಿವುಡ್ ಮಾದಕ ಚೆಲುವೆಯ ಫೋಟೋ ಮುದ್ರಣಗೊಂಡಿದೆ.ಇನ್ನಿ ಮತದಾರರ ಪಟ್ಟಿಯಲ್ಲಿ ಸನ್ನಿ ಲಿಯೋನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಡಾಟಾ ಎಂಟ್ರಿ ಆಪರೇಟರ್ ವಿಷ್ಣುದೇವ್ ವರ್ಮಾ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಆದೇಶಿಸಿದ್ದಾರೆ. ರಾಜ್ಯದಲ್ಲಿ ಸ್ಥಳೀಯ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಮತದಾರರ ಪಟ್ಟಿಯ ಪರಿಶೀಲನೆ ನಡೆಸುವ ವೇಳೆ ಈ ಎಡವಟ್ಟು ಬೆಳಕಿಗೆ ಬಂದಿದೆ.

ಮತದಾರರ ಪಟ್ಟಿಯಲ್ಲಿ ಎಲ್ಲ ಮಾಹಿತಿ ಸರಿಯಾಗಿದ್ದು, ಫೋಟೋಗಳು ಮಾತ್ರ ಅದಲು ಬದಲುಗೊಂಡಿವೆ. ವಿವೇಕಾನಂದ ಕಾಲೋನಿ ನಿವಾಸಿ ದುರ್ಗಾವತಿ ಎಂಬ ಮಹಿಳೆಯ ಫೋಟೋದಲ್ಲಿ ಸನ್ನಿ ಲಿಯೋನ್ ಚಿತ್ರ ಪ್ರಿಂಟ್ ಆಗಿದೆ. ಕುನ್ವಾರ್ ಅಂಕುರ್ ಸಿಂಗ್ ಎಂಬ ಹೆಸರಿನ ಮುಂದೆ ಜಿಂಕೆ, ಮಾಜಿ ಸಚಿವ ನಾರದ್ ರೈ ಹೆಸರಿನ ಮುಂದೆ ಆನೆಯ ಫೋಟೋ ಹಾಕಲಾಗಿದೆ.

Tags

Related Articles