ಸುದ್ದಿಗಳು

ಸಲ್ಮಾನ್ ಖಾನ್ ರವರ ಮೊದಲ ಸಿನಿಮಾ ಸಂಭಾವನೆ ಎಷ್ಟು ಗೊತ್ತೇ?

ಸಾಮಾನ್ಯವಾಗಿ ನಾವೆಲ್ಲಾ ಸಿನಿಮಾದಲ್ಲಿ ನಟನೆ ಮಾಡೋ ನಟ-ನಟಿಯರಿಗೆ ಲಕ್ಷಗಟ್ಟಲೆ ಸಂಭಾವನೆ ಇರುತ್ತೆ ಎಂದುಕೊಂಡಿರುತ್ತೇವೆ. ಆದ್ರೆ ಅವರ ಸಂಭಾವನೆ ಎಷ್ಟು ಎನ್ನೋದು ಅವರಿಗೆ ಮಾತ್ರ ಗೊತ್ತು. ಅದರಲ್ಲೂ ಮೊದಲ ಸಿನಿಮಾಗಳಲ್ಲಿ ಪಡೆದ ಸಂಭಾವನೆ ಮುಖ್ಯವಾಗಿರುತ್ತೆ. ಇದೀಗ ಸಲ್ಮಾನ್ ಖಾನ್ ಮೊದಲ ಸಿನಿಮಾಗೆ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ..

ಹೌದು, ಸಲ್ಲು ಕೋಟ್ಯಾಂತರ ಅಭಿಮಾನಿಗಳ ಆರಾದ್ಯ ದೇವರು. ವಿಭಿನ್ನ ನಟನೆಯ ಮೂಲಕವೇ ಸಾಕಷ್ಟು ಹೆಸರು ಪಡೆದಿರೋ ಸಲ್ಮಾನ್‌ ಗೆ ಹುಡುಗರಿಗಿಂತ ಹುಡುಗಿಯರೇ ಫ್ಯಾನ್ಸ್ ಜಾಸ್ತಿ. ಇವರಿಗೇನಪ್ಪಾ ಲಕ್ಷಗಟ್ಟಲೆ ಸಂಭಾವನೆ ಕೊಟ್ಟಿರ‍್ತಾರೆ  ಅಂದುಕೊಂಡವರು ಒಮ್ಮೆ ಇತ್ತ ನೋಡಿ. ಸಲ್ಲು ಮೊಟ್ಟ ಮೊದಲ ಬಾರಿಗೆ ಸಿನಿಮಾಕ್ಕಾಗಿ ಅವರು ತೆಗೆದುಕೊಂಡಿದ್ದು ೭೫ ರೂ. ಅಂತೆ ಅಂದ್ರೆ ನೀವು ನಂಬಲೇ ಬೇಕು.

ಸಲ್ಲು ಮೊದಲ ಬಾರಿಗೆ ಸಿನಿಮಾ ಒಂದರಲ್ಲಿ ನಟಿಸಿದ್ದು ನಾಯಕ-ನಾಯಕಿ ಹಿಂದೆ ಹೆಜ್ಜೆ ಹಾಕುವ ಡ್ಯಾನ್ಸರ್ ಆಗಿ. ಆ ಸಿನಿಮಾದಲ್ಲಿ ಇವರಿಗೆ ೭೫ ರೂ. ಸಂಭಾವನೆ ನೀಡಲಾಗಿತ್ತಂತೆ. ನಂತರ ಜಾಹೀರಾತು ಒಂದರಲ್ಲಿ ಅಭಿನಯಿಸಿದ್ದ ಅವರಿಗೆ ಸಿಕ್ಕಿದ್ದು ೭೫೦ ರೂ. ‘ಬಿವಿ ಹೋತೋ ಐಸಿ’ ಚಿತ್ರದಲ್ಲಿ ನಟಿಸಿದ್ದಕ್ಕೆ ೧,೫೦೦ ರೂ. ಗಳಿಕೆ ಮಾಡಿಕೊಂಡಿದ್ದರಂತೆ ಸಲ್ಲು. ‘ಮೈನೆ ಪ್ಯಾರ್ ಕಿಯಾ’ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ  ಪಡೆದ ಸಲ್ಮಾನ್, ೩೧ ಸಾವಿರ ರೂ. ಸಂಭಾವನೆ ಜೇಬಿಗೆ ಇಳಿಸಿಕೊಂಡಿದ್ದರಂತೆ. ಹೀಗೆ ಬಣ್ಣದ ಬದುಕು ಆರಂಭಿಸಿದ್ದರು ಸಲ್ಲು. ನಂತರ ಅವರ ಸಂಭಾವನೆ ಹೆಚ್ಚುತ್ತಲೇ ಇದೆ.

ಸಲ್ಮಾನ್ ಖಾನ್ ಬಾಲಿವುಡ್ ನಲ್ಲಿ ಅತ್ಯಂತ ಬೇಡಿಕೆಯ ಹಾಗೂ ಶ್ರೀಮಂತ ನಟರಲ್ಲೊಬ್ಬರು. ಅವರು ಸಿನಿಮಾಕ್ಕಾಗಿ ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದುಕೊಳ್ಳುತ್ತಾರೆ. ಅಲ್ಲದೆ, ಹಿಂದಿಯ ‘ಬಿಗ್ ಬಾಸ್ ೧೧’ ನಡೆಸಿಕೊಡಲು ಸಲ್ಲು ೧೧ ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎಂಬ ಮಾತಿದೆ. ಆದರೆ ಈ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ.

ಸಲ್ಲು ಅನೇಕ ಸಂಸ್ಥೆಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಟೈಗರ್ ಜಿಂದಾ ಹೈ’ ಚಿತ್ರ  ೩೦೦ ಕೋಟಿ ಕ್ಲಬ್ ಸೇರಿತ್ತು. ಸದ್ಯ ‘ರೇಸ್ ೩’  ‘ಭರತ್’  ‘ದಬಂಗ್ ೩’  ಚಿತ್ರಗಳಲ್ಲಿ ಅವರು ನಟಿಸುತ್ತಿದ್ದು, ಈ ಚಿತ್ರಗಳಿಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *